- ಮನವಿ ತಿರಸ್ಕರಿಸಿದ ಧಾರ್ಮಿಕ ದತ್ತಿ ಇಲಾಖೆ । ಕಳೆದ ಬಾರಿ ಒಂದು ದಿನ ಅವಕಾಶ ಕೊಟ್ಟಿದ್ದಕ್ಕೆ, ಈ ಬಾರಿ 3 ದಿನ ಕೇಳಿದ ಸಮಿತಿ,
ದತ್ತಪೀಠದ ಆವರಣದೊಳಗೆ ಕಳೆದ ಬಾರಿ ದತ್ತಜಯಂತಿಯ ಕೊನೆಯ ದಿನ ಹೋಮ ನಡೆಸಲು ಅವಕಾಶ ನೀಡಲಾಗಿತ್ತು. ಅದರಂತೆ ಈ ಬಾರಿಯೂ ಕೂಡ ಅವಕಾಶ ನೀಡುವಂತೆ ದತ್ತಪೀಠ ಸಂವರ್ಧನಾ ಸಮಿತಿ ಜಿಲ್ಲಾಡಳಿತಕ್ಕೆ ಕೋರಿಕೊಂಡಿತ್ತು.
ಕಳೆದ ಬಾರಿ ಹೋಮಕ್ಕೆ ಅವಕಾಶ ನೀಡಿದ್ದು ಒಂದು ದಿನ ಮಾತ್ರ. ಆದರೆ, ಈ ಬಾರಿ ಮೂರು ದಿನವೂ ಅದೇ ಸ್ಥಳದಲ್ಲಿ ಹೋಮಕ್ಕೆ ಅವಕಾಶ ನೀಡಬೇಕೆಂದು ದತ್ತಪೀಠ ಸಂವರ್ಧನಾ ಸಮಿತಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೋರಿಕೆ ಸಲ್ಲಿಸಿತ್ತು.ಸಭೆಯಲ್ಲಿ ಚರ್ಚೆಯಾದ ವಿಷಯದ ವರದಿಯನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಡಿ. 7 ರಂದು ಜಿಲ್ಲಾಡಳಿತ ರವಾನೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಇಲಾಖೆ ಆಯುಕ್ತರು ಜಿಲ್ಲಾಧಿಕಾರಿಗೆ ಡಿ.13 ರಂದು ಪತ್ರ ಬರೆದು ಈ ಹಿಂದೆ 2022 ರಲ್ಲಿ ನಡೆದಂತೆ ಈ ವರ್ಷ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ನಿಯಮಾನುಸಾರ ನಡೆಸಲು ಮಾತ್ರ ಸೂಚನೆ ನೀಡಿದ್ದಾರೆ.
ಒಂದು ದಿನ ಹೋಮಕ್ಕೆ ಅವಕಾಶ ನೀಡಿದ್ದರಿಂದ ಈ ಬಾರಿ ಮೂರು ದಿನ ಹೋಮ ನಡೆಸಲು ಅವಕಾಶ ನೀಡುವಂತೆ ಕೇಳಲು ಅವಕಾಶ ಮಾಡಿಕೊಟ್ಟಿತು. ಈ ಅವಕಾಶಕ್ಕೆ ಈಗಿನ ಕಾಂಗ್ರೆಸ್ ಸರ್ಕಾರ ಬ್ರೇಕ್ ಹಾಕುತ್ತೆ ಎಂಬ ಲೆಕ್ಕಾಚಾರ ತಪ್ಪಾಗಿದೆ. ಬಿಜೆಪಿ ಸರ್ಕಾರ ಮಾಡಿದ ಸಂಪ್ರದಾಯಕ್ಕೆ ಕಾಂಗ್ರೆಸ್ ಸರ್ಕಾರ ಮುದ್ರೆ ಹಾಕಿ ಪಾಸ್ ಮಾಡಿದಂತಾಗಿದೆ. ವಿವಾದಿತ ಸ್ಥಳ:
ಅವುಗಳಲ್ಲಿ ಪ್ರಮುಖವಾಗಿ ದತ್ತಪೀಠ ಸಂವರ್ಧನಾ ಸಮಿತಿ ರಚನೆ, ಇಬ್ಬರು ಹಿಂದೂ ಅರ್ಚಕರ ನೇಮಕ, ಮೂರು ದಿನ ನಡೆಯಲಿರುವ ದತ್ತಜಯಂತಿಯಲ್ಲಿ ಕೊನೆಯ ದಿನ ದತ್ತಪೀಠದ ಆವರಣದೊಳಗೆ ಹೋಮಕ್ಕೆ ಅವಕಾಶ. ಈ ಬೆಳವಣಿಗೆ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಇದು, ಸಂಪೂರ್ಣವಾಗಿ ಕಾನೂನು ಉಲ್ಲಂಘನೆ ಎಂಬ ಗಂಭೀರ ಆರೋಪ, ಟೀಕೆಗಳು ವ್ಯಕ್ತವಾಗಿದ್ದವು.
ದತ್ತಜಯಂತಿ ಉತ್ಸವದ ವೇಳೆ ಮೂರು ದಿನ ಹೋಮಕ್ಕೆ ಅವಕಾಶ ನೀಡಿದರೆ, ಮುಸ್ಲಿಂ ಸಮುದಾಯದ ವಿರೋಧ ಕಟ್ಟಿ ಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಕೋರಿಕೆಯನ್ನು ತಳ್ಳಿ ಹಾಕಿರಬಹುದೆಂದು ಹೇಳಲಾಗುತ್ತಿದೆ. ---- ಬಾಕ್ಸ್ -----
ದತ್ತಪೀಠದ ಹೋರಾಟದಲ್ಲಿ ಸಂಘ ಪರಿವಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬ್ರೇಕ್ ಹಾಕುತ್ತಲೇ ಬಂದಿವೆ.
ಆಗ, ಮುಸ್ಲಿಂ ಸಮುದಾಯ ಮಾತ್ರವಲ್ಲ, ಎಡ ಪಂಥೀಯರು ಆಕ್ರೋಶ ಹೊರ ಹಾಕಿದ್ದರು. ನಂತರದ ವರ್ಷಗಳಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಈ ತಪ್ಪು ಮಾಡಲಿಲ್ಲ. ಕೆಲವು ಸಂದರ್ಭದಲ್ಲಿ ಕಠಿಣ ನಿಲುವು ತಾಳುವ ಮೂಲಕ ಅಲ್ಪಸಂಖ್ಯಾತರ ಪರವಾಗಿದ್ದೇವೆಂದು ಸಾಭೀತುಪಡಿಸಿತು.
2004ರ ನಂತರ 2023 ರಲ್ಲಿ ದತ್ತಪೀಠದ ಆವರಣದಲ್ಲಿ ಹೋಮಕ್ಕೆ ಅವಕಾಶ ನೀಡಲಾಯಿತು. ಇದಕ್ಕೆ ಈಗಿನ ಕಾಂಗ್ರೆಸ್ ಸರ್ಕಾರ ಬ್ರೇಕ್ ಹಾಕುತ್ತಾ ಎಂಬ ಕುತೂಹಲ ಸಂಪ್ರದಾಯವಾಗಿ ಮತ್ತೆ ಮುಂದುವರೆದಿದೆ. 16 ಕೆಸಿಕೆಎಂ 4
ದತ್ತಪೀಠದ ವಿಹಂಗಮ ನೋಟ.