ಸಂಕನಗೌಡರ ಕವನಗಳು‌ ಬದುಕಿನ ಸತ್ಯದ ಪ್ರತಿಬಿಂಬ: ಬಿಸನಳ್ಳಿ

KannadaprabhaNewsNetwork |  
Published : Oct 12, 2026, 02:15 AM IST
ಕಾರ್ಯಕ್ರಮದಲ್ಲಿ ವ್ಯಾಪಾರಸ್ಥ ಅಮೀನಸಾಬ್ ಬಿಸನಳ್ಳಿ ಉಪನ್ಯಾಸ ನೀಡಿದರು. | Kannada Prabha

ಸಾರಾಂಶ

ಡಾ. ವಿ.ಕೆ. ಸಂಕನಗೌಡರ ಕವನಗಳು ಕ್ಲಿಷ್ಟತೆ ಇಲ್ಲದೆ, ಸಾಮಾನ್ಯ ಮನುಷ್ಯನಿಗೂ ಸುಲಭವಾಗಿ ಅರ್ಥವಾಗುವಂತಹ ಜೀವಪರ ದನಿಯನ್ನು ಹೊಂದಿವೆ.

ಕನ್ನಡಪ್ರಭ ವಾರ್ತೆ ಮುಂಡರಗಿಡಾ. ವಿ.ಕೆ. ಸಂಕನಗೌಡರ ಕವನಗಳು ಕ್ಲಿಷ್ಟತೆ ಇಲ್ಲದೆ, ಸಾಮಾನ್ಯ ಮನುಷ್ಯನಿಗೂ ಸುಲಭವಾಗಿ ಅರ್ಥವಾಗುವಂತಹ ಜೀವಪರ ದನಿಯನ್ನು ಹೊಂದಿವೆ. ನಮ್ಮ ದೈನಂದಿನ ಬದುಕಿನ ಸತ್ಯಗಳೇ ಅವರ ಕಾವ್ಯದ ತಿರುಳು ಎಂದು ವ್ಯಾಪಾರಸ್ಥ ಹಾಗೂ ಸಾಹಿತ್ಯಾಸಕ್ತ ಅಮೀನಸಾಬ್ ಬಿಸನಳ್ಳಿ ಹೇಳಿದರು.ಪಟ್ಟಣದ ಜ.ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತಿಗಳ ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಸಾಹಿತಿ ಸಾಹಿತಿ ಡಾ. ವಿ.ಕೆ. ಸಂಕನಗೌಡರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು. ಸಾಮಾನ್ಯವಾಗಿ ಕಾವ್ಯವೆಂದರೆ ಅದಕ್ಕೊಂದು ಕಠಿಣ ಶೈಲಿ ಇರುತ್ತದೆ ಎಂಬ ಭಾವನೆ ಇದೆ. ಆದರೆ ಡಾ. ಸಂಕನಗೌಡರ ಕವನಗಳು ಹಾಗಲ್ಲ. ಗಟಾರು, ಬೀದಿ ದೀಪ, ಚಪ್ಪಲಿ, ಸೂಜಿ-ದಾರ, ಐಸ್‌ ಮಾರುವ ಹುಡುಗ ಹಾಗೂ ಸೊಳ್ಳೆಯಂತಹ ನಿತ್ಯ ಬದುಕಿನ ಅತ್ಯಂತ ಸಾಮಾನ್ಯ ಸಂಗತಿಗಳನ್ನೇ ವಸ್ತುವಾಗಿಸಿಕೊಂಡು, ಅವುಗಳಿಗೆ ಗಾಢವಾದ ತಾತ್ವಿಕ ಅರ್ಥ ತುಂಬಿದ್ದಾರೆ. ಚಪ್ಪಲಿಯು ನಮ್ಮನ್ನು ಹೇಗೆ ಕಾಯುತ್ತದೆ, ಸೂಜಿ-ದಾರ ಹೇಗೆ ಒಡೆದ ಮನಸ್ಸುಗಳನ್ನು ಜೋಡಿಸುವ ಸಂಕೇತವಾಗುತ್ತದೆ ಎಂಬುದನ್ನು ಅವರು ತಮ್ಮ ಕವನಗಳ ಮೂಲಕ ಅತ್ಯಂತ ಮಾರ್ಮಿಕವಾಗಿ ತಿಳಿಸಿದ್ದಾರೆ.ಪುರಸಭೆ ಮಾಜಿ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1979ರ ಆಸುಪಾಸಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಸಂದರ್ಭದಲ್ಲಿ ಮುಂಡರಗಿಗೆ ಆಗಮಿಸಿ, ಇಲ್ಲಿ ವೈದ್ಯರ ಅಗತ್ಯವಿರುವುದನ್ನು ಮನಗಂಡು ಇಲ್ಲಿಯೇ ತಮ್ಮ ವೈದ್ಯ ವೃತ್ತಿ ಆರಂಭಿಸಿದರು. ಪಟ್ಟಣವೂ ಸೇರಿ ಗ್ರಾಮೀಣ ಭಾಗದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಈ ಭಾಗದ ಜನಮಾನಸದಲ್ಲಿ ಬೆರೆತರು. ಮೊದಲಿನಿಂದಲೂ ಸಾಹಿತ್ಯಾಸಕ್ತಿ ಹೊಂದಿದ್ದ ಡಾ.ವಿ.ಕೆ.ಸಂಕನಗೌಡರ ತಮ್ಮ ಬಿಡುವಿಲ್ಲದ ವೈದ್ಯ ವೃತ್ತಿಯ ಮಧ್ಯದಲ್ಲಿಯೂ ಬಿಡುವಿನ ಸಮಯ ಬಳಸಿಕೊಂಡು ಸಾಹಿತ್ಯ ಓದುವುದು, ಕತೆ, ಕವನಗಳನ್ನು ಬರೆಯಲು ಪ್ರಾರಂಭಿಸಿ ಇದೀಗ ಎರಡು ಅಬ್ದುತವಾದ ಕವನ ಸಂಕಲನಗಳನ್ನು ಹೊರ ತಂದಿದ್ದು, ಅವರ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ ಎಂದರು. ಕಸಾಪ ವತಿಯಿಂದ ಸಾಹಿತಿ ಡಾ. ವಿ.ಕೆ. ಸಂಕನಗೌಡರ ಅವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದರು.ತಾಲೂಕಾ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಈಶ್ವರಪ್ಪ ಹಂಚಿನಾಳ, ಎಸ್.ಬಿ. ಕರಿಭರಮಗೌಡರ, ಕೊಟ್ರೇಶ ಅಂಗಡಿ, ಡಾ. ನಿಂಗು ಸೊಲಗಿ, ಎಸ್.ವಿ. ಪಾಟೀಲ, ಸಿ.ಕೆ. ಗಣಪ್ಪನವರ, ವಿ.ಎಸ್. ಪಾಟೀಲ, ಎಂ.ಎಂ. ಹೆಬ್ಬಾಳ, ಸಿ.ವಿ. ಪಾಟೀಲ, ರವಿ ದೇವರಡ್ಡಿ, ಪಾಲಾಕ್ಷಿ ಗಣದಿನ್ನಿ, ಗೌತಮಚಂದ್ ಚೋಪ್ರಾ, ನಾಗರಾಜ ಹೆಗಡಾಳ ಸೇರದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭ ಗಿರಿಯಾ ಕಡ್ಡಿಯವರು ಸಾಹಿತ್ಯ ಭವನಕ್ಕೆ ಅನ್ನದಾನೀಶ್ವರ ಮಠದ 9ನೇ ಪೀಠಾಧಿಪತಿಗಳು ಭಾವಚಿತ್ರ ದೇಣಿಗೆ ನೀಡಿದರು. ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಪಾಟೀಲ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಕಾವ್ಯಕ್ಕೆ ಹೊಸ ಹೊಳಪು ತಂದ ಕವಿ ಬೇಂದ್ರೆ: ಡಾ. ಶಿವಪ್ಪ
ದಸರಾ ಉತ್ಸವ: ದುರ್ಗಾದೌಡ ಕಾರ್ಯಕ್ರಮಕ್ಕೆ ಚಾಲನೆ