ಕನ್ನಡಪ್ರಭ ವಾರ್ತೆ, ತರೀಕೆರೆ
ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ ಎಂದು ಪಟ್ಟಣದ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಡಳಿತ ಅಧಿಕಾರಿ ಅನೂಪ್ ಹೇಳಿದ್ದಾರೆ.ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ಶಾಲಾ ಅವರಣದಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ಸುಗ್ಗಿಯ ಹಬ್ಬದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ದೇಶದ ಬೆನ್ನೆಲುಬು ರೈತರು, ವರ್ಷದ ಮೊದಲನೇ ಮಕರ ಸಂಕ್ರಾಂತಿ ಸುಗ್ಗಿ ಹಬ್ಬ, ರೈತರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದ ಪೈರುಗಳನ್ನು ಕಣದಲ್ಲಿ ರಾಶಿ ಮಾಡಿ, ನಮ್ಮ ಆಹಾರ ಬೆಳೆಯುವ ಭೂಮಿಗೆ ಕೃತಜ್ಞರಾಗಿ, ಒಗ್ಗಟ್ಟಾಗಿರಬೇಕು ಹಾಗೂ ಸಂತೋಷ ಪಡುವ ಉದ್ದೇಶದಿಂದ ವಿಶೇಷ ಪೂಜೆಯೊಂದಿಗೆ ಮನೆಯಲ್ಲಿರುವ, ವರ್ಷಪೂರ್ತಿ ದುಡಿದ ರಾಸುಗಳಿಗೆ ಸಿಂಗರಿಸಿ ಪೂಜಿಸುತ್ತಾರೆ, ಕಿಚ್ಚು ಹಾಯಿಸುವ ಪದ್ದತಿ ಹಿಂದೂ ಸಂಪ್ರದಾಯದ ಸಂಕೇತ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಮಾತನಾಡಿ ಸಂಕ್ರಾಂತಿ ಬಹುಮುಖ್ಯವಾದ ಹಬ್ಬ ಜನಪದ ಮೂಲದ, ಅದರಲ್ಲೂ ರೈತನ ಬದುಕಿಗೆ ಸಂಬಂಧಿಸಿದ ಹಬ್ಬ, ಕೃಷಿ ಎಂಬುದು ಸಂಸ್ಕೃತಿ, ರೈತನ ಜೀವನ, ವಿದ್ಯಾರ್ಥಿಗಳು ಶಿಕ್ಷಣದಿಂದ ಜ್ಞಾನ ಸಂಪಾದಿಸಿದರೂ ಸಂಸ್ಕಾರ ಸಂಪ್ರದಾಯ, ಹಬ್ಬ ಹುಣ್ಣಿಮೆ ತಿಳಿಯಬೇಕು, ಎಳ್ಳು ಬೆಲ್ಲವನ್ನು ತಿಂದು ಒಳ್ಳೆಯ ಮಾತನಾಡಿ ಎಂಬ ಸಂದೇಶ ಸಾರುವುದು ಹಬ್ಬದ ಉದ್ದೇಶವೆಂದು ಹೇಳಿದರು.ವಿದ್ಯಾರ್ಥಿಗಳು ಸಂಪ್ರದಾಯಕ ಉಡುಗೆ ತೊಡುಗೆ ತೊಟ್ಟು ಸಾಂಸ್ಕೃತಿಕ ಸುಗ್ಗಿ ಸಂಭ್ರಮಾಚರಣೆ ಅದ್ಧೂರಿಯಾಗಿ ನಡೆಸಿಕೊಟ್ಟರು. ಸಂಸ್ಥೆಯ ಕಾರ್ಯದರ್ಶಿ ಲೀಲಾ ಸೋಮಶೇಖರಯ್ಯ ಸಂಕ್ರಾಂತಿ ಶುಭಾಶಯ ತಿಳಿಸಿದರು.
ಸಂಸ್ಥೆ ಆಡಳಿತ ಮಂಡಳಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.17ಕೆಟಿಆರ್.ಕೆ.02ಃತರೀಕೆರೆಯಲ್ಲಿ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ಏರ್ಪಡಿಸಿದ್ದ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆ ಅಡಳಿತ ಅಧಿಕಾರಿ ಅನೂಪ್ ನೆರವೇರಿಸಿದರು. ಸಂಸ್ಥೆ ಅಡಳಿತ ಮಂಡಳಿ ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ, ವಿದ್ಯಾರ್ಥಿಗಳು, ಶಿಕ್ಷಕಿಯರು ಭಾಗವಹಿಸಿದ್ದರು.