ಶಿಕ್ಷಕರ ದಿನಾಚರಣೆ ಪ್ರಯುಕ್ತ ಜಿಲ್ಲಾ ಕಸಾಪ ವತಿಯಿಂದ ಜಿಲ್ಲೆಯ ಸಾಧಕ ಶಿಕ್ಷಕರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಸೆ. 9 ರ ಸಂಜೆ 5.15 ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಜಿಲ್ಲಾ ಕಸಾಪ ವತಿಯಿಂದ ಜಿಲ್ಲೆಯ ಸಾಧಕ ಶಿಕ್ಷಕರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಸೆ. 9 ರ ಸಂಜೆ 5.15 ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿರುವ ತೇಗಲತಿಪ್ಪಿ, ದೇಶದ ಪ್ರಜೆಗಳನ್ನು ರೂಪಿಸುವ ಮೂಲಕ ಪ್ರಗತಿಗೆ ಬುನಾದಿ ಹಾಕುವವರು ಶಿಕ್ಷಕರು. ಹಾಗಾಗಿ ಜಿಲ್ಲೆಯ ಶಿಕ್ಷಕರ ಸಾಧನೆ ಸ್ಮರಿಸುವ ಕಾರ್ಯ ಪರಿಷತ್ತು ಸದಾ ಕಾಲ ಮಾಡಲಾಗುತ್ತಿದೆ ಎಂದರು.ಹೈಕಶಿ ಸಂಸ್ಥೆ ಅಧ್ಯಕ್ಷ, ಎಂಎಲ್‌ಸಿ ಡಾ ಶಶೀಲ್ ನಮೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಅಭಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ ಸಮಾರಂಭ ಉದ್ಘಾಟಿಸಲಿದ್ದಾರೆ. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಗಂಗೂ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಸೇವಂತಾ ಚವ್ಹಾಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿಂಗಪ್ಪ ಮಂಗೊಂಡಿ, ರಾಜೀವಗಾಂಧಿ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶಿವಾನಂದ ಪೂಜಾರಿ, ಜಯಶ್ರೀ ಜಮಾದಾರ ಅವರನ್ನು ಗೌರವಿಸಲಾಗುವುದು ಎಂದು ವಿಜಯಕುಮಾರ ಪಾಟೀಲ ಹೇಳಿದರು.ಸಾರ್ಥಕ ಶಿಕ್ಷಕ ಪ್ರಶಸ್ತಿಗೆ ಆಯ್ಕೆ: ಡಾ. ಗುರುಪ್ರಕಾಶ ಹೂಗಾರ, ಡಾ. ಬಸವರಾಜೇಶ್ವರಿ ಇಂದೂರ, ಡಾ. ಗಿರಿಜಾಬಾಯಿ ಗುಜಗೊಂಡ, ಮೀನಾಕ್ಷಿ ಎಸ್ ಅವಧಾನಿ, ಶರಣು ಬಿರಾದಾರ, ಶಿವಾನಂದ ನಿರವಾಣಿ, ಭೋಜನಗೌಡ ಪಾಟೀಲ, ದೌಲತರಾಯ ದೇಸಾಯಿ, ವಿಜಯಕುಮಾರ ಪಾಟೀಲ, ಮರೆಪ್ಪ ಬಸವಪಟ್ಟಣ, ರಮೇಶ ದೇವಣಿ, ಜೆ. ಹೆಚ್. ಪಾಟಿಲ, ಪರಮೇಶ್ವರ ಪಾಟೀಲ, ಶಾರದಾ ದೇಸಾಯಿ, ಪ್ರಕಾಶ ಕೋಟ್ರೆ ಈರಮ್ಮ ಸುತಾರ, ರಾಜಶೇಖರ ಸಜ್ಜಿ, ವಿಶಾಲಾ ಕಾಟಾಪೂರ, ದೇವಿದಾಸ ಪವಾರ, ಮಹಾಂತೇಶ್ವರಿ ಕಟ್ಟಿಮನಿ, ಭೀಮಾಶಂಕರ ಮಡಿವಾಳ, ಸುನಂದಾ ಕುಲಕರ್ಣಿ, ಮೈತ್ರಾಬಾಯಿ ಪತ್ತಾರ, ಡಾ. ಅನ್ನಪೂರ್ಣ ಗಂಗಾಣಿ, ವಿಶಾಲಾ ಕಾಟಾಪೂರ ಅವರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.