ನಾಡಿನ ಚಿಕ್ಕ ತಿರುಪತಿ ಎಂದೇ ಹೆಸರಾದ ತಾಲೂಕಿನ ತೆರಕಣಾಂಬಿ ಬಳಿಯ ಹುಲುಗಿನ ಮುರಡಿಯಲ್ಲಿ ವೆಂಕಟರಮಣಸ್ವಾಮಿಯ ಸಂಕ್ರಾಂತಿ ಜಾತ್ರೆ ಜ.೧೫ ರ ಸಂಕ್ರಾಂತಿ ಹಬ್ಬದಂದು ನಡೆಯಲಿದೆ. ಜಾತ್ರೆಯ ಹಿಂದಿನ ೮ ದಿನಗಳಿಂದ ದೇವಸ್ಥಾನದಲ್ಲಿ ಕ್ರಮವಾಗಿ ಅಂಕುರಾರ್ಪಣ, ಧ್ವಜಾರೋಹಣ, ಚಂದ್ರಮಂಡಲಾರೋಹಣ, ಅನಂತ ಪೀಠಾರೋಹಣ, ಪುಷ್ಪ ಮಂಟ ಪಾರೋಹಣ, ಲಕ್ಷ್ಮೀ ಕಲ್ಯಾಣ ಮಹೋತ್ಸವ, ಗಜಾರೋಹಣ ನಡೆಯುತ್ತಿವೆ.
ಗುಂಡ್ಲುಪೇಟೆ: ನಾಡಿನ ಚಿಕ್ಕ ತಿರುಪತಿ ಎಂದೇ ಹೆಸರಾದ ತಾಲೂಕಿನ ತೆರಕಣಾಂಬಿ ಬಳಿಯ ಹುಲುಗಿನ ಮುರಡಿಯಲ್ಲಿ ವೆಂಕಟರಮಣಸ್ವಾಮಿಯ ಸಂಕ್ರಾಂತಿ ಜಾತ್ರೆ ಜ.೧೫ ರ ಸಂಕ್ರಾಂತಿ ಹಬ್ಬದಂದು ನಡೆಯಲಿದೆ. ಜಾತ್ರೆಯ ಹಿಂದಿನ ೮ ದಿನಗಳಿಂದ ದೇವಸ್ಥಾನದಲ್ಲಿ ಕ್ರಮವಾಗಿ ಅಂಕುರಾರ್ಪಣ, ಧ್ವಜಾರೋಹಣ, ಚಂದ್ರಮಂಡಲಾರೋಹಣ, ಅನಂತ ಪೀಠಾರೋಹಣ, ಪುಷ್ಪ ಮಂಟ ಪಾರೋಹಣ, ಲಕ್ಷ್ಮೀ ಕಲ್ಯಾಣ ಮಹೋತ್ಸವ, ಗಜಾರೋಹಣ ನಡೆಯುತ್ತಿವೆ.ಜ.೧೫ ರ ಜಾತ್ರೆಯ ನಂತರ ಶಯನೋತ್ಸವ, ವಸಂತೋತ್ಸವ, ಸಿಂಹವಾನೋತ್ಸವ ಜರುಗಲಿವೆ. ಜಾತ್ರೆಯ ದಿನ ಮದ್ಯಾಹ್ನ ೧೨.೪೦ ರಿಂದ ೧.೩೦ ಗಂಟೆಯೊಳಗೆ ತಹಸೀಲ್ದಾರ್ ಟಿ.ರಮೇಶ್ ಬಾಬು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಜಾತ್ರೆಯ ವಿಶೇಷ ಎಂದರೆ ತಮಿಳುನಾಡು ಹಾಗೂ ಕೇರಳದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಜಾತ್ರೆಗೆ ಜಿಲ್ಲಾ,ತಾಲೂಕು ಕೇಂದ್ರಗಳಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಹುಲುಗಿ ಮುರಡಿ ಬೆಟ್ಟಕ್ಕೆ ಸಾರಿಗೆ ಬಸ್ ಮಾತ್ರ ಪ್ರವೇಶಗುಂಡ್ಲುಪೇಟೆ: ತಾಲೂಕಿನ ಹುಲುಗಿ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಜ.೧೫ ರಂದು ನಡೆದ ಜಾತ್ರೆಗೆ ಸಾರಿಗೆ ಬಸ್ ಹೊರತು ಪಡಿಸಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಬೆಟ್ಟಕ್ಕೆ ಸಾರಿಗೆ ಸಂಸ್ಥೆಯ ಬಸ್‌ಗಳು ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದ್ದು ದ್ವಿಚಕ್ರ, ಕಾರು, ಮಿನಿ ವಾಹನ ಮತ್ತು ಇತರೆ ವಾಹನಗಳಲ್ಲಿ ಬರುವ ಭಕ್ತರು ಬೆಟ್ಟದ ತಪ್ಪಲಿನಲ್ಲಿ ಪಾರ್ಕ್ ಮಾಡಬೇಕು ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಟ್ಟದ ತಪ್ಪಲಿನಿಂದ ಸಾರಿಗ್ ಬಸ್‌ನಲ್ಲಿ ಮಾತ್ರ ತೆರಳಿ ದೇವರ ದರ್ಶನಕ್ಕೆ ಹೋಗಿ ಬರುವ ವ್ಯವಸ್ಥೆ ಮಾಡಲಾಗಿದೆ ಅಲ್ಲದೆ ಜಾತ್ರೆ ದಿನ ಪ್ರಸಾದ ವಿತರಿಸುವ ಭಕ್ತರು ತಹಸೀಲ್ದಾರ್ ರಿಂದ ಅನುಮತಿ ಪಡೆದಿರಬೇಕುಎಂದು ಹೇಳಿದ್ದಾರೆ. ಗೋಪಾಲಸ್ವಾಮಿ ಬೆಟ್ಟದಲ್ಲೂ ವಿಶೇಷ ಪೂಜೆಗುಂಡ್ಲುಪೇಟೆ: ಸಂಕ್ರಾಂತಿ ಹಬ್ಬದ ದಿನದಂದು ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಪಾಲನಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ. ಹೊಸ ವರ್ಷದ ಮೊದಲ ಹಬ್ಬದ ಕಾರಣ ಗೋಪಾಲಸ್ವಾಮಿ ಬೆಟ್ಟಕ್ಕೂ ಹೆಚ್ಚಿನ ಭಕ್ತರು ಆಗಮಿಸುವ ಸಾದ್ಯತೆಯಿದೆ. ಗೋಪಾಲಸ್ವಾಮಿ ಬೆಟ್ಟ ತಪ್ಪಲಿನಿಂದ ಮಾಮೂಲಿನಂತೆ ಇರುವ ಮಿನಿ ಬಸ್ ಓಡಾಟ ನಡೆಸಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.