12 ರಂದು ಸಿತಾರ್‌-ಹಿಂದೂಸ್ತಾನಿ ಶಾಸ್ತ್ರೀಯ ಗಾಯನ

KannadaprabhaNewsNetwork |  
Published : Jul 09, 2026, 01:30 AM IST
ಸಿತಾರ್‌-ಹಿಂದೂಸ್ತಾನಿ ಶಾಸ್ತ್ರೀಯ ಗಾಯನ | Kannada Prabha

ಸಾರಾಂಶ

ಸಂಗೀತ ಭಾರತಿ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ಜು.೧೨ರಂದು ಸಂಜೆ ೫.೩೦ಕ್ಕೆ ನಗರದ ಪುರಭವನದಲ್ಲಿ ‘ಬ್ಯಾಂಕ್‌ ಆಫ್ ಮಹಾರಾಷ್ಟ್ರ ರಿಮ್ಜಿಮ್’ ಎಂಬ ಸಿತಾರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಗೀತ ಭಾರತಿ ಫೌಂಡೇಶನ್‌ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ತಿಳಿಸಿದರು.

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ಜು.೧೨ರಂದು ಸಂಜೆ ೫.೩೦ಕ್ಕೆ ನಗರದ ಪುರಭವನದಲ್ಲಿ ‘ಬ್ಯಾಂಕ್‌ ಆಫ್ ಮಹಾರಾಷ್ಟ್ರ ರಿಮ್ಜಿಮ್’ ಎಂಬ ಸಿತಾರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಗೀತ ಭಾರತಿ ಫೌಂಡೇಶನ್‌ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಪೂರ್ವಾರ್ಧದಲ್ಲಿ ಪ್ರಸಿದ್ಧ ಸಿತಾರ್ ವಾದಕ ಬೆಂಗಳೂರಿನ ಸಂಜೀವ್ ಕೊರ್ತಿ ಅವರಿಂದ ಸಿತಾರ್ ವಾದನ ನಡೆಯಲಿದ್ದು, ಉತ್ತರಾರ್ಧದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಪಂ.ಶಶಾಂಕ್ ಮಕ್ತೇದಾರ್ ಗೋವಾ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ. ತಬ್ಲಾದಲ್ಲಿ ಗೋವಾದ ಮಾಯಾಂಕ್ ಬೆಡೆಕರ್ ಹಾಗೂ ಹಾರ್ಮೋನಿಯಂನಲ್ಲಿ ಶಿರಸಿಯ ಗುರುಪ್ರಸಾದ್ ಹೆಗಡೆ ಸಾಥ್ ನೀಡಲಿದ್ದಾರೆ ಎಂದರು.

ಭಾರತದ ಸಮೃದ್ಧ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಸಂಗೀತ ಭಾರತಿ ಫೌಂಡೇಶನ್ ೨೦೨೬ರಲ್ಲಿ ಹಮ್ಮಿಕೊಂಡಿರುವ ಶಾಸ್ತ್ರೀಯ ಸಂಗೀತದ ಏಳು ಕಾರ್ಯಕ್ರಮಗಳ ಸರಣಿಯ ಮೊದಲ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಂಗೀತ ಭಾರತಿ ಫೌಂಡೇಶನ್‌ನ ಕಾರ್ಯದರ್ಶಿ ಡಾ.ಉಷಾಪ್ರಭಾ ಎನ್. ನಾಯಕ್, ಟ್ರಸ್ಟಿಗಳಾದ ಅಂಕುಶ್ ಎನ್. ನಾಯಕ್, ಮುರುಳೀಧರ್ ಜಿ. ಶೆಣೈ, ಖಜಾಂಚಿ ಕರುಣಾಕರ ಬಳ್ಕೂರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಸ್ತಿ ಮೆಚ್ಚಿದ ಮಹತ್ವದ ಕವಿ ಮಜಿಬೈಲು: ಕುಕ್ಕುವಳ್ಳಿ
ದಾಸ್ ಪ್ರಮೋಷನ್ಸ್ ನವೀಕೃತ ಕೇಂದ್ರ ಕಚೇರಿ ಉದ್ಘಾಟನೆ