-ಸ್ಮಾಲ್
--
- ಕಲ್ಯಾಣ ಕರ್ನಾಟಕ ಲೇಖಕರ ಕಾದಂಬರಿ ಆಧಾರಿತ ಚೊಚ್ಚಲ ರಂಗರೂಪ--
ಕನ್ನಡಪ್ರಭ ವಾರ್ತೆ ಕಲಬುರಗಿ
ರಂಗಾಯಣ ರೇಪರ್ಟರಿ ಕಲಾವಿದರು ಅಭಿನಯಿಸಿರುವ ರಾಯಚೂರಿನ ಖ್ಯಾತ ಲೇಖಕರು, ಗಜಲ್ ಕವಿ ಶಾಂತರಸರ ಸಣ್ಣಗೌಡಸಾನಿ ಕಾದಂಬರಿ ರಂಗರೂಪಾಂತರದ ಯಶಸ್ವಿ ಪ್ರಯೋಗ ಪಂಡಿತ ರಂಗ ಮಂದಿರದಲ್ಲಿ ಆ. 10 ಹಾಗೂ 11 ರ 2 ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.
ಧ್ವನಿ- ಬೆಳಕು: ಶಾಂತರಸರ ಸಣ್ಣಗೌಡಸಾನಿ ಕಾದಂಬರಿಯನ್ನು ಕಥೆಗಾರ ಮಹಾಂತೇಶ ನವಲಕಲ್ ರಂಗರೂಪ, ರಾಘವ ಕಮ್ಮಾರ್ ಸಂಗೀತ, ಪ್ರವೀಣ ರೆಡ್ಡಿ ಗುಂಜನಹಳ್ಳಿ ರಂಗಪಠ್ಯ ರಚಿಸಿ ನಿರ್ದೇಶಿಸಿದ್ದಾರೆ. ಶಾಂತರಸರ ಗಜಲ್‌ಗಳನ್ನೇ ಶೇ. 90 ರಷ್ಟು ಬಳಸಿರೋದು ವಿಶೇಷ. ಮೆಹಬೂಬ್ ಜಾನ್ ನಾಟಕದ ಪ್ರಧಾನ ಪಾತ್ರದಲ್ಲಿ ಭಾಗ್ಯಶ್ರೀ ಪಾಳಾ ತನ್ನ ಅಭಿನಯದಿಂದ ಪಾತ್ರಕ್ಕೆ ಜೀವ ತುಂಬಿದ್ದಾಳೆ, ಗಂಗಪ್ಪ ಪಾತ್ರಧಾರಿ ಮಾಹಂತೇಶ ರಾಯಚೂರಿನ ಭಾಷೆಯ ಸೊಗಡಿನ ಅದ್ಭುತ ನಟನಾ ಕೌಶಲ್ಯ ಪ್ರದರ್ಶಿಸಿ ಪ್ರೇಕ್ಷಕರ ಮನದಲ್ಲಿ ಉಳಿಯುತ್ತಾನೆ. ಅಂಬರೀಶ ಪೂಜಾರಿ, ಅಭಿಷೇಕ, ವಾಣಿಶ್ರೀ, ಮಹೇಶ, ಸಾಗರ, ಭೀಮ ಸಾಗರ್, ಅಂಬಿಕಾ, ರಾಜಕುಮಾರ್, ಸಿದ್ದಾರ್ಥರ ಪಾತ್ರಾಭಿನಯ ಮೆಚ್ಚುಗೆ ಪಡಿದಿದೆ. ರಂಗ ಸಜ್ಜಿಕೆ, ಸಂಗೀತ, ಬೆಳಕು, ವಿನ್ಯಾಸಗಳಲ್ಲಿಯೂ ಸಣ್ಣಗೌಡಸಾನಿ ಸೈ ಎನ್ನಿಸಿಕೊಂಡಿದೆ.
ಸಣ್ಣಗೌಡಸಾನಿ: ಕಲ್ಯಾಣ ನಾಡಿನ ಗ್ರಾಮೀಣ ಜಾತಿಗ್ಯಾರ ಆಟದಲ್ಲಿನ ಕಥಾನಕ. ಸಣ್ಣ ಗೌಡಸಾನಿ ಮೇಲನೋಟಕ್ಕೆ ಮೆಹೆಬೂಬ್ ಜಾನ್ ಇವಳ ಕಥೆ ಹೇಳುತ್ತಲೇ ಹಳ್ಳಿಯ ಸಂಸ್ಕೃತಿ ಎತ್ತಿ ತೋರಿಸುತ್ತದೆ. ಹೆಣ್ಣಿಗಾಗಿ ತಮ್ಮದೆಲ್ಲವನ್ನೂ ಪಣಕ್ಕಿಡುವ ಊರವರ ಪೈಪೋಟಿ, ಸೋತಾಗ ಅಲ್ಲಿ ನಡೆವ ಕ್ರೌರ್ಯ, ರಾಜಕೀಯ, ಇದಕ್ಕೆ ಮುಗ್ಧ ಹಳ್ಳಿ ಜೀವಗಳು ತಲ್ಲಣಗೊಳ್ಳುವುದು ಆತಂಕಕಾರಿ. ಸ್ವಾತಂತ್ರ್ಯ ಪೂರ್ವದ ಹೈ- ಕ ನೆಲದ ಹಳ್ಳಿಯೊಂದರ ಬೇರುಗಳಿರುವ ಸಣ್ಣಗೌಡಸಾನಿ ನಾಟಕ ಹಳ್ಳಿ ರಾಜಕೀಯದಿಂದ ಉಂಟಾಗುವ ಗೊಂದಲಗಳ ನಾನಾ ಮುಖಗಳನ್ನು ಅದರಲ್ಲೇ ಅರಳುವ ಮಾನವ ಪ್ರೀತಿಯನ್ನು ನಾಟಕ ಎತ್ತಿ ಹಿಡಿದಿದೆ.
ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಬಾಗಲಕೋಟೆ ರಂಗಸಮಾಜದ ಸದಸ್ಯ ಮಹಾಂತೇಶ ಎಂ. ಗಜೇಂದ್ರಗಡ ಇದ್ದರು. ರಂಗಕರ್ಮಿ ಪ್ರಭಾಕರ ಜೋಷಿ, ಆರ್‌ಕೆ ಹುಡಗಿ, ಸಿದ್ದಪ್ಪ ತಳ್ಳಳ್ಳಿ ಇದ್ದರು. ಕಥೆಗಾರ ಮಹಾಂತೇಶ ನವಲಕಲ್, ಸಂಗೀತ ನಿರ್ದೇಶಕ ರಾಘವ, ನಿರ್ದೇಶಕ ಪ್ರವೀಣ ಅವರನ್ನು ಸತ್ಕರಿಸಲಾಯಿತು.
ಕಲಬುರಗಿಯಲ್ಲಿ ಯಶ ಕಂಡ ರಂಗಾಯಣ ಕಲಾವಿದರ ತಂಡದ ಅಭಿನಯದ ಶಾಂತರಸರ ಸಣ್ಣಗೌಡಸಾನಿ ನಾಯಕದ ನೋಟಗಳು