ಸಂಸ್ಕೃತ ಕೇವಲ ಭಾಷೆಯಲ್ಲ ಜ್ಞಾನಭಂಡಾರ: ಡಾ.ವೆಂಕಟೇಶ ಮೂರ್ತಿ

KannadaprabhaNewsNetwork |  
Published : Sep 07, 2025, 01:00 AM IST
್ಿ | Kannada Prabha

ಸಾರಾಂಶ

ಶೃಂಗೇರಿ, ಪ್ರಾಚೀನ ಭಾಷಾ ಕುಟುಂಬಗಳಲ್ಲಿ ಒಂದಾಗಿರುವ ಸಂಸ್ಕೃತ ತನ್ನದೇ ಆದ ಇತಿಹಾಸ, ಪ್ರಾಚಿನತೆ ಹೊಂದಿದೆ. ಇದು ಕೇವಲ ಭಾಷೆಯಲ್ಲಿ ಜ್ಞಾನಭಂಡಾರವಾಗಿದೆ ಎಂದು ಮೆಣಸೆ ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾಲಯದ ಮುಕ್ತಸ್ವಾಧ್ಯಯ ಪೀಠದ ಸಹ ನಿರ್ದೇಶಕ ಡಾ.ವೆಂಕಟೇಶ ಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಪ್ರಾಚೀನ ಭಾಷಾ ಕುಟುಂಬಗಳಲ್ಲಿ ಒಂದಾಗಿರುವ ಸಂಸ್ಕೃತ ತನ್ನದೇ ಆದ ಇತಿಹಾಸ, ಪ್ರಾಚಿನತೆ ಹೊಂದಿದೆ. ಇದು ಕೇವಲ ಭಾಷೆಯಲ್ಲಿ ಜ್ಞಾನಭಂಡಾರವಾಗಿದೆ ಎಂದು ಮೆಣಸೆ ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾಲಯದ ಮುಕ್ತಸ್ವಾಧ್ಯಯ ಪೀಠದ ಸಹ ನಿರ್ದೇಶಕ ಡಾ.ವೆಂಕಟೇಶ ಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಕೃತ ಸಾಹಿತ್ಯದಲ್ಲಿ ವೈಜ್ಞಾನಿಕ ಸಂಶೋಧನೆಗೆ ಬೇಕಾದ ಅನೇಕ ಆಕರ ಗ್ರಂಥಗಳಿವೆ. ಆಧುನಿಕ ವಿಜ್ಞಾನದ ಶಾಖೆಗಳಿಗೆ ಸಂಬಂಧಪಟ್ಟ ಸಂಸ್ಕೃತ ಗ್ರಂಥಗಳ ಕುರಿತು ಸಂಶೋಧನೆ ನಡೆದರೆ ಜಗತ್ತಿಗೆ ಮಹದುಪಕಾರವಾಗುತ್ತದೆ ಎಂದರು.

ರಸರತ್ನಸಮುಚ್ಚಯವೆಂಬ ಗ್ರಂಥದಲ್ಲಿ 90 ವಿಧದ ಆಯಸ್ಕಾಂತಗಳ ವರ್ಣನೆಯಿದೆ. ಆಯಸ್ಕಾಂತದಿಂದ ತಯಾರಿಸಿದ ಪಾತ್ರಗಳ ಉಲ್ಲೇಖ ಹಾಗೂ ಅವುಗಳ ವೈಶಿಷ್ಟ್ಯವನ್ನು ಬಹಳ ಚೆನ್ನಾಗಿ ವಿವರಿಸಲಾಗಿದೆ. ಅದೇ ರೀತಿ ಪಾದರಸದ ಔಷಧೀಯ ಗುಣ, ವಜ್ರವನ್ನು ಕರಗಿಸುವ ತಂತ್ರಜ್ಞಾನ ವಿವರಿಸುವ ಗ್ರಂಥಗಳಿವೆ. ಇವುಗಳ ಆದಾರದಲ್ಲಿ ಆಧುನಿಕ ವಿಜ್ಞಾನಿಗಳು ಸಂಶೋಧನೆ ನಡೆಸಿದರೆ ವಿಷಯಗಳು ಅನಾವರಣಗೊಳ್ಳಬಹುದು.

ಪ್ರಾಚೀನ ಚಿಂತನೆಯನ್ನು ಆಧುನಿಕ ತಂತ್ರಜ್ಞಾನದ ಓರೆಗಲ್ಲಿಗೆ ಹಚ್ಚಿದರೆ ಅಭೂತಪೂರ್ವ ಸಾಧನೆ ಮಾಡಬಹುದು. ಅದೇ ರೀತಿ ಕಂಪ್ಯೂಟರ್ ಗೆ ಸಂಬಂದಿಸಿದ ಕೃತಕ ಬುದ್ಧಿಮತ್ತೆಯ ನಿರ್ಮಾಣದಲ್ಲಿಯೂ ಸಂಸ್ಕೃತದ ಪಾತ್ರ ಮಹತ್ವದಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಾಂಶುಪಾಲ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಆದಿತ್ಯ , ಪೂರ್ಣಿಮಾ, ಡಾ.ಮಹೇಶ್ ಕಾಕತ್ಕರ್, ಕವಿತಾ, ಸಮೃದ್ದಿ ಮತ್ತಿತರರು ಉಪಸ್ಥಿತರಿದ್ದರು.

6 ಶ್ರೀ ಚಿತ್ರ 3-

ಶೃಂಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕೃತೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ನಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''