ನಮ್ಮ ಸಂಕಲ್ಪ-ವಿಕಸಿತ ಭಾರತ ಯಾತ್ರೆಯ ವಾಹನಕ್ಕೆ ಚಾಲನೆ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಜನ್ ಧನ್ ಯೋಜನೆಯಿಂದ ಒಂದು ಹೆಜ್ಜೆ ಮುಂದೆ ಇಟ್ಟಿರುವ ಮೋದಿ, ಸಮಾಜದ ಅತ್ಯಂತ ವಂಚಿತ ವರ್ಗಗಳನ್ನು ವಿಮೆ, ಪಿಂಚಣಿ ವ್ಯವಸ್ಥೆಯಡಿ ತರಲು ಸಾರ್ವಜನಿಕ ರಕ್ಷಣೆಗೆ ಒತ್ತು ನೀಡಿದರು. ಸೇವಾ ಪ್ರಯೋಜನಗಳನ್ನು ತಲುಪಿಸುವಲ್ಲಿ ಪಾರದರ್ಶಕತೆ ಮತ್ತು ವೇಗ ಜಾರಿಗೊಳಿಸಿದ್ದಾರೆ.

ಕುಕನೂರು: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭವ್ಯ ಭಾರತ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.ತಾಲೂಕಿನ ಮಸಬಹಂಚಿನಾಳದಲ್ಲಿ ನಮ್ಮ ಸಂಕಲ್ಪ-ವಿಕಸಿತ ಭಾರತ ಯಾತ್ರೆಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ಬಡವರ್ಗದ ಜನರ ಮನೆ ಬಾಗಿಲಿಗೆ ತಲುಪಿವೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವಿಕಸಿತಗೊಂಡಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ವಾಹನ ತೆರಳಿ ಫಲಾನುಭವಿಗಳಿಗೆ ಯೋಜನೆಗಳು ತಲುಪಿದ ಮಾಹಿತಿ, ಯೋಜನೆ ಮುಟ್ಟಿಸುವ ಕಾರ್ಯ ಆಗುತ್ತಿದೆ. ಭಾರತದ ಪ್ರತಿ ಪ್ರಜೆಯೂ ಕೇಂದ್ರ ಸರ್ಕಾರದ ಯೋಜನೆಯ ಫಲ ಪಡೆಯಲಿ ಎಂಬುದು ಇದರ ಉದ್ದೇಶ. ಇಂತಹ ಆಡಲಿತ ಸಿಗುವುದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಎಂದರು.ಜನ್ ಧನ್ ಯೋಜನೆಯಿಂದ ಒಂದು ಹೆಜ್ಜೆ ಮುಂದೆ ಇಟ್ಟಿರುವ ಮೋದಿ, ಸಮಾಜದ ಅತ್ಯಂತ ವಂಚಿತ ವರ್ಗಗಳನ್ನು ವಿಮೆ, ಪಿಂಚಣಿ ವ್ಯವಸ್ಥೆಯಡಿ ತರಲು ಸಾರ್ವಜನಿಕ ರಕ್ಷಣೆಗೆ ಒತ್ತು ನೀಡಿದರು. ಸೇವಾ ಪ್ರಯೋಜನಗಳನ್ನು ತಲುಪಿಸುವಲ್ಲಿ ಪಾರದರ್ಶಕತೆ ಮತ್ತು ವೇಗ ಜಾರಿಗೊಳಿಸಿದ್ದಾರೆ ಎಂದರು.ಅಸಂಘಟಿತ ವಲಯಕ್ಕೆ ಸೇರಿದ 42 ಕೋಟಿಗೂ ಹೆಚ್ಚು ಜನರು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ಪಿಂಚಣಿ ಪ್ರಯೋಜನಗಳನ್ನು ಪಡೆಯುತ್ತಿರುವುದು ಇದೇ ಮೊದಲು. 2019ರ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಕೇಂದ್ರ ಸಚಿವ ಸಂಪುಟದ ಮೊದಲ ಸಭೆಯಲ್ಲಿ ವ್ಯಾಪಾರಿಗಳಿಗೆ ಇದೇ ರೀತಿಯ ಪಿಂಚಣಿ ಯೋಜನೆ ಘೋಷಿಸಲಾಯಿತು ಎಂದರು.ಬಡ ಜನರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಲು 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪ್ರಾರಂಭಿಸಲಾಯಿತು. ಕಾರ್ಯಕ್ರಮವು ಬಹುತೇಕ ಮಹಿಳೆಯರ ಹೊಗೆ-ಮುಕ್ತ ಅಡುಗೆಮನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಬದಲಾವಣೆ ತಂದಿದೆ. ಪರಿಣಾಮ 7 ಕೋಟಿ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಸ್ವಾತಂತ್ರ್ಯದ 70 ವರ್ಷಗಳ ನಂತರವೂ ವಿದ್ಯುತ್ ಸಂಪರ್ಕವಿಲ್ಲದ 18,000 ಹಳ್ಳಿಗಳಿಗೆ ವಿದ್ಯುತ್ ನೀಡಲಾಗಿದೆ. ಭಾರತದಲ್ಲಿ ಯಾರೂ ನಿರಾಶ್ರಿತರಾಗಿರಬಾರದು ಎಂದು ಬಯಸುವ ಮೋದಿ ಈ ಗುರಿಯನ್ನು ಸಾಧಿಸಲು 2014 ಮತ್ತು 2019ರ ನಡುವೆ 1.25 ಕೋಟಿ ಮನೆಗಳ ನಿರ್ಮಾಣ ಪೂರ್ಣಗೊಳಿಸಿದ್ದಾರೆ. 2022ರ ವೇಳೆಗೆ ಎಲ್ಲರಿಗೂ ವಸತಿಯ ಕನಸನ್ನು ನನಸಾಗಿಸಲು ಉಳಿದ ಮನೆಗಳ ನಿರ್ಮಾಣವು ವೇಗವಾಗಿ ಪ್ರಗತಿಯಲ್ಲಿದೆ ಎಂದರು.ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಬನ್ನಿಕೊಪ್ಪ, ಗ್ರಾಪಂ ಸದಸ್ಯರು, ಗ್ರಾಮಸ್ಥರು ನಾನಾ ಇಲಾಖೆ ಅಧಿಕಾರಿಗಳಿದ್ದರು.

Share this article