ಯುಗಾದಿ, ರಂಜಾನ್‌ ಹಬ್ಬದ ಖರೀದಿ ಜೋರು

KannadaprabhaNewsNetwork | Published : Mar 30, 2025 3:00 AM

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮೇಲ ಮುಸ್ಲಿಂರ ಪವಿತ್ರ ಮಾಸ ರಂಜಾನ್‌ ಉಪವಾಸ ವೃತಾಚರಣೆ ಸಂಪನ್ನಗೊಳ್ಳಲು ಒಂದೇ ದಿನ ಬಾಕಿ ಇದ್ದು, ಈದ್‌ ಉಲ್‌ಫಿತ್ರ್‌ ಹಬ್ಬ ಸೋಮವಾರ ನಡೆಯುವ ಸಾಧ್ಯತೆ ಇದೆ. ರಂಜಾನ್‌ ಹಬ್ಬದ ದಿನ ಸಮಾಜ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಢುತ್ತಾರೆ.

ಕನ್ನಡಪ್ರಭ ವಾರ್ತೆ ಆಲಮೇಲ

ಮುಸ್ಲಿಂರ ಪವಿತ್ರ ಮಾಸ ರಂಜಾನ್‌ ಉಪವಾಸ ವೃತಾಚರಣೆ ಸಂಪನ್ನಗೊಳ್ಳಲು ಒಂದೇ ದಿನ ಬಾಕಿ ಇದ್ದು, ಈದ್‌ ಉಲ್‌ಫಿತ್ರ್‌ ಹಬ್ಬ ಸೋಮವಾರ ನಡೆಯುವ ಸಾಧ್ಯತೆ ಇದೆ. ರಂಜಾನ್‌ ಹಬ್ಬದ ದಿನ ಸಮಾಜ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಢುತ್ತಾರೆ.

ಹಿಂದುಗಳ ವರ್ಷದ ಮೊದಲ ಹಬ್ಬ ಯುಗಾದಿ ಹಾಗೂ ರಂಜಾನ್‌ ಹಬ್ಬದ ನಿಮಿತ್ತ ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಅಂಗಡಿ ಮುಂಗಟ್ಟುಗಳು ತುಂಬಿ ಹೋಗಿದ್ದು, ಖರೀದಿ ಭರಾಟೆ ಜೋರಾಗಿದೆ. ಹಬ್ಬಕ್ಕೆ ಹೊಸ ಬಟ್ಟೆಗಳ, ಸಾಮಗ್ರಿಗಳ ಖರೀದಿಯಲ್ಲಿ ಮುಳುಗಿದ್ದಾರೆ. ಹೀಗಾಗಿ, ಪಟ್ಟಣಗಳ ಪ್ರತಿಯೊಂದು ಮಾರುಕಟ್ಟೆಯೂ ಇದೀಗ ಜನರಿಂದ ತುಂಬಿ ತುಳುಕುತ್ತಿವೆ. ಪಟ್ಟಣದ ಪ್ರಮುಖ ಅಂಗಡಿಗಳಲ್ಲಿ ಬಟ್ಟೆ ಖರೀದಿ ಹೆಚ್ಚಿದೆ. ಮಹಿಳೆಯರು, ಮಕ್ಕಳು ಹಾಗೂ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯ ಮೊರೆ ಹೋಗಿದ್ದಾರೆ. ಹಬ್ಬದ ಪ್ರಯುಕ್ತ ಹಣ್ಣಿನ ಬೆಲೆಯೂ ಹೆಚ್ಚಿದ್ದು, ಆದರೂ ಖರೀದಿ ಜೋರಾಗಿ ನಡೆಯುತ್ತಿದೆ. ಪಟ್ಟಣದ ಶಾಹಿ ಮಸಜೀದ ಸುತ್ತಮುತ್ತಲಿ ಮತ್ತು ಹಳೇ ಕರ್ನಾಟಕ ರಸ್ತೆ, ಮೇನ್‌ ಬಜಾರ ಶುಕ್ರವಾರ ಮತ್ತು ಶನಿವಾರ ವ್ಯಾಪಾರ ವಹಿವಾಟು ಜೋರಾಗಿತ್ತು. ಅಲ್ಲದೇ ಬಟ್ಟೆಗಳು ಹಾಗೂ ಚಪ್ಪಲಿ ಮತ್ತಿತರ ದಿನಬಳಕೆ ವಸ್ತುಗಳ ಮಾರಾಟ ಸಹ ಹೆಚ್ಚಾಗಿದೆ. ಕೆಲ ಅಂಗಡಿಗಳಲ್ಲಿ ಹಬ್ಬದ ಡಿಸ್ಕೌಂಟ್ ಇರುವುದರಿಂದ ಜನ ಮುಗಿ ಬಿದ್ದು ಖರೀದಿಸುತ್ತಿದ್ದಾರೆ. ಹೀಗಾಗಿ, ಮಾರುಕಟ್ಟೆಗಳು ಕಳೆಗಟ್ಟಿವೆ.

ಶುರಕುಂಬಾ ಎಂಬ ವಿಶೇಷ ಖಾದ್ಯವನ್ನು ಹಬ್ಬದ ದಿನ ತಯಾರಿಸಲು ಜನ ಈಗಾಗಲೇ ಹಾಲಿನ ಡೈರಿಯವರಿಗೆ ಮುಂಗಡವಾಗಿ ಹಾಲು ಬುಕ್ ಮಾಡಿದ್ದಾರೆ. ಶುರಕುಂಬಾ ರಂಜಾನ ಹಬ್ಬಕ್ಕಾಗಿ ತಯಾರು ಮಾಡುವ ಒಂದು ವಿಶೇಷ ರುಚಿಕರ ಖಾದ್ಯ.ಇದನ್ನು ತಯಾರಿಸಿ ಆತ್ಮೀಯ ರೀತಿ ತಮ್ಮ ತಮ್ಮ ಮನೆಗಳಿಗೆ ಆಹ್ವಾನಿಸಿ ಹಿಂದು -ಮುಸ್ಲಿಂ ಎಂಬ ಭೇದಭಾವವಿಲ್ಲದೇ ಆತಿಥ್ಯವನ್ನು ನೀಡುತ್ತಾರೆ.

Share this article