ಹುಬ್ಬಳ್ಳಿ:
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕೊಪ್ಪಳದ ಸಂಗಣ್ಣ ಕರಡಿ ಅವರ ಜತೆ ಖುದ್ದು ನಾನೇ ಮಾತನಾಡಿರುವೆ. ಅವರು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಬಂಡಾಯ ಸ್ಪರ್ಧೆಯನ್ನೂ ಮಾಡಲ್ಲ ಎಂಬ ಭರವಸೆ ಕೊಟ್ಟಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದೇನೆ ಅಷ್ಟೇ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.ಮಾಧುಸ್ವಾಮಿ ಜತೆ ಮಾತುಕತೆ:ಮಾಧುಸ್ವಾಮಿ ಅವರ ಜತೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಮಾತನಾಡುತ್ತಿದ್ದಾರೆ. ಈಶ್ವರಪ್ಪ ಅವರೊಂದಿಗೆ ಪಕ್ಷದ ವರಿಷ್ಠರೇ ಮನವೊಲಿಕೆಗೆ ಚರ್ಚೆ ನಡೆಸಿದ್ದಾರೆ. ನಾನೂ ಈ ಹಿಂದೆ ಮಾತನಾಡಿದ್ದೆ. ಭಿನ್ನಮತ ನಿಲ್ಲಲ್ಲ. ಅಂತಿಮವಾಗಿ ಎಲ್ಲವು ಸುಖಾಂತ್ಯ ಕಾಣಲಿದೆ ಎಂದು ಹೇಳಿದರುಕೇಸ್ ಕೈಬಿಡಲು ಪ್ರಯತ್ನ:
ಮಹದಾಯಿ ಹೋರಾಟಗಾರ ಕುತುಬುದ್ದೀನ್ ಖಾಜಿ ಅವರನ್ನು ರಾಜ್ಯ ರೈಲ್ವೆ ಪೊಲೀಸರು ಬಂಧಿಸಿರಬೇಕು. ಏನಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಕೇಸ್ ಕೈಬಿಡಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.ರಾಜ್ಯ ರೈಲ್ವೆ ಪೊಲೀಸರನ್ನು ರಾಜ್ಯ ಸರ್ಕಾರವೇ ನೇಮಕ ಮಾಡಿಕೊಂಡಿರುತ್ತದೆ. ಅವರು ಕೇಂದ್ರ ರೈಲ್ವೆ ಪೊಲೀಸರಲ್ಲ. ಬಹುಶಃ ಪ್ರಕರಣ ದಾಖಲಿಸಿ, ವಿಚಾರಣೆಗೆ ಹಾಜರಾಗದೇ ಇರಬಹುದು. ಹಾಗಾಗಿ ಬಂಧಿಸಿರಬಹುದು. ಪ್ರಕರಣ ಕೈಬಿಡಲು ಪ್ರಯತ್ನ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.