ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಅವರು ಸೋಮವಾರ ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬ್ರಹ್ಮಠದಲ್ಲಿ ಶ್ರೀ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 38ನೇ ವಾರ್ಷಿಕ ಪುಣ್ಯಾರಾಧನೆ ಶರಣ ಸಂಗಮ ಸಮಾರಂಭದಲ್ಲಿ ಶಾರದಾ ಸಂಸ್ಕೃತ ಪಾಠಶಾಲೆ ಕೋಟೆಕಲ್ ಹಾಗೂ ಶ್ರೀ ಗುರುಸಿದ್ದೇಶ್ವರ ಸಂಸ್ಕೃತ ಪಾಠಶಾಲೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ 8 ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಎಲ್ಲ ಭಾಷೆಗಳಲ್ಲಿ ಸಂಸ್ಕೃತ ಭಾಷೆಯ ಪದಗಳಿರುವುದು ಕಾಣುತ್ತೇವೆ. ಎಲ್ಲ ಭಾಷೆಗಳು ಸಂಸ್ಕೃತದ ಆಧಾರದ ಮೇಲೆಯೇ ಜನ್ಮ ತಾಳಿವೆ. ಹೀಗಾಗಿ ಸಂಸ್ಕೃತ ಭಾಷೆ ಕಲಿಕೆಯುವುದರಿಂದ ಶಬ್ದ ಉಚ್ಚಾರ ಶುದ್ಧವಾಗುತ್ತದೆ. ಪ್ರತಿಯೊಬ್ಬರು ಸಂಸ್ಕೃತ ಕಲಿಯುವ ಮೂಲಕ ಈ ಭಾಷೆ ಉಳಿಸಿ, ಬೆಳೆಸಬೇಕಿದೆ. ಸಂಸ್ಕೃತ ವಿಶ್ವಭಾಷೆಯಾಗಬೇಕಿದೆ ಎಂದು ಹೇಳಿದರು.
ಶ್ರೀ ಶಾರದಾ ಸಂಸ್ಕೃತ ಪಾಠಶಾಲೆಯ ನಿವೃತ್ತ ಮುಖ್ಯ ಗುರುಮಾತೆ ನಾಗವೇಣಿ ಬಂಕಾಪುರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸುನಂದಾ ರಾಸನಕರ, ಮುಖ್ಯ ಶಿಕ್ಷಕ ಬಸವರಾಜ ಯಂಡಿಗೇರಿ, ಗೀತಾ ಬಂಕಾಪೂರ, ಎಂ.ಎಸ್.ತಾಂಡೂರ, ರುದ್ರಪ್ಪ ಲಮಾಣಿ ಸೇರಿದಂತೆ ಅನೇಕರು ಇದ್ದರು . ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡಿದ್ದರು.