ಸಂಗಮೇಶ್ವರ ಪಿಎಸಿಎಸ್‌ಗೆ ₹79.40 ಲಕ್ಷ ಲಾಭ: ಕೆ.ಎಲ್.ಚಂದ್ರೇಗೌಡ

KannadaprabhaNewsNetwork |  
Published : Sep 26, 2025, 01:00 AM IST
೨೪ಬಿಹೆಚ್‌ಆರ್ ೨: ಬಾಳೆಹೊನ್ನೂರು ಸಮೀಪದ ಸಂಗಮೇಶ್ವರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಬಾಳೆಹೊನ್ನೂರು, ಸಂಗಮೇಶ್ವರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹70.40 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ ತಿಳಿಸಿದರು.

ಸಂಗಮೇಶ್ವರಪೇಟೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪಿಎಸಿಎಸ್‌ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಂಗಮೇಶ್ವರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹70.40 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ ತಿಳಿಸಿದರು.ಸಂಗಮೇಶ್ವರಪೇಟೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪಿಎಸಿಎಸ್‌ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಗಮೇಶ್ವರಪೇಟೆ ಪಿಎಸಿಎಸ್ ಕಳೆದ ಸಾಲಿನಲ್ಲಿ ₹189.26 ಕೋಟಿಗಳ ವಾರ್ಷಿಕ ವಹಿವಾಟು ನಡೆಸಿ ₹70.40 ಲಕ್ಷದ ಲಾಭದಲ್ಲಿ ಮುನ್ನಡೆದಿದೆ. ಸಂಘದ ಷೇರುದಾರರಿಗೆ ಲಾಭಾಂಶದಲ್ಲಿ ಶೇ.8 ಡಿವಿಡೆಂಟ್ ನೀಡಲಾಗಿದೆ. ₹15.90 ಕೋಟಿ ಸಾಲವನ್ನು ರೈತರಿಗೆ ನೀಡಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹250 ಕೋಟಿ ವಾರ್ಷಿಕ ವಹಿವಾಟನ್ನು ಸಂಘ ನಡೆಸಬೇಕೆಂಬ ಯೋಜನೆ ಹಾಕಿಕೊಳ್ಳ ಲಾಗಿದೆ. ರೈತರಿಗೆ ಸಂಘದಲ್ಲಿ ಬಹುಪಯೋಗಿ ಸಾಲ ಸೌಲಭ್ಯ ನೀಡುತ್ತಿದ್ದು, ಅವುಗಳನ್ನು ಪಡೆದು ರೈತರು ತಾವು ಆರ್ಥಿಕ ಸ್ವಾವಲಂಬಿ ಗಳಾಗುವುದರೊಂದಿಗೆ, ಸಂಘವನ್ನು ಅಭಿವೃದ್ಧಿಯಲ್ಲಿ ಮುನ್ನಡೆಸಬೇಕು.ಸಂಘದ ಮುಖಾಂತರ 1502 ಸದಸ್ಯರು ಸರ್ಕಾರದ ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಸಂಘ ಮುಂದಿನ ದಿನಗಳಲ್ಲಿ ಷೇರುದಾರರು, ರೈತರು ಹಾಗೂ ಗ್ರಾಹಕರಿಗೆ ವಿವಿಧ ಯೋಜನೆ, ಸೌಲಭ್ಯ ಆರಂಭಿಸುವ ಕಾರ್ಯ ಯೋಜನೆ ಹಮ್ಮಿಕೊಂಡಿದೆ. ಸದಸ್ಯರ ಅನುಕೂಲಕ್ಕಾಗಿ ಈಗಾಗಲೇ ಸಂಘದಲ್ಲಿ ಛಾಪಾ ಕಾಗದ, ಪಹಣಿ ಮತ್ತು ಇಸಿ ವಿತರಣೆ ಸೌಲಭ್ಯ ಸಹ ಆರಂಭಿಸಲಾಗಿದೆ.ಸಹಕಾರ ಸಂಘಗಳ ಜೀವಾಳ ಷೇರುದಾರರು ಹಾಗೂ ರೈತರಾಗಿದ್ದು, ಅವರುಗಳಿಗಾಗಿಯೇ ಸಂಘ ಕಾರ್ಯನಿರ್ವಹಿ ಸುತ್ತದೆ. ಸಂಘದಲ್ಲಿನ ಸೌಲಭ್ಯವನ್ನು ಸದಸ್ಯರು ಉಪಯೋಗಿಸಿಕೊಳ್ಳುವುದರೊಂದಿಗೆ ಅವುಗಳನ್ನು ಸದ್ಭಳಕೆ ಆಗುವಂತೆ ನೋಡಿಕೊಳ್ಳಬೇಕಿದೆ. ಸಂಘದ ಆರ್ಥಿಕ ಚಟುವಟಿಕೆ ಉತ್ತಮ ಸ್ಥಿತಿಯಲ್ಲಿ ನಡೆಯಲು ಸದಸ್ಯರು ನಿರಂತರ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಂಘದ ಉಪಾಧ್ಯಕ್ಷ ಯು.ಇ.ಜಯರಾಮ್, ನಿರ್ದೇಶಕರಾದ ಬಿ.ಎನ್.ಸೋಮೇಶ್‌ಗೌಡ, ಯು.ವಿ.ವಿನಯ್, ಡಿ.ಬಿ.ಚಂದ್ರಹಾಸ್, ಗೋಕುಲ್ ಎಸ್.ಸಾರಗೋಡು, ಎ.ಕೆ.ಸುಧಾಕರ, ಕೆ.ಎ.ಮಹಮ್ಮದ್, ಎಂ.ಎ.ಪಲ್ಲವಿ ಗಣೇಶ್, ಬಿ.ಎನ್.ಸುಚಿತ್ರ ಮಹೇಶ್, ಸುಂದರೇಶ್, ಬಿ.ಸಿ.ಕುಟ್ಟಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಕೆ.ಆರ್.ರಘು, ಸಂಘದ ಸಿಇಓ ಜಿ.ಬಾಲಕೃಷ್ಣ ಮತ್ತಿತರರು ಹಾಜರಿದ್ದರು.೨೪ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಸಂಗಮೇಶ್ವರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆ.ಎಲ್.ಚಂದ್ರೇಗೌಡ, ಯು.ಇ.ಜಯರಾಮ್, ಬಿ.ಎನ್.ಸೋಮೇಶ್, ಯು.ವಿ.ವಿನಯ್ ಮತ್ತಿತರರು ಇದ್ದರು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ