ಹುಲ್ಲೇಹಳ್ಳಿಯಲ್ಲಿ ಗ್ರಾಮ ಸ್ಪಂದನಕ್ಕೆ ಉತ್ತಮ ಸ್ಪಂದನೆ: ಜಿ.ಪ್ರಕಾಶ್

KannadaprabhaNewsNetwork |  
Published : Dec 24, 2024, 12:46 AM IST
22 ಬೀರೂರು 1ಬೀರೂರು ಸಮೀಪದ ಹುಲ್ಲೇಹಳ್ಳಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ಗ್ರಾಮ ಸ್ಪಂದನ ಸಭೆಯಲ್ಲಿ ನೋಡಲ್ ಅಧಿಕಾರಿ ಜಿ.ಪ್ರಕಾಶ್ ಮಾತನಾಡಿದರು.ಗ್ರಾ.ಪಂ.ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಲಕ್ಷö್ಮಣ್, ಸೇರಿದಂತೆ ಮತ್ತಿತರರು ಇದ್ದರು. | Kannada Prabha

ಸಾರಾಂಶ

ಬೀರೂರುಸರ್ಕಾರದ ಹೊಸ ಕಾರ್ಯಕ್ರಮವಾದ ಗ್ರಾಮ ಸ್ಪಂದನದಲ್ಲಿ ತಮ್ಮ ಸಮಸ್ಯೆಗಳಿಗೆ ಸ್ಥಳೀಯ ಹಂತದಲ್ಲೇ ಪರಿಹಾರ ಕಂಡುಕೊಳ್ಳಬಹುದು ಎಂದು ನೋಡಲ್ ಅಧಿಕಾರಿ ಜಿ.ಪ್ರಕಾಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಬೀರೂರು

ಸರ್ಕಾರದ ಹೊಸ ಕಾರ್ಯಕ್ರಮವಾದ ಗ್ರಾಮ ಸ್ಪಂದನದಲ್ಲಿ ತಮ್ಮ ಸಮಸ್ಯೆಗಳಿಗೆ ಸ್ಥಳೀಯ ಹಂತದಲ್ಲೇ ಪರಿಹಾರ ಕಂಡುಕೊಳ್ಳಬಹುದು ಎಂದು ನೋಡಲ್ ಅಧಿಕಾರಿ ಜಿ.ಪ್ರಕಾಶ್ ತಿಳಿಸಿದರು.ಹೋಬಳಿಯ ಹುಲ್ಲೇಹಳ್ಳಿ ಗ್ರಾಪಂ ಆವರಣದಲ್ಲಿ ನಡೆದ ಗ್ರಾಮ ಸ್ಪಂದನದಲ್ಲಿ ಮಾತನಾಡಿ, ಇತ್ತೀಚಿಗೆ ಜಮೀನು, ನಿವೇಶನಗಳ ಸಮಸ್ಯೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಇತ್ಯರ್ಥವಾಗದೆ ಸಚಿವರ ಹಂತದವರೆಗೆ ತಲುಪುತ್ತಿದೆ. ಕಂದಾಯ ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಗ್ರಾಮಸ್ಪಂದನ ಕಾರ್ಯಕ್ರಮವನ್ನು ಹೋಬಳಿ ಹಂತದಲ್ಲಿ ಪ್ರತಿ ತಿಂಗಳ 3ನೇ ಶನಿವಾರ ನಡೆಸಲಾಗುತ್ತಿದೆ ಎಂದರು.

ಗ್ರಾಪಂ ಉಪಾಧ್ಯಕ್ಷ ಹುಲ್ಲೇಹಳ್ಳಿ ಲಕ್ಷ್ಮಣ್ ಮಾತನಾಡಿ, ಈ ಸಭೆಯನ್ನು ಸರ್ಕಾರ ಸ್ಥಳೀಯ ಮಟ್ಟದಲ್ಲೇ ರೈತರು ಮತ್ತು ಸಾರ್ವಜನಿಕರ ಸಮಸ್ಯೆ ನಿವಾರಿಸಲು ಏರ್ಪಡಿಸಲಾಗಿದ್ದು, ನಿಮ್ಮಗಳ ಪರವಾಗಿ ಗ್ರಾಪಂನಲ್ಲಿದ್ದು ತಾಲೂಕು ಮಟ್ಟದ ಅಧಿಕಾರಿಗಳು ಸಹ ಪಾಲ್ಗೊಂಡು ಸಮಸ್ಯೆ ನಿವಾರಿಸಿಕೊಳ್ಳಲು ನಮ್ಮ ಸಹಕಾರವಿದೆ ಎಂದರು.ಹುಲ್ಲೇಹಳ್ಳಿ ಗ್ರಾಪಂ ಅಧ್ಯಕ್ಷ ರುದ್ರಪ್ಪ ಮಾತನಾಡಿ, ನಮ್ಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಜನರು ತಮ್ಮ ಸಾರ್ವಜನಿಕರ ಸಮಸ್ಯೆಗಳೇನೆ ಇದ್ದರು ಸಭೆಯಲ್ಲಿ ತನ್ನಿ ಆಗ ಮಾತ್ರ ಪರಿಹಾರ ಮಾಡಲು ಸಾಧ್ಯ. ನಿಮ್ಮಸಮಸ್ಯೆಗಳಿಗೆ ಧ್ವನಿಯಾಗಲು ಗ್ರಾಪಂ ತಯಾರಾಗಿದೆ. ಕಾರ್ಯ ನಿರ್ವಹಿಸುವ ಯಾವುದೇ ಅಧಿಕಾರಿಯಾದರೂ ಸಾರ್ವಜನಿಕರೊಂದಿಗೆ ಶಾಂತಿ, ಮತ್ತು ಸಮಾಧಾನದಿಂದ ಉತ್ತರ ನೀಡಿದರೇ ಅವರ ಅರ್ಧ ಸಮಸ್ಯೆ ಬಗೆಹರಿದಂತಾಗುತ್ತದೆ ಎಂದರು.ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು. ಸಭೆಯಲ್ಲಿ ಇಸ್ವತ್ತು, ಗ್ರಾಮಠಾಣಾ ಮತ್ತಿತರ ಸಮಸ್ಯೆಗಳ ಬಗೆಹರಿಸುವಂತೆ ರೈತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗ್ರಾಪಂ ಸದಸ್ಯರಾದ ಸೌಭಾಗ್ಯ ಮುದಿಯಪ್ಪ, ನರಸಿಂಹಮೂರ್ತಿ, ನಾಗಮ್ಮ, ಮಲ್ಲಾಭೋವಿ, ಪಿಡಿಒ ಮಂಜುನಾಥ್, ಪಶುವೈಧ್ಯಾಧಿಕಾರಿ ಮೋಹನ್, ಕಂದಾಯ ಅಧಿಕಾರಿ ಶ್ರೀನಿವಾಸ್, ನವೀನ್, ಕೇಷಿ ಅಧಿಕಾರಿ ಸೋಮಲಿಂಗಪ್ಪ ಸೇರಿದಂತೆ ಹುಲ್ಲೇಹಳ್ಳಿ ಗ್ರಾಮಸ್ಥರು ಇದ್ದರು.22 ಬೀರೂರು 1ಬೀರೂರು ಸಮೀಪದ ಹುಲ್ಲೇಹಳ್ಳಿ ಗ್ರಾಪಂ ನಲ್ಲಿ ನಡೆದ ಗ್ರಾಮ ಸ್ಪಂದನ ಸಭೆಯಲ್ಲಿ ನೋಡಲ್ ಅಧಿಕಾರಿ ಜಿ.ಪ್ರಕಾಶ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಲಕ್ಷ್ಮಣ್ ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ