ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಅವರು ಬುಧವಾರ ಪಟ್ಟಣದ ಮರಡಿಮಠದಲ್ಲಿ ಶ್ರೀ ಶಾರದಾ ವಿದ್ಯಾಲಯ ಹಮ್ಮಿಕೊಂಡಿದ್ದ ಸಂಸ್ಕೃತ ಸಂಭಾಷಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಎಲ್ಲ ಭಾಷೆಗಳನ್ನು ಪ್ರೀತಿಸಬೇಕು. ಪ್ರಾಚೀನ ಮಹಾಕವಿಗಳಿಗಳ ಕಾವ್ಯಗಳನ್ನು ಅರಿಯಲು ಸಂಸ್ಕೃತ ಭಾಷೆ ಸಹಾಯಕವಾಗಿದೆ. ಸಂಸ್ಕೃತ ಭಾಷೆಯ ಕಲಿಕೆಯಿಂದ ಜೀವನದಲ್ಲಿ ಜ್ಞಾನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬಹುದೆಂದು ಹೇಳಿದರು.
ಸಂಸ್ಕೃತ ಪಾಠಶಾಲೆಯ ವಿಶ್ರಾಂತ ಮುಖ್ಯ ಶಿಕ್ಷಕಿ ನಾಗವೇಣಿ ತಿಪ್ಪಾ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಸ್ಕೃತ ಅತ್ಯಂತ ಪುರಾತನ ಭಾಷೆಯಾಗಿದೆ. ನಾವು ಮಾತನಾಡುವ ಬಹುತೇಕ ಭಾಷೆಗಳಲ್ಲಿ ಸಂಸ್ಕೃತ ಅಡಕವಾಗಿದೆ. ಸಂಸ್ಕೃತ ಕಲಿಕೆಯಿಂದ ಭಾಷಾ ಉಚ್ಛಾರಣೆ ಶುದ್ಧವಾಗುತ್ತದೆ.ಸದ್ಯದ ಕಾಲಘಟ್ಟದಲ್ಲಿ ಸಂಸ್ಕೃತ ಶಿಕ್ಷಣ ಬಹಳಷ್ಟು ಅವಶ್ಯವಾಗಿದೆ. ಕನ್ನಡದೊಂದಿಗೆ ಭಾರತೀಯರ ಪುರಾತನ ಸಂಸ್ಕೃತ ಭಾಷೆಯನ್ನು ಮಕ್ಕಳಿಗೆ ಕಲಿಸುವ ಮೂಲಕ ಈ ಪವಿತ್ರ ಹಾಗೂ ನಾಡಿನ ಶ್ರೀಮಂತ ಭಾಷೆಯನ್ನು ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾರದಾ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕಿ ಸುನಂದಾ ರಾಸನಕರ, ಕುಮಾರೇಶ್ವರ ಸಂಸ್ಕೃತ ಪಾಠಶಾಲೆ ಶಿಕ್ಷಕ ಮಹಾಂತೇಶ ಬಂಕಾಪೂರ, ಮಲ್ಲಿಕಾರ್ಜುನ ರಾಜನಾಳ, ಮೋಹನ ರಾಸನಕರ, ಚನ್ನಮ್ಮ ಜವಳಿ, ಅನಿತಾ ಶಿರೋಳ, ದೀಪಾ ಉಂಕಿ, ಗೌರಮ್ಮ ಕಲಬುರ್ಗಿ, ಶಶಿಕಲಾ ಭಾವಿ, ಗಿರಿಜಾ ಕಲ್ಯಾಣಿ ಹಾಗೂ ಇತರರು ಇದ್ದರು.