- ಗಾಯತ್ರಿ ಪರ ಬೃಹತ್ ರೋಡ್ ಶೋ ನಡೆಸಿ ಸಂಸದ ಸಿದ್ದೇಶ್ವರ ಹೇಳಿಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಚನ್ನಗಿರಿ, ಸಂತೆಬೆನ್ನೂರಿನಲ್ಲಿ ಪತ್ನಿ ಗಾಯತ್ರಿ ಸಿದ್ದೇಶ್ವರ್ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಇಷ್ಟೊತ್ತಿಗೆ ಪೂರ್ತಿಗೊಂಡು ಕೆರೆಗಳಿಗೆ ನೀರು ತುಂಬಿಸಬೇಕಿತ್ತು. ಆದರೆ, ಯಾರೋ ಒಬ್ಬರು ನ್ಯಾಯಾಲಯಕ್ಕೆ ಹೋಗಿದ್ದರಿಂದ ಅನುಷ್ಠಾನ ವಿಳಂಬವಾಗಿದೆ. ನ್ಯಾಯಾಲಯದಲ್ಲಿನ ಪ್ರಕರಣ ಇತ್ತೀಚೆಗಷ್ಟೇ ಕ್ಲಿಯರ್ ಆಗಿದೆ. ಬರುವ ಮಳೆಗಾಲದಲ್ಲಿ ಚನ್ನಗಿರಿ ತಾಲೂಕಿನ ಎಲ್ಲ ಕೆರೆಗಳ ತುಂಬಿಸಲಾಗುವುದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ ಒಂದೇ ಒಂದು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿ ಪಟ್ಟಣದ ಯುಜಿಡಿಗೆ ಅಂತ ₹100 ಕೋಟಿ ಅನುದಾನ ತಂದಿದ್ದರು. ಈಗಿನ ಶಾಸಕರು ಆ ಅನುದಾನ ಬಳಸಿ, ಕೆಲಸ ಮಾಡತ್ತಿದ್ದಾರೆ. ನಾವು ಹಣ ತರುವುದು, ಕೆಲಸ ಮಾಡುವುದು. ಕಾಂಗ್ರೆಸ್‌ನವರು ಬಂದು ಶಂಕುಸ್ಥಾಪನೆ, ಉದ್ಘಾಟನೆ ಮಾಡುವುದೇ ಆಗಿದೆ ಎಂದು ವಾಗ್ದಾಳಿ ನಡೆಸಿದರು.ಚನ್ನಗಿರಿ ಅಡಕೆ ನಾಡು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮೊನ್ನೆ ಚನ್ನಗಿರಿಗೆ ಬಂದಾಗ ಹೇಳ್ತಿದ್ರು; ನಾವು ಪಾನ್ ಮಸಾಲ, ಗುಟ್ಖಾ ತಯಾರು ಮಾಡ್ತಿವಿ, ನಿಮ್ಮ ಆರೋಗ್ಯ ಕೆಡುತ್ತದೆ ಎಂದು. ಇದೇ ಎಸ್.ಎಸ್.ಮಲ್ಲಿಕಾರ್ಜುನ್ ಫೈರ್ ಅನ್ನೋ ಹೆಸರಿನಲ್ಲಿ ಗುಟ್ಕಾ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕಲ್ಲೇಶ್ವರ ಮಿಲ್ ಪಕ್ಕದಲ್ಲೇ ಫ್ಯಾಕ್ಟರಿ ಮಾಡಿಕೊಂಡಿದ್ದಾರೆ. ಈಗ ಅವರ ಪತ್ನಿ ದಂತ ವೈದ್ಯೆ ಬಂದು ನಿಮ್ಮ ಹಲ್ಲು ಕ್ಲೀನ್ ಮಾಡ್ತಾರಂತೆ. ಮಲ್ಲಿಕಾರ್ಜುನ್ ಬಾಯಿ ಬಿಟ್ಟರೆ ಬರೀ ಸುಳ್ಳೇ ಹೇಳುವುದು ಎಂದು ಚಾಟಿ ಬಿಸಿದರು.
ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಮಂಡಲ ಅಧ್ಯಕ್ಷರು, ಸದಸ್ಯರು, ಬೂತ್ ಕಮಿಟಿ ಅಧ್ಯಕ್ಷರು, ಸದಸ್ಯರು, ಜಿಪಂ, ತಾಪಂ ಮಾಜಿ ಸದಸ್ಯರು, ಗ್ರಾಪಂಗಳ ಹಾಲಿ, ಮಾಜಿ ಸದಸ್ಯರು, ಅಧ್ಯಕ್ಷರು, ಕಾರ್ಯಕರ್ತರು ಭಾಗಿಯಾಗಿದ್ದರು.
- - -(-ಫೋಟೋ ಇದೆ)