ಡಾ. ಅಬ್ದುಲ್ ಕಲಾಂ ಚಿಂತನ ಚಾವಡಿಯಿಂದ ಯೋಗ ದಿನಾಚರಣೆ

KannadaprabhaNewsNetwork |  
Published : Jun 22, 2025, 11:47 PM IST
32 | Kannada Prabha

ಸಾರಾಂಶ

ಯೋಗ ಗುರು ನಾಗರಾಜು ಅವರು ಪ್ರತಿಯೊಂದು ಆಸನದಿಂದ ಏನೇನು ಪ್ರಯೋಜನ ಎಂಬುದನ್ನು ಅತ್ಯಂತ ವಿವರವಾಗಿ ತಿಳಿಸಿಕೊಟ್ಟರು

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಡಾ. ರಾಜ್ ಕುಮಾರ್ ರಸ್ತೆಯಲ್ಲಿನ ಸಾತಗಳ್ಳಿ ಬಡಾವಣೆ ಮೊದಲನೇ ಹಂತದ ಸರ್ವ ಜನಾಂಗದ ಶಾಂತಿಯ ತೋಟ. ಡಾ.ಎಪಿಜೆ ಅಬ್ದುಲ್ ಕಲಾಂ

ಚಿಂತನ ಚಾವಡಿ ವತಿಯಿಂದ ಎಪಿಜೆ ಉದ್ಯಾನವನದಲ್ಲಿ ವಿಶ್ವ ಯೋಗ ದಿನವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಚಿಂತನ ಚಾವಡಿಯ ಗೌರವಾಧ್ಯಕ್ಷ ಹಾಗೂ ಯೋಗ ಗುರು ನಾಗರಾಜು ಅವರ ಮಾರ್ಗದರ್ಶನದಲ್ಲಿ ಎಲ್ಲಾ ಸದಸ್ಯರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗ ಮಾಡಿ ಆರೋಗ್ಯದಿಂದಿರೋಣ ಎಂಬ ಸಂದೇಶ ನೀಡಿದರು.

ಯೋಗ ಗುರು ನಾಗರಾಜು ಅವರು ಪ್ರತಿಯೊಂದು ಆಸನದಿಂದ ಏನೇನು ಪ್ರಯೋಜನ ಎಂಬುದನ್ನು ಅತ್ಯಂತ ವಿವರವಾಗಿ ತಿಳಿಸಿಕೊಟ್ಟರು. ಚಿಂತನ ಚಾವಡಿಯ ಅಧ್ಯಕ್ಷ ಸಿ. ನಟರಾಜು, ಉಪಾಧ್ಯಕ್ಷೆ ಜ್ಯೋತಿ ರಕ್ಷಿತ್, ಹಿರಿಯ ಸದಸ್ಯರೂ ಹಾಗೂ ಕೆನರಾ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ದೇವರಾಜ್, ಪ್ರಧಾನ ಕಾರ್ಯದರ್ಶಿ ಎಡೆಯೂರು ಸಮೀಉಲ್ಲಾ, ಖಜಾಂಚಿ ಕಿರಣ್ ಕುಮಾರ್ ಇದ್ದರು.

ಯೋಗ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ಯೋಗಾಭ್ಯಾಸದಲ್ಲಿ ಅಧ್ಯಾಪಕಿಯರಾದ ರಿಜ್ವಾನ ಸಬ್ಬಸ್ಸುಮ್, ಸಂಬುದ್ಧ ಪಿಯು ಕಾಲೇಜಿನ ಪ್ರಾಂಶುಪಾಲೆ ನಂದಿನಿ ಕಿರಣ್ ಕುಮಾರ್, ಅಧ್ಯಾಪಕಿ ಡಿ.ಆರ್. ಪುಷ್ಪಾ, ಜೀವನ್ ಕುಮಾರ್, ಜಯಪ್ರಭಾ, ಲತಾ, ಯೋಗಪಟುಗಳಾದ ವೆಂಕಟೇಶ್ ಹಾಗೂ ವೀಣಾ ವೆಂಕಟೇಶ್ ಒಳಗೊಂಡಂತೆ ಸುಮಾರು 25ಕ್ಕೂ ಹೆಚ್ಚು ಮಂದಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಭ್ಯಾಸ ನಡೆಸಿ ವಿಶ್ವ ಯೋಗ ದಿನಾಚರಣೆ ಯಶಸ್ವಿಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ