ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿಸಿದ ಸಂಗನಗೌಡ

KannadaprabhaNewsNetwork |  
Published : Dec 24, 2024, 12:46 AM IST
೨೩ಬಿಎಸ್ವಿ೦೧- ಬಸವನಬಾಗೇವಾಡಿ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಯಾದ ನಂತರ ಜರುಗಿದ ಸಮಾರಂಭದಲ್ಲಿ ಹಿರಿಯ ರೈತಬಾಂಧವರ ಪಾದಪೂಜೆ ನೆರವೇರಿಸುವ ಜೊತೆಗೆ ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಂಗನಗೌಡ ಚಿಕ್ಕೊಂಡ, ಉಪಾಧ್ಯಕ್ಷರಾಗಿ ಮಲ್ಲೇಶಿ ಕಡಕೋಳ ಅವಿರೋಧ ಆಯ್ಕೆಯಾಗಿದ್ದಾರೆ. ಸೋಮವಾರ ಜರುಗಿದ ಅಧ್ಯಕ್ಷ ಸ್ಥಾನಕ್ಕೆ ಸಂಗನಗೌಡ ಚಿಕ್ಕೊಂಡ, ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಶಿ ಕಡಕೋಳ ನಾಮಪತ್ರ ಸಲ್ಲಿಸಿದ್ದರು. ಎರಡು ಸ್ಥಾನಗಳಿಗೆ ಒಬ್ಬಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಂಗನಗೌಡ ಚಿಕ್ಕೊಂಡ, ಉಪಾಧ್ಯಕ್ಷರಾಗಿ ಮಲ್ಲೇಶಿ ಕಡಕೋಳ ಅವಿರೋಧ ಆಯ್ಕೆಯಾಗಿದ್ದಾರೆ. ಸೋಮವಾರ ಜರುಗಿದ ಅಧ್ಯಕ್ಷ ಸ್ಥಾನಕ್ಕೆ ಸಂಗನಗೌಡ ಚಿಕ್ಕೊಂಡ, ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಶಿ ಕಡಕೋಳ ನಾಮಪತ್ರ ಸಲ್ಲಿಸಿದ್ದರು. ಎರಡು ಸ್ಥಾನಗಳಿಗೆ ಒಬ್ಬಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಸಂಗನಗೌಡ ಚಿಕ್ಕೊಂಡ ಕಳೆದ ಐದು ಅವಧಿಯಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಆರನೇ ಅವಧಿಗೆ ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆ ಆಗಿರುವುದು ಸಂಘದ ಇತಿಹಾಸದಲ್ಲಿಯೇ ಮೈಲಿಗಲ್ಲಾಗಿದೆ.ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹಿರಿಯ ರೈತ ಬಾಂಧವರಿಗೆ ಪಾದಪೂಜೆ ಮಾಡುವ ಮೂಲಕ ತಮ್ಮ ಅಧಿಕಾರ ಸ್ವೀಕರಿಸಿದ್ದು ಗಮನ ಸೆಳೆಯಿತು. ಸಂಗನಗೌಡ ಚಿಕ್ಕೊಂಡ ಅಧ್ಯಕ್ಷರಾದ ನಂತರ ಒಂದಿಲ್ಲೊಂದು ವಿಶೇಷವಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ರೈತರ ಮೇಲಿನ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ರೈತ ಬಾಂಧವರ ಸಹಕಾರದಿಂದ ಚುನಾವಣೆಯಲ್ಲಿ ನಾವು ಅಭೂತಪೂರ್ವ ಯಶಸ್ಸನ್ನು ಪಡೆದುಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ರೈತರ ಜೀವನಾಡಿಯಾಗಿ, ರೈತರ ಸಹಕಾರಿಯಾಗಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವದು. ರೈತ, ಯೋಧ ದೇಶದ ಎರಡು ಕಣ್ಣುಗಳಿದ್ದಂತೆ. ಯೋಧ ದೇಶದ ಗಡಿ ಕಾಯುವ ಮೂಲಕ ದೇಶದ ರಕ್ಷಣೆ ಮಾಡಿದರೆ, ರೈತರು ಇಡೀ ಜಗತ್ತಿಗೆ ಅನ್ನ ನೀಡುತ್ತಾನೆ. ದೇಶದ ಯಾವುದೇ ಪ್ರತಿಷ್ಠಿತ ಕಂಪನಿ, ಕಾರ್ಖಾನೆ ಒಬ್ಬ ವ್ಯಕ್ತಿಗೆ ಉದ್ಯೋಗವನ್ನು ನೀಡಬಹುದು. ಆದರೆ, ಅಗತ್ಯವಿರುವ ಅನ್ನವನ್ನು ನೀಡಲು ಸಾಧ್ಯವಿಲ್ಲ. ರೈತ ಬಾಂಧವರು ಜಗತ್ತಿನ ಪ್ರತಿಯೊಬ್ಬರಿಗೂ ಅನ್ನ ನೀಡುತ್ತಾರೆ. ಇವರಿಬ್ಬರೂ ಸದಾ ಸ್ಮರಣೀಯರು ಎಂದು ಶ್ಲಾಘಿಸಿದರು.ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಂಗನಗೌಡ ಚಿಕ್ಕೊಂಡ ಸಂಘದ ಅಧ್ಯಕ್ಷರಾದ ನಂತರ ರೈತಪರ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ರೈತರಿಗೆ ನೆರವಾಗುತ್ತಿದ್ದಾರೆ. ನೂತನವಾಗಿ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಿರುವದು ರೈತ ದಿನವಾಗಿರುವದು ವಿಶೇಷ. ಈ ದಿನದಂದು ರೈತರಿಗೆ ಪಾದಪೂಜೆ ಮಾಡಿರುವುದು ಮಾದರಿ ಕಾರ್ಯ. ಇವರಿಂದ ರೈತ ಬಾಂಧವರಿಗೆ ಹೆಚ್ಚು ಯೋಜನೆಗಳು ಬರುವಂತಾಗಲೆಂದು ಆಶಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷ ಮಲ್ಲೇಶಿ ಕಡಕೋಳ, ನೂತನ ನಿರ್ದೇಶಕರಾದ ಈರಣ್ಣ ವಂದಾಲ, ಶ್ರೀಶೈಲ ಪರಮಗೊಂಡ, ಮುತ್ತು ಉಕ್ಕಲಿ, ಸಂಗನಬಸಪ್ಪ ನಾಯ್ಕೋಡಿ, ಸುರೇಶ ನಾಯಕ, ನಿಂಗಪ್ಪ ಕುಳಗೇರಿ, ಮಹಾದೇವಿ ಮೈಲೇಶ್ವರ, ಜಯಶ್ರೀ ಪಾಟೀಲ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಚಿಕ್ಕೊಂಡ, ಸಿಬ್ಬಂದಿಗಳಾದ ಅಶೋಕ ಡೋಮನಾಳ, ಮಹೇಶ ಅವಟಿ, ಶ್ರೀಶೈಲ ಮುರಾಳ, ವಿಶ್ವನಾಥ ಕಡಕೋಳ, ಶಂಕರಲಿಂಗ ಅಡಗಿಮನಿ, ಪವಾಡೆಪ್ಪ ಹೆಬ್ಬಾಳ ಇತರರು ಇದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಚಿಕ್ಕೊಂಡ ಸ್ವಾಗತಿಸಿ, ನಿರೂಪಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ