ಅರಸೀಕೆರೆ ನಗರಸಭೆ ಉಪಚುನಾವಣೆ ಹಿನ್ನೆಲೆ ಸಂತೋಷ್‌ ಸಭೆ

KannadaprabhaNewsNetwork |  
Published : Nov 11, 2024, 11:51 PM IST
11ಎಚ್ಎಸ್ಎನ್23 : ನಗರಸಭೆ ಉಪ ಚುನಾವಣೆ ಹಿನ್ನಲೆಯಲ್ಲಿ ಎನ್. ಆರ್. ಸಂತೋಷ್ ಸಭೆ ನಡೆಸಿದರು. ಸಿ.ಗಿರೀಶ್, ವಿದ್ಯಾಧರ್, ವೇಣು, ಲೋಕೇಶ್ ಇತರರಿದ್ದರು. | Kannada Prabha

ಸಾರಾಂಶ

ನ.23ರಂದು ನಡೆಯಲಿರುವ ಇಲ್ಲಿನ ನಗರಸಭೆ ಎಂಟು ವಾರ್ಡ್‌ಗಳ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಗೆಲುವಿಗೆ ಶಕ್ತಿ ಮೀರಿ ಹೋರಾಟ ನಡೆಸಲು ಕಂಕಣ ಬದ್ಧರಾಗೋಣ ಎಂದು ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಉತ್ಸಾಹ ತುಂಬಿದರು. ವಾರ್ಡ್‌ ವ್ಯಾಪ್ತಿ, ಮತದಾರರ ಪಟ್ಟಿ ಎಲ್ಲವನ್ನೂ ಪರಿಶೀಲಿಸಿ ಗೆಲುವಿಗೆ ಸಮರ್ಥವಾಗಿ ಹೋರಾಟ ಮಾಡೋಣ.ಚುನಾವಣಾ ಪ್ರಚಾರದಲ್ಲಿ ಪಕ್ಷದ ಸಿದ್ಧಾಂತ ಅಳವಡಿಸಿಕೊಳ್ಳೋಣ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನ.23ರಂದು ನಡೆಯಲಿರುವ ಇಲ್ಲಿನ ನಗರಸಭೆ ಎಂಟು ವಾರ್ಡ್‌ಗಳ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಗೆಲುವಿಗೆ ಶಕ್ತಿ ಮೀರಿ ಹೋರಾಟ ನಡೆಸಲು ಕಂಕಣ ಬದ್ಧರಾಗೋಣ ಎಂದು ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಉತ್ಸಾಹ ತುಂಬಿದರು.

ಮಿನಿವಿಧಾನಸೌದ ಬಡಾವಣೆಗೆ ಹೊಂದಿಕೊಂಡಂತಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ಸಂಜೆ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು. ವಿವಿಧ ಕಾರಣಗಳಿಂದ ನಗರಸಭೆ ಎಂಟು ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಗೆಲುವೇ ನಮ್ಮ ಮಾನದಂಡ ಎಂದು ಭಾವಿಸಿ ಹೋರಾಟ ನಡೆಸಬೇಕಿದೆ. ನ.11ರಂದು ಸೋಮವಾರ ಬೆಳಗ್ಗೆ ರೈಲ್ವೆ ನಿಲ್ದಾಣದ ರಸ್ತೆಗೆ ಹೊಂದಿಕೊಂಡಂತಿರುವ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಎಲ್ಲರೂ ಒಗ್ಗೂಡಿ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸೋಣ. ವಾರ್ಡ್‌ ವ್ಯಾಪ್ತಿ, ಮತದಾರರ ಪಟ್ಟಿ ಎಲ್ಲವನ್ನೂ ಪರಿಶೀಲಿಸಿ ಗೆಲುವಿಗೆ ಸಮರ್ಥವಾಗಿ ಹೋರಾಟ ಮಾಡೋಣ.ಚುನಾವಣಾ ಪ್ರಚಾರದಲ್ಲಿ ಪಕ್ಷದ ಸಿದ್ಧಾಂತ ಅಳವಡಿಸಿಕೊಳ್ಳೋಣ ಎಂದರು.

ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಸದಸ್ಯ ಮೇಲುಗಿರಿಗೌಡ ಮಾತನಾಡಿದರು. ಮಾಜಿ ಅಧ್ಯಕ್ಷ ಬಿ.ಎನ್. ವಿದ್ಯಾಧರ್‌, ಹರ್ಷವರ್ಧನ್ ರಾಜ್, ಪುಟ್ಟಸ್ವಾಮಿ, ಮುಖಂಡರಾದ ವೇಣು, ಉಮೇಶ್, ಶಿವನರಾಜ್, ರವಿ, ಅರುಣ್ ಕುಮಾರ್, ಡಾಬಾ ರಘು, ರಂಗನಾಥ್, ಮಂಜು, ಆನಂದ್, ಶೇಖರ್‌ ಯಾದವ್, ಅನಿಲ್, ಸಿದ್ದಲಿಂಗಪ್ಪ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!