ಸಂಗೊಳ್ಳಿ ರಾಯಣ್ಣನ ಹೋರಾಟ ಯುವಕರಿಗೆ ಸ್ಫೂರ್ತಿ: ಎಲ್.ರಾಮಕೃಷ್ಣ

KannadaprabhaNewsNetwork |  
Published : Aug 18, 2025, 12:00 AM IST
17ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ಪ್ರಯುಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. | Kannada Prabha

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಮತ್ತು ಛಲ ಮುಖ್ಯ. ಈ ವಿದ್ಯಾರ್ಥಿಗಳು ಅದನ್ನು ಮಾಡಿ ತೋರಿಸಿದ್ದಾರೆ. ಇವರು ಮುಂದೆಯೂ ಇದೇ ರೀತಿ ಸಾಧನೆ ಮಾಡಿ, ಸಮುದಾಯಕ್ಕೆ ಕೀರ್ತಿ ತರಲಿ ಎಂದು ಪ್ರತಿಭಾವಂತರಿಗೆ ಹಾರೈಸಿದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಂಗೊಳ್ಳಿ ರಾಯಣ್ಣ ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟರು, ಅವರ ಧೈರ್ಯ ಮತ್ತು ತ್ಯಾಗವು ಇಂದಿಗೂ ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ಎಲ್.ರಾಮಕೃಷ್ಣ ಹೇಳಿದರು. ಪಟ್ಟಣದ ಕನಕ ಭವನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ‌ ಹಾಗೂ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೀರ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟರಾಗಿದ್ದ ಸಂಗೊಳ್ಳಿ ರಾಯಣ್ಣ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಡಿದರು. ಸಂಗೊಳ್ಳಿ ರಾಯಣ್ಣನ ಹೋರಾಟ ಮತ್ತು ತ್ಯಾಗವು ಇಂದಿಗೂ ಸ್ಮರಣೀಯವಾಗಿದೆ ಮತ್ತು ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಮತ್ತು ಛಲ ಮುಖ್ಯ. ಈ ವಿದ್ಯಾರ್ಥಿಗಳು ಅದನ್ನು ಮಾಡಿ ತೋರಿಸಿದ್ದಾರೆ. ಇವರು ಮುಂದೆಯೂ ಇದೇ ರೀತಿ ಸಾಧನೆ ಮಾಡಿ, ಸಮುದಾಯಕ್ಕೆ ಕೀರ್ತಿ ತರಲಿ ಎಂದು ಪ್ರತಿಭಾವಂತರಿಗೆ ಹಾರೈಸಿದರು.

ಕುರುಬರ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಚೌಡಪ್ಪ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ರಾಯಣ್ಣ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ತಂತ್ರವನ್ನು ಬಳಸಿದರು, ಬ್ರಿಟಿಷರಿಗೆ ಸುಲಭವಾಗಿ ಸೋಲಿಸಲು ಸಾಧ್ಯವಾಗಲಿಲ್ಲ, ಅವರ ಹೋರಾಟ ಮತ್ತು ತ್ಯಾಗವು ಜನರಲ್ಲಿ ದೇಶಪ್ರೇಮ, ಹೋರಾಟದ ಸ್ಫೂರ್ತಿಯನ್ನು ತುಂಬಿತು ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಸಮಾಜದ ಉತ್ತಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಿವ ಕುಮಾರ್, ಸಿ.ಅಪ್ಪಯ್ಯಗೌಡ, ಕಸಾಪ ಅಧ್ಯಕ್ಷ ಆರ್.ಅಶ್ವತ್ಥ್, ವೆಂಕಟಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್,ಉಪ ಪ್ರಾಂಶುಪಾಲರಾದ ಹನುಮಂತ ವಗರ್, ಡಾ ಪ್ರಕಾಶ್, ನಾಗರಾಜ್, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಥ್ಲೂಲ್ಲೂಕು ಅಧ್ಯಕ್ಷ ರಾಜಪ್ಪ,ಕಾರ್ಯದರ್ಶಿ ಎನ್ ನಾಗರಾಜ , ಮಾಜಿ ಪುರಸಭೆ ಅಧ್ಯಕ್ಷೆ ಭಾಗ್ಯಮ್ಮಇದ್ದರು.

PREV

Recommended Stories

ಚಾಲಕನಿಗೆ ಮೂರ್ಛೆ: ನಿಯಂತ್ರಣ ತಪ್ಪಿ 8 ವಾಹನಗಳಿಗೆ ಗುದ್ದಿದ ಬಿಎಂಟಿಸಿ ಬಸ್‌
ಬೆಳಗಾವಿಯಲ್ಲಿ ಕತ್ತಿ ವರ್ಸಸ್ ಜಾರಕಿಹೊಳಿ ಡಿಸಿಸಿ ಸಮರ