ಕನ್ನಡಪ್ರಭ ವಾರ್ತೆ ಕಾಗವಾಡ
ಮಾಜಿ ಸಚಿವ ಶ್ರೀಮಂತ ಪಾಟೀಲ ಏರ್ಪಡಿಸಿದ ಎತ್ತಿನಗಾಡಿ ಮತ್ತು ಕುದುರೆ ಗಾಡಿ ಶರ್ಯತ್ತುಗಳ ವಿಜೇತರಿಗೆ ಕೆಂಪವಾಡದ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.ಮಾಜಿ ಸಚಿವರು ಹಾಗೂ ಕಾಗವಾಡದ ಮಾಜಿ ಶಾಸಕ ಶ್ರೀಮಂತ ಪಾಟೀಲ ಅವರು ಇತ್ತೀಚಿಗೆ ಗಡಿಭಾಗದಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಚಂದ್ರಪ್ಪವಾಡಿಯಲ್ಲಿ ಶಿವನೇರಿ ಕಿತಾಬ ವತಿಯಿಂದ ಭವ್ಯ ಎತ್ತಿನ ಗಾಡಿ ಮತ್ತು ಕುದುರೆ ಗಾಡಿ ಶರ್ಯತ್ತುಗಳನ್ನು ಆಯೋಜಿಸಲಾಗಿತ್ತು.ಶರ್ಯತ್ತುಗಳಲ್ಲಿ ವಿಜೇತರಾದವರಿಗೆ ಅಥಣಿ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ (ತಾತ್ಯಾ) ಪಾಟೀಲ ಹಾಗೂ ಯುವ ನಾಯಕರು ಮತ್ತು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಶ್ರೀಮಂತ ಪಾಟೀಲ ಉಪಸ್ಥಿತಿಯಲ್ಲಿ ಜನರಲ್‌ನಲ್ಲಿ ಶರ್ಯತ್ತಿನಲ್ಲಿ ಪ್ರಥಮ ಸ್ಥಾನ ಪಡೆದ ಶಿರೂರ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಹಿಂದಕೇಸರಿ ಹೆಲಿಕಾಪ್ಟರ್ ಬೈಜ್ಯಾ ಮಾಲೀಕ ಬಾಳು ಹಜಾರೆ ಮತ್ತು ಶಿವಾಜಿ ಮೆಟಕರಿ ಅವರ ಸಾಂಗೋಲಾ ರಾಜ್ಯಾ ಎತ್ತು ಪ್ರಥಮ ಸ್ಥಾನ ಪಡೆದು 2 ಬುಲೆಟ್ ಬೈಕ್‌ಗಳನ್ನು ಪಡೆದುಕೊಂಡರು.ದ್ವಿತೀಯ ಸ್ಥಾನಕ್ಕೆ ಎರಡು ಹೊಂಡಾ ಶೈನ್ ಬೈಕ್ ಮತ್ತು ತೃತಿಯ ಬಹುಮಾನ 2 ಎಚ್‌ಎಫ್ ಡೀಲಕ್ಸ್ ಬೈಕ್ ಮತ್ತು ಇನ್ನುಳಿದ ಎತ್ತಿನಗಾಡಿ ಹಾಗೂ ಕುದುರೆ ಗಾಡಿಯ ಶರ್ಯತ್ತುನಲ್ಲಿ ಭಾಗವಹಿಸಿದ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ಹಾಗೂ ಟ್ರೋಫಿಯನ್ನು ವಿತರಣೆ ಮಾಡಲಾಯಿತು.ಈ ಸಮಯದಲ್ಲಿ ಶರ್ಯತ್ತುಗಳ ಆಯೋಜಕರಾದ ಅಪ್ಪಾದಾದಾ ಹಜಾರೆ, ಬೀರಪ್ಪ ಉಗಾರೆ, ಸುಭಾಸ ಅಥಣಿ, ವಿಜಯ ಖನ್ನಿಕುಡೆ, ಅಮಿತ ಪಾಟೀಲ, ಸಿದ್ದಾರ್ಥ ಪಾಟೀಲ, ಮಾರುತಿ ನಿಕ್ಕಂ, ಧನಾಜಿ ಮಾಳಿ, ಮುಖಂಡರಾದ ಕಿರಣ ಯಂದಗೌಡರ, ಉತ್ಕರ್ಷ ಪಾಟೀಲ, ಸಚಿನ ಜಗತಾಪ, ಮಹಾಧವಲ ಯಾದವಾಡೆ, ಏಕನಾಥ ಕಾಳೇಲಿ ಸೇರಿದಂತೆ ಮತ್ತಿತರರ ಮುಖಂಡರು, ಶರ್ಯತ್ತಿನಲ್ಲಿ ವಿಜೇತರಾದ ಸ್ಪರ್ಧಾಳುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಮಾಜಿ ಸಚಿವರು ಹಾಗೂ ಅಥಣಿ ಶುಗರ್ಸ್‌ನ ಅಧ್ಯಕ್ಷರ ಜನ್ಮದಿನದ ಪ್ರಯುಕ್ತ ಶಿವನೇರಿ ಶುಗರ್ಸ್‌ನ ಅಧ್ಯಕ್ಷ ಸುಶಾಂತ ಶ್ರೀಮಂತ ಪಾಟೀಲರು ಶಿವನೇರಿ ಕಿತಾಬ್ ಎಂಬ ಹೆಸರಿನಿಂದ ಭವ್ಯ ಎತ್ತಿನ ಗಾಡಿ ಶರ್ಯತ್ತು ಆಯೋಜನೆ ಮಾಡಿ ಗಡಿಭಾಗದಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದಾರೆ. ಅವರಿಗೆ ನಾವು ಅಭಿನಂದಿಸುತ್ತೇವೆ.
-ಬಾಳು ಹಜಾರೆ, ಮುಖಂಡ.