ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಗೆ ಬೇಲೂರಿನಲ್ಲಿ ಭಕ್ತಿಭಾವದ ಸ್ವಾಗತ

KannadaprabhaNewsNetwork |  
Published : Mar 05, 2026, 01:45 AM IST
4ಎಚ್ಎಸ್ಎನ್8 : ಸತ್ಯಸಾಯಿ ಬಾಬಾ ಅವರ 100ನೇ ಜನ್ಮವಾರ್ಷಿಕೋತ್ಸವದ ಪ್ರಯುಕ್ತ ದೇಶಾದ್ಯಂತ ಸಂಚರಿಸುತ್ತಿರುವ ‘ಸತ್ಯಸಾಯಿ ಪ್ರೇಮ ಪ್ರವಾಹಿನಿ’ ರಥಯಾತ್ರೆಗೆ ಬುಧವಾರ ಬೇಲೂರಿನಲ್ಲಿ ಭಕ್ತಿಭಾವದ ಸ್ವಾಗತ ಕೋರಲಾಯಿತು. | Kannada Prabha

ಸಾರಾಂಶ

ಈ ಪ್ರೇಮ ಪ್ರವಾಹಿನಿ ರಥವು ಸಾಮಾನ್ಯ ರಥವಲ್ಲ, ಸ್ವಾಮಿಯೇ ಬೇಲೂರಿಗೆ ಆಗಮಿಸಿದಂತೆಯೇ ಭಾವಿಸಬೇಕು. ದೇಶಾದ್ಯಂತ ಐದು ರಥಗಳು ಸಂಚರಿಸುತ್ತಿದ್ದು, ಅವುಗಳಲ್ಲಿ ಒಂದು ರಥ ಇಂದು ಬೇಲೂರಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಸತ್ಯಸಾಯಿ ಬಾಬಾ ಅವರ 100ನೇ ಜನ್ಮವಾರ್ಷಿಕೋತ್ಸವದ ಪ್ರಯುಕ್ತ ದೇಶಾದ್ಯಂತ ಸಂಚರಿಸುತ್ತಿರುವ ‘ಸತ್ಯಸಾಯಿ ಪ್ರೇಮ ಪ್ರವಾಹಿನಿ’ ರಥಯಾತ್ರೆಗೆ ಬುಧವಾರ ಬೇಲೂರಿನಲ್ಲಿ ಭಕ್ತಿಭಾವದ ಸ್ವಾಗತ ಕೋರಲಾಯಿತು.

ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಆರಂಭಗೊಂಡ ಈ ರಥಯಾತ್ರೆ ಶಿವಮೊಗ್ಗ, ಚಿಕ್ಕಮಗಳೂರು ಮಾರ್ಗವಾಗಿ ಹಾಸನ ಜಿಲ್ಲೆಗೆ ಆಗಮಿಸಿ ಎಂದು ಪಟ್ಟಣದ ಮುಖ್ಯರಸ್ತೆಯಲ್ಲಿ ಶೋಭಾಯಾತ್ರೆ ಪ್ರಾರಂಭಗೊಂಡಿದ್ದು, ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ದೇಶದಾದ್ಯಂತ ಸುಮಾರು 50,000 ಗ್ರಾಮಗಳನ್ನು ಸಂಚರಿಸಿ 3,50,000 ಕಿಲೋಮೀಟರ್ ಯಾತ್ರೆ ಪೂರ್ಣಗೊಳಿಸಿರುವ ಈ ರಥವು ಭಕ್ತರಲ್ಲಿ ವಿಶೇಷ ಭಾವನೆ ಮೂಡಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಪದ್ಮನಾಭ ಪೈ ಅವರು, ಈ ಪ್ರೇಮ ಪ್ರವಾಹಿನಿ ರಥವು ಸಾಮಾನ್ಯ ರಥವಲ್ಲ, ಸ್ವಾಮಿಯೇ ಬೇಲೂರಿಗೆ ಆಗಮಿಸಿದಂತೆಯೇ ಭಾವಿಸಬೇಕು. ದೇಶಾದ್ಯಂತ ಐದು ರಥಗಳು ಸಂಚರಿಸುತ್ತಿದ್ದು, ಅವುಗಳಲ್ಲಿ ಒಂದು ರಥ ಇಂದು ಬೇಲೂರಿಗೆ ಬಂದಿದೆ. ಭಕ್ತರ ಉತ್ಸಾಹ ಹಾಗೂ ಭಾವನಾತ್ಮಕ ಸ್ವಾಗತ ನೋಡುವುದು ಸಂತೋಷ ತಂದಿದೆ. ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಸ್ವಾಮಿಯವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಸತ್ಯಸಾಯಿ ಸೇವಾ ಸಂಸ್ಥೆಗಳ ಹಾಸನ ಜಿಲ್ಲಾ ಉಪಾಧ್ಯಕ್ಷ ಹಾಗೂ ಸತ್ಯಸಾಯಿ ಟ್ರಸ್ಟ್ ಅಧ್ಯಕ್ಷ ಇಂದ್ರೇಶ್ ಅವರು ಮಾತನಾಡಿ, ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಾರ್ವಜನಿಕರು, ಮಾಧ್ಯಮಗಳು ಹಾಗೂ ಪೊಲೀಸ್ ಇಲಾಖೆಯವರು ಉತ್ತಮ ಸಹಕಾರ ನೀಡಿದ್ದಾರೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ನಮ್ಮ ಭಾಗ್ಯ ಎಂದು ತಿಳಿಸಿದರು.

ರಥ ಸ್ವಾಗತದ ನಂತರ ಆರ್.ವಿ. ಚೌಟ್ರಿನಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ನವಿಲಹಳ್ಳಿಯ ಸತ್ಯಸಾಯಿ ಮಂದಿರದಲ್ಲಿ ಸತ್ಯಸಾಯಿ ಮಂದಿರದಲ್ಲಿ ವಿವಿಧ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳು ಜರುಗಿದವು. ಸುಮಾರು 600 ಜನರಿಗೆ ನಾರಾಯಣ ಸೇವೆ ಹಾಗೂ 100ಕ್ಕೂ ಹೆಚ್ಚು ಜನರಿಗೆ ಹೊಸ ವಸ್ತ್ರ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಸೇವಾ ಸಂಯೋಜಕಿಯಾದ ಪ್ರಿಯಾ ಪೈ, ರಾಜ್ಯ ಪುರುಷ ಸೇವಾ ಸಂಯೋಜಕರಾದ ಪ್ರಭಾಕರ್ ಬೀರಾದರ್ ಹಾಗೂ ಜಿಲ್ಲಾಧ್ಯಕ್ಷರಾದ ಡಾ. ನಾಗರಾಜ್, ಬಾಳೆಹಣ್ಣು ರಮೇಶ್ ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರಾಂತಿಕಾರಿ ಪುರುಷರ ಆದರ್ಶ ರೂಢಿಸಿಕೊಳ್ಳಿ: ವಿನಯಕುಮಾರ್‌
ಆದಿಚುಂಚನಗಿರಿ ಜಾತ್ರೆ ಮಹೋತ್ಸವದ ಕೊನೇ ದಿನ ಗಂಗಾಪೂಜೆ