ಆಳ್ವಾಸ್ ಪದವಿ ಪೂರ್ವ ಕಾಲೇಜಿಗೆ 18 ಪದಕ

KannadaprabhaNewsNetwork | Published : Nov 11, 2024 11:51 PM

ಸಾರಾಂಶ

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಒಟ್ಟು 7 ಚಿನ್ನ, 6 ಬೆಳ್ಳಿ ಮತ್ತು 05 ಕಂಚಿನ ಪದಕಗಳೊಂದಿಗೆ 18 ಪದಕಗಳನ್ನು ಪಡೆದುಕೊಂಡಿತು. ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ 16 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಂಗಳೂರು ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ತುಮಕೂರು ಇದರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಒಟ್ಟು 7 ಚಿನ್ನ, 6 ಬೆಳ್ಳಿ ಮತ್ತು 05 ಕಂಚಿನ ಪದಕಗಳೊಂದಿಗೆ 18 ಪದಕಗಳನ್ನು ಪಡೆದುಕೊಂಡಿತು. ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ 16 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಶೋಭಿತ್ ದೇವಾಡಿಗ-ಚಕ್ರಎಸೆತ (ಪ್ರಥಮ), ನಿತಿನ್ ಎಲ್ ಜಿ-ಚಕ್ರಎಸೆತ (ದ್ವಿತೀಯ), ಅಬ್ದುಲ್ ರಜಕ್-ಹ್ಯಾಮರ್ ಎಸೆತ (ದ್ವಿತೀಯ), ಶಿವಾನಂದ ಪೂಜಾರಿ- 800 ಮೀ (ತೃತೀಯ), 4x 400 ಮೀ ರಿಲೇ (ದ್ವಿತೀಯ), ತೇಜಲ್ ಕೆ ಆರ್- 110 ಮೀ ಹರ್ಡಲ್ಸ್ (ಪ್ರಥಮ), ದಯಾನಂದ-200 ಮೀ (ತೃತೀಯ), 4X 400 ಮೀ ರಿಲೇ (ದ್ವಿತೀಯ), ಸುಮಂತ್ ಬಿ ಎಸ್-ತ್ರಿವಿಧ ಜಿಗಿತ (ದ್ವಿತೀಯ), ವಿನಾಯಕ್ -5 ಕಿಮೀ ನಡಿಗೆ (ಪ್ರಥಮ), ನೊಯೆಲ್-ಉದ್ದ ಜಿಗಿತ (ತೃತೀಯ), ವಿನೋದ್- 4x 100 ಮೀ ರಿಲೇ (ಪ್ರಥಮ), ಪೃಥ್ವಿರಾಜ್- 4x 100 ಮೀ ರಿಲೇ (ಪ್ರಥಮ), ಧ್ರುವ- 4x100 ಮೀ ರಿಲೇ (ಪ್ರಥಮ), ರಾಘವೇಂದ್ರ- 4x400 ಮೀ ರಿಲೇ(ದ್ವಿತೀಯ).ಬಾಲಕಿಯರ ವಿಭಾಗದಲ್ಲಿ: ವಿಸ್ಮಿತಾ-ಗುಂಡು ಎಸೆತ (ಪ್ರಥಮ), ವೃತಾ ಹೆಗ್ಡೆ-ಗುಂಡು ಎಸೆತ(ದ್ವಿತೀಯ), ಅಂಬಿಕಾ-3ಕಿಮೀ ನಡಿಗೆ (ಪ್ರಥಮ), ಚರಿಷ್ಮಾ-1500 ಮೀ (ದ್ವಿತೀಯ), 4 ಕಿಮೀ ಗುಡ್ಡಗಾಡು ಓಟ (ತೃತೀಯ), ಲಹರಿ- 4x100 ಮೀ ರಿಲೇ (ಪ್ರಥಮ), ಚೊಂಡಮ್ಮ- 4x100 ಮೀ ರಿಲೇ (ಪ್ರಥಮ), ವೈಷ್ಣವಿ- 4x100 ಮೀ ರಿಲೇ (ಪ್ರಥಮ).ವಿಜೇತರಾದ ಕ್ರೀಡಾಪಟುಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

Share this article