ಸಿಎಂಗೆ ಮನವಿ ಸಲ್ಲಿಸಲು ಹೊರಟಿದ್ದ ರೈತರ ತಡೆ, ಆಕ್ರೋಶ

KannadaprabhaNewsNetwork |  
Published : Sep 18, 2024, 01:49 AM IST
ರೈತರಿಗೆ ತಡಯೊಡ್ಡಿದ ಪೋಲಿಸರು | Kannada Prabha

ಸಾರಾಂಶ

ಪೋಲಿಸರು, ಕಾಂಗ್ರೆಸ್‌ ಸರ್ಕಾರದ ನಡೆ ಖಂಡನೀಯ. ರೈತರ ಶಕ್ತಿಯನ್ನು ಕುಗ್ಗಿಸಲು ಹೊರಟಿರುವ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಗಡಂತಿ ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಪಟ್ಟಣದ ಸಿದ್ದಸಿರಿ ಇಥೆನಾಲ್ ಪವರ್‌ ಕಂಪನಿ ಪ್ರಾರಂಭಿಸುವಂತೆ ತಾಲೂಕಿನಿಂದ ಕಲಬುರಗಿ ನಗರಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲು ಹೊರಟಿದ್ದ ನೂರಾರು ರೈತರನ್ನು ರಸ್ತೆ ಮಾರ್ಗದಲ್ಲಿಯೇ ಪೋಲಿಸರು ತಡೆಯೊಡ್ಡಿದ್ದಾರೆ. ರೈತರ ಶಕ್ತಿಯನ್ನು ಕುಗ್ಗಿಸಲು ಹೊರಟಿರುವ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಗಡಂತಿ ಖಂಡಿಸಿದ್ದಾರೆ.

ಪಟ್ಟಣದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪಟ್ಟಣದ ಹೊರವಲಯದಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಖರೀದಿಸಿದ್ದಾರೆ. ನಂತರ ಸಿದ್ದಸಿರಿ ಇಥೆನಾಲ್‌ ಪವರ್‌ ಘಟಕ ಎಂದು ಕಳೆದೆರಡು ವರ್ಷಗಳಿಂದ ಪ್ರಾರಂಭಿಸಿ ಅನೇಕ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಕಂಪನಿಯಿಂದ ಕಬ್ಬನ್ನು ಖರೀದಿಸಿ ತಕ್ಷಣವೇ ಬಿಲ್‌ ಪಾವತಿಸಿದ್ದಾರೆ. ಆದರೆ ಸಿದ್ದಸಿರಿ ಇಥೆನಾಲ್ ಪವರ್‌ ಘಟಕ ಪ್ರಾರಂಭಿಸಲು ಅನುಮತಿ ನೀಡುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶಿಸಿದೆ. ಆದರೆ ರಾಜಕೀಯ ದುರುದ್ದೇಶ, ದ್ವೇಷ, ರಾಜಕೀಯ ಭಿನ್ನಾಭಿಪ್ರಾಯಗಳಿಂದ ಕಂಪನಿಗೆ ಅನುಮತಿ ಕೊಡುತ್ತಿಲ್ಲ. ಮಂಗಳವಾರ ಕಲಬುರಗಿ ನಗರದಲ್ಲಿ ಸಚಿವ ಸಂಪುಟ ನಡೆಸುತ್ತಿರುವ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲು ಹೊರಟಿದ್ದ ನೂರಾರು ರೈತರನ್ನು ಅನೇಕ ಕಡೆಗಳಲ್ಲಿ ತಡೆಯೊಡ್ಡಿದ್ದಾರೆ. ರೈತರ ಶಕ್ತಿ ಕುಗ್ಗಿಸಲು ಹೊರಟಿರುವ ಸರ್ಕಾರದ ನಡೆ ಖಂಡಿನೀಯವಾಗಿದೆ. ಸರ್ಕಾರ ಹಿಂದುಳಿದ ಪ್ರದೇಶದ ರೈತರ ಹಿತರಕ್ಷಣೆಗಾಗಿ ಅನುಮತಿ ನೀಡಬೇಕೆಂದು ಎಂದು ಸಂತೋಷ ಗಡಂತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಶ್ರೀಮಂತ ಕಟ್ಟಿಮನಿ, ಕೆ.ಎಂ.ಬಾರಿ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಹಿರಿಯ ಮುಖಂಡ ಭೀಮಶೆಟ್ಟಿ ಮುರುಡಾ, ಲೋಕೇಶ ಶೆಳ್ಳಗಿ, ಶ್ರೀನಿವಾಸ ಚಿಂಚೋಳಿಕರ, ಮಲ್ಲುಸ್ವಾಮಿ, ಶಿವಯೋಗಿ ರುಸ್ತಂಪೂರ ಇನ್ನಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಮಟ್ಟದ ಸ್ಕ್ವಾಶ್ ಚಾಂಪಿಯನ್‌ಶಿಪ್: ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ
ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ