ಸಂಗೀತ ಕಲಾ ಸೇವಾ ಟ್ರಸ್ಟ್ ಕ್ಯಾಲೆಂಡರ್‌ ಬಿಡುಗಡೆ

KannadaprabhaNewsNetwork |  
Published : Dec 05, 2025, 12:15 AM IST
4ಎಚ್ಎಸ್ಎನ್5 : ಬೇಲೂರಿನ  ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ವತಿಯಿಂದ ನೂತನ ವಾರ್ಷಿಕ ಕ್ಯಾಲೆಂಡರ್‌ನ್ನು ಭಾನುವಾರ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಬೊಮ್ಮೇಗೌಡ ಮಾತನಾಡಿ ಹೊಯ್ಸಳ ನಾಡು ಕಲೆ, ಸಂಸ್ಕೃತಿ ಮತ್ತು ಸಾಹಿತ್ಯದ ನಾಡಾಗಿದ್ದು, ಈ ಪ್ರದೇಶವು ಅನೇಕ ಗಣ್ಯ ಕಲಾವಿದರ ಜನ್ಮಸ್ಥಳವಾಗಿದೆ. ಇಂತಹ ಪವಿತ್ರ ಭೂಮಿಯಲ್ಲಿ ಯುವ ಪೀಳಿಗೆಗೆ ನಾದಸ್ವರ, ಡೋಲು, ತಾಳಮದ್ದಳೆ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಯನ್ನು ಪರಿಚಯಿಸಿ ಬೆಳೆಸುತ್ತಿರುವ ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್‌ ಸೇವೆಯನ್ನು ಪ್ರಶಂಸಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಪಟ್ಟಣದ ಸುಮುಖ ರೆಸಿಡೆನ್ಸಿಯಲ್ಲಿ ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ವತಿಯಿಂದ ನೂತನ ವಾರ್ಷಿಕ ಕ್ಯಾಲೆಂಡರ್‌ನ್ನು ಭಾನುವಾರ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಬೊಮ್ಮೇಗೌಡ ಮಾತನಾಡಿ ಹೊಯ್ಸಳ ನಾಡು ಕಲೆ, ಸಂಸ್ಕೃತಿ ಮತ್ತು ಸಾಹಿತ್ಯದ ನಾಡಾಗಿದ್ದು, ಈ ಪ್ರದೇಶವು ಅನೇಕ ಗಣ್ಯ ಕಲಾವಿದರ ಜನ್ಮಸ್ಥಳವಾಗಿದೆ. ಇಂತಹ ಪವಿತ್ರ ಭೂಮಿಯಲ್ಲಿ ಯುವ ಪೀಳಿಗೆಗೆ ನಾದಸ್ವರ, ಡೋಲು, ತಾಳಮದ್ದಳೆ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಯನ್ನು ಪರಿಚಯಿಸಿ ಬೆಳೆಸುತ್ತಿರುವ ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್‌ ಸೇವೆಯನ್ನು ಪ್ರಶಂಸಿಸಿದರು.ಸಮಾಜ ಸೇವಕ ಬಿ.ಎಂ. ಸಂತೋಷ್ ಮಾತನಾಡಿ ಇತ್ತೀಚಿನ ದಿದಲ್ಲಿ ಸಂಪ್ರದಾಯಿಕ ವಾದ್ಯಗಳು, ಜನಪದ ನೃತ್ಯ ಕಲೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಯುವ ಪೀಳಿಗೆಗೆ ತರಬೇತಿ ನೀಡಿ ಅವರನ್ನು ಮುಖ್ಯ ವೇದಿಕೆಗೆ ತರುತ್ತಿರುವುದು ಶ್ಲಾಘನೀಯ, ಪ್ರತಿವರ್ಷದಂತೆ ಈ ವರ್ಷವೂ ಸಹ ಮಾಸಿಕ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತಿದೆ ಎಂದರು. ಮಂಗಳವಾದ್ಯ ಸೇವಾ ಟ್ರಸ್ಟ್ ಅದ್ಯಕ್ಷ ನರಸಿಂಹಸ್ವಾಮಿ ಮಾತನಾಡಿ, ನಮ್ಮ ಸೇವಾ ಟ್ರಸ್ಟ್ ವತಿಯಿಂದ ಹಲವಾರು ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದೇವೆ. ಹೊಯ್ಸಳ ಉತ್ಸವ ನೆನಗುದಿಗೆ ಬಿದ್ದ ಹಿನ್ನೆಲೆಯಲ್ಲಿ ಶಿಲ್ಪಕಲೆ ಸಾಹಿತ್ಯ ಕ್ಷೇತ್ರ ತವರೂರು ಬೇಲೂರಿನಲ್ಲಿ ತ್ಯಾಗರಾಜರ ಪುರಂದರದಾಸರ ಹಾಗು ಕನಕದಾಸರ ಮಹೋತ್ಸವವನ್ನು ಈ ಬಾರಿ ವಿಶೇಷವಾದ ನಾದಸ್ವರದ ವಿದ್ವಾಂಸರಿಂದ ಅದ್ಧೂರಿ ಕಾರ್ಯಕ್ರಮ ಆಯೋಜಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಮಾ.ನ ಮಂಜೇಗೌಡ, ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್, ಜಯಕರ್ನಾಟಕ ಸಂಘಟನೆಯ ತಾಲೂಕು ಅದ್ಯಕ್ಷ ರಾಜಣ್ಣ, ವಕೀಲ ಚಂದ್ರು, ಅಬ್ದುಲ್ ಖಾದರ್, ಆರ್‌ ಎಸ್ ಮಹೇಶ್, ಸುಮಿತ್ರ, ಅನಿಲ್ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ವೃಕ್ಷಥಾನ್ ಹೆರಿಟೇಜ್ ರನ್-2025
ಡಾ.ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯ ಮಾದರಿ