ಮಹನೀಯರನ್ನು ನೆನಪು ಮಾಡಿಕೊಳ್ಳುವ ದಿನವೇ ಸರ್ವೋದಯ

KannadaprabhaNewsNetwork |  
Published : Jan 31, 2026, 01:15 AM IST
 | Kannada Prabha

ಸಾರಾಂಶ

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ನೆನಪು ಮಾಡಿಕೊಳ್ಳುವ ದಿನವೇ ಸರ್ವೋದಯ ದಿನವಾಗಿದೆ. ಈ ದಿನವನ್ನು ನ್ಯಾಯಾಂಗ ಇಲಾಖೆ ಸ್ವಚ್ಛತಾ ದಿನವನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸಾ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ನೆನಪು ಮಾಡಿಕೊಳ್ಳುವ ದಿನವೇ ಸರ್ವೋದಯ ದಿನವಾಗಿದೆ. ಈ ದಿನವನ್ನು ನ್ಯಾಯಾಂಗ ಇಲಾಖೆ ಸ್ವಚ್ಛತಾ ದಿನವನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸಾ ತಿಳಿಸಿದ್ದಾರೆ.

ನಗರದ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀಶಾರದದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪಾವಗಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠ ರೋಗ ನಿರ್ಮೂಲನೆ, ತುಮಕೂರು ಹಾಗೂ ಡೇಮಿಯನ್ ಫೌಂಡೇಷನ್, ಚೆನ್ನೈ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸರ್ವೋದಯ , ಹುತಾತ್ಮರ ದಿನಾಚರಣೆ ಹಾಗೂ ಸ್ಪರ್ಶ ಕುಷ್ಠರೋಗ ಜಾಗೃತಿ ಆಂದೋಲನ ಅಂಗವಾಗಿ ಕುಷ್ಠ ರೋಗಿಗಳಿಗೆ ವಿವಿಧ ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛತೆ ಎಂಬುದು ಕೇವಲ ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದಲ್ಲದೆ, ಆದು ಆತ್ಮದ ಶುದ್ಧಿಗೂ ಸೇರಿದ್ದಾಗಿದೆ. ಯಾರ ಆತ್ಮ ಶುದ್ದಿ ಇರುತ್ತದೆಯೋ, ಅವರು ಇತರರಿಗೆ ಮಾದರಿಯಾಗಿರುತ್ತಾರೆ. ದೇಹ ಮತ್ತು ಆತ್ಮದ ಶುದ್ದಿಗಾಗಿ ಅನೇಕ ಔಷಧಗಳನ್ನು ಬಳಸುತ್ತೇವೆ. ಆದರೆ ಆತ್ಮದ ಶುದ್ದಿಗೆ ಯಾವ ಔಷಧವೂ ಇಲ್ಲ. ಇತರರನ್ನು ನಮ್ಮಂತೆ ಕಾಣುವ, ಅಶಕ್ತರು, ಬಡವರನ್ನು ಕಂಡರೆ ಸಹಾಯ ಹಸ್ತ ಚಾಚುವ ಗುಣ ಆತ್ಮಶುದ್ದಿಗೆ ಮೂಲಮಂತ್ರವಾಗಿದೆ. ಅದು ಮನುಷ್ಯನಲ್ಲಿನ ರಾಕ್ಷಸ ಗುಣವನ್ನು ತೊಲಗಿಸಿ, ದೈವತ್ವ ಗುಣಗಳನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಕೈಲಾದಷ್ಟು ಬಡವರಿಗೆ, ಆಶಕ್ತರಿಗೆ ಸಹಾಯ ಮಾಡೋಣ ಎಂದು ನ್ಯೂರುನ್ನಿಸಾ ಸಲಹೆ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ ಮಾತನಾಡಿ, ವೈದ್ಯರಾಗಿದ್ದ ನಮ್ಮ ತಂದೆ, ಕುಷ್ಠ ರೋಗಿಗಳ ಬಗ್ಗೆ ನಮಗೆ ತಿಳುವಳಿಕೆ ನೀಡಿದ್ದರು. ಅದೊಂದು ಗುಣಪಡಿಸಬಹುದಾದ ಕಾಯಿಲೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಹಾಗಾಗಿಯೇ ನಾವು ಕಲಿಯುವಂತಹ ಸಂದರ್ಭದಲ್ಲಿಯೇ ಜಾಗೃತಿ ಮೂಡಿತ್ತು ಎಂದರು.

ಜಿಲ್ಲಾ ಸರ್ಜನ್ ಡಾ.ಆಸ್ಗರ್ ಬೇಗ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಕೇವಲ 49 ಜನ ಮಾತ್ರ ಕುಷ್ಠ ರೋಗಿಗಳಿದ್ದಾರೆ. ಇದೆಲ್ಲದರ ಹಿಂದೆ ಸರಕಾರ,ಸಂಘ ಸಂಸ್ಥೆಗಳು ಹಾಗೂ ಜಪಾನಂದ ಜೀ ಅವರಂತಹ ಸೇವಾ ನಿರತ ಸ್ವಾಮೀಜಿಗಳ ಅವಿರತ ಪರಿಶ್ರಮವಿದೆ. ಹಾಗಾಗಿ ಜನರು ಕುಷ್ಠ ರೋಗದ ಬಗ್ಗೆ ನಿರ್ಲಕ್ಷ ಮಾಡದೆ ಆರಂಭ ದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗಿ ಇತರರಂತೆ ಸಾಮಾನ್ಯ ಜೀವನ ನಡೆಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಮುಖ್ಯಸ್ಥ ಶ್ರೀಜಪಾನಂದ ಜೀ ಮಾತನಾಡಿ, ಗಾಂಧೀಜಿ ಸಹ ಕುಷ್ಠ ರೋಗಿಗಳ ಸೇವೆಯಲ್ಲಿ ತೊಡಗಿದ್ದರು.ಇಂದು ನಮ್ಮೊಂದಿಗೆ ಮೊಬಲಿಟಿ ಇಂಡಿಯಾ ಹಾಗೂ ತುಮಕೂರು ವಿವಿ ಸ್ನಾತಕೋತ್ತರ ಸಮಾಜ ಕಾರ್ಯದ ಡಾ.ಕೆ.ಜಿ.ಪರುಶುರಾಮ್ ತಂಡ ಇದೆ. ಯಾರು ಆಧೀರರಾಗಬೇಡಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಚಂದ್ರಶೇಖರ್,ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ರವೀಂದ್ರನಾಯ್ಕ.ಕೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಮೋಹನ್‌ದಾಸ್, ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಕುಷ್ಠ ರೋಗಿಗಳಿಗೆ ಹೊಸ ವಸ್ತç, ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರಲ್ಲಿ ಮತ್ತೊಂದು ಹೈಟೆಕ್‌ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ
ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕ ರಾಯ್‌ ದಾರುಣ ಸಾವು