ಸಾಸಲು ದೇಗುಲ ಅಭಿವೃದ್ಧಿ ವಿಳಂಬ ಸರಿಯಲ್ಲ: ಎಚ್‌.ಟಿ.ಮಂಜು

KannadaprabhaNewsNetwork |  
Published : Feb 12, 2026, 01:30 AM IST
11ಕೆಎಂಎನ್‌ಡಿ-18ಕಿಕ್ಕೇರಿ ಹೋಬಳಿಯ ಸಾಸಲು ಕ್ಷೇತ್ರದ ಮುಜರಾಯಿ ಇಲಾಖೆ ದೇಗುಲ ಅಭಿವೃದ್ಧಿ, ಸಮಸ್ಯೆಗಳ ಕುರಿತು ಶಾಸಕ ಎಚ್.ಟಿ.ಮಂಜು ಸಭೆ ನಡೆಸಿದರು. | Kannada Prabha

ಸಾರಾಂಶ

ಎರಡು ದೇಗುಲಗಳ ಜೀರ್ಣೋದ್ಧಾರ ನೆಪದಲ್ಲಿ ಸಾಸಲು ದೇಗುಲ ಕೆಡವಿ ಎರಡು ವರ್ಷವಾಗಿದೆ. ಗ್ರಾಮಸ್ಥರು ದೇವರನ್ನು ಪೂಜಿಸಲು ಸ್ವಂತ ಹಣದಿಂದ ದೇವಾಲಯ ನಿರ್ಮಿಸಿ ಭಕ್ತರಿಗೆ ಪೂಜೆ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ದೇಗುಲದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ದೇಗುಲ ಅಭಿವೃದ್ಧಿ ಮಾಡುವುದಾಗಿ ಹೇಳಿ ಎರಡು ವರ್ಷವಾಗಿದೆ. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ದೇಗುಲದ ಅಭಿವೃದ್ಧಿ ಕೆಲಸದಲ್ಲಿ ವಿಳಂಬ ಸರಿಯಲ್ಲ. ಕೇವಲ ಸಭೆಗಳನ್ನು ನಡೆಸುವುದರಿಂದ ಪ್ರಯೋಜನವಿಲ್ಲ. ಗ್ರಾಮಸ್ಥರು, ಭಕ್ತರಿಂದ ದೂರು ಬರುವಂತಾಗಬಾರದು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಹೋಬಳಿಯ ಸಾಸಲು ಗ್ರಾಮದ ಮುಜರಾಯಿ ದೇಗುಲಗಳಾದ ಶ್ರೀಸೋಮೇಶ್ವರ, ಶ್ರೀಶಂಭುಲಿಂಗೇಶ್ವರ ದೇಗುಲ ಅಭಿವೃದ್ಧಿಗಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಎರಡು ದೇಗುಲಗಳ ಜೀರ್ಣೋದ್ಧಾರ ನೆಪದಲ್ಲಿ ದೇಗುಲ ಕೆಡವಿ ಎರಡು ವರ್ಷವಾಗಿದೆ. ಗ್ರಾಮಸ್ಥರು ದೇವರನ್ನು ಪೂಜಿಸಲು ಸ್ವಂತ ಹಣದಿಂದ ದೇವಾಲಯ ನಿರ್ಮಿಸಿ ಭಕ್ತರಿಗೆ ಪೂಜೆ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ದೇಗುಲದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂಷಿಸಿದರು.

ಜೋಡಿರಥ ನಿರ್ಮಾಣದಲ್ಲಿ ಕಳಪೆ ಮರ ಬಳಸಲಾಗಿದ್ದು ಜೊತೆಗೆ ರಥದ ನಿರ್ಮಾಣ ಕಾರ್ಯ ಬಹಳ ವಿಳಂಬವಾಗಿದೆ. ಭಕ್ತರು ತಂಗಲು, ಬಟ್ಟೆ ಬದಲಾಯಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ ಎಂಬ ದೂರುಗಳು ಸಾಕಷ್ಟಿವೆ. ತೋರಿಕೆ ಮಾತು ಬಿಟ್ಟು ಅಧಿಕಾರಿಗಳು ದೇಗುಲ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಯುಗಾದಿಯ ತರುವಾಯ ಜಾತ್ರೆ, ರಥೋತ್ಸವ ನಡೆಯಲಿದೆ. ಐದಾರು ವರ್ಷಗಳಿಂದ ರಥೋತ್ಸವಜರುಗಿಲ್ಲ ಎಂಬ ಕೊರಗು ಗ್ರಾಮಸ್ಥರಲ್ಲಿದೆ. ದೇಗುಲದ ಹುಂಡಿಯಲ್ಲಿ ಸುಲಭವಾಗಿ ಹಣ ತೆಗೆಯಬಹುದಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಗ್ರಾಮದ ಜನರ ಸಹನೆಯನ್ನು ಪರೀಕ್ಷಿಸುವ ಕೆಲಸವಾಗಬಾರದು. ಗ್ರಾಮಸ್ಥರಿಗೆ ಈ ದೇಗುಲ ಆರಾಧ್ಯ ದೈವ್ಯವಾಗಿದೆ ಎಂಬುದನ್ನು ಮರೆಯದೆ ತ್ವರಿತವಾಗಿ ಆಗಬೇಕಿರುವ ಕೆಲಸ ಮುಗಿಸಿ ಎಂದು ತಾಕೀತು ಮಾಡಿದರು.

ಮುಜರಾಯಿ ಅಧಿಕಾರಿಗಳಾದ ತಹಸೀಲ್ದಾರ್ ಅಶೋಕ್, ರಾಜಸ್ವ ನಿರೀಕ್ಷಕ ಡಿ.ಆರ್.ನರೇಂದ್ರ, ಗ್ರಾಮ ಆಡಳಿತಾಧಿಕಾರಿ ತಿಪ್ಪೇಶ್, ಐಕನಹಳ್ಳಿ ಗ್ರಾಪಂ ಪಿಡಿಒ ವಿಜಯ್, ಗ್ರಾಮ ಮುಖಂಡರು ಇದ್ದರು.ಹುಲ್ಲಾಗಾಲ ಉರಿಗಣ್ಣೇಶ್ವರಿ ದೇವಾಲಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಹುಲ್ಲಾಗಾಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಉರಿಗಣ್ಣೇಶ್ವರಿ ದೇವಾಲಯದ ಉದ್ಘಾಟನೆ ಕಾರ್ಯಕ್ರಮ ಫೆ.10 ಮತ್ತು 11ರಂದು ಎರಡು ದಿನಗಳ ಕಾಲ ನೆರವೇರಿತು.

ಫೆ.10ರಂದು ಸಂಜೆ 6 ಗಂಟೆಗೆ ಪುಣ್ಯಾಹ, ಗಣಪತಿ ಪೂಜೆ, ಹೋಮ-ಹವನ ಇನ್ನಿತರೆ ಪೂಜಾ ಕಾರ್ಯಕ್ರಮಗಳು ನಡೆದವು. ಶ್ರೀ ಉರಿಗಣ್ಣೇಶ್ವರಿ ನೂತನ ವಿಗ್ರಹಗಳನ್ನು ಗಂಗೆ ತಡಿಯಿಂದ ತಂದು ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಮಹಾ ಮಂಗಳಾರತಿ, ರಾತ್ರಿ 7 ಗಂಟೆಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ಫೆ.11ರಂದು ಬೆಳಗ್ಗೆ ಗ್ರಾಮದ ಕೆರೆಯಿಂದ ದೇವರಿಗೆ ಹೂ ಹೊಂಬಾಳೆ ಸಮೇತ ಪೂರ್ಣ ಕುಂಭದೊಂದಿಗೆ ಗಂಗೆಯನ್ನು ತರಲಾಯಿತು. ಅಂತರವಳ್ಳಿ ಸಿದ್ದೇಶ್ವರ ಸ್ವಾಮಿ ಬಸಪ್ಪ ದೇವರನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಶಿವಕುಮಾರ್, ಸಿದ್ದರಾಜು, ನಟರಾಜು, ಬಸವರಾಜು, ಸತೀಶ್, ಮಹದೇವಸ್ವಾಮಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಮಧ್ಯಾಹ್ನ 3ಕ್ಕೆ ಪಿಯುಸಿ ಫಲಿತಾಂಶ
ಕಾಡುಪ್ರಾಣಿಗಳ ಸಂತಾನಶಕ್ತಿ ಹರಣಕ್ಕೆ ರಾಜ್ಯ ಸರ್ಕಾರದಿಂದ ಚಿಂತನೆ: ಖಂಡ್ರೆ