ಕನ್ನಡಪ್ರಭವಾರ್ತೆ ಕೆರೂರ
ಚಿಕ್ಕ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ಉದ್ಯಮಿದಾರರವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲನೀಡಿ ಅವರ ಆರ್ಥಿಕ ಸ್ಥಿತಿ ಬಲಗೊಳ್ಳುವಂತೆ ಮಾಡಿದ ತೃಪ್ತಿ ಸಂಘಕ್ಕಿದೆಯೆಂದು ಮರ್ಚಂಟ್ ಕೋ ಆಫ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಧನಂಜಯ ಕಂದಕೂರ ಹೇಳಿದರು.ಅವರು ಭಾನುವಾರ ನಡೆದ ಸಂಘದ 29ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಾಲ ಪಡೆದವರು ಸಕಾಲಕ್ಕೆ ಸಾಲ ಮರುಪಾವತಿಸಿ ಉತ್ತಮ ಗ್ರಾಹಕರಾಗಿ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಿದ್ದು ಅವರಿಗೆ ಈ ಸಂದರ್ಭದಲ್ಲಿ ಸಂಘ ಪ್ರಶಂಸೆ ವ್ಯಕ್ತಪಡಿಸುತ್ತದೆ. 1995ರಲ್ಲಿ ಸ್ಥಾಪನೆಯಾದ ಸಂಘವು 396 ಸದಸ್ಯರನ್ನು ಹೊಂದಿತ್ತು. ಮಹಿಳಾ ಶಾಖೆ ಮತ್ತು ಲೋಕಾಪೂರದಲ್ಲಿ ಸಂಘವು ಶಾಖೆಗಳನ್ನು ಹೊಂದಿದ್ದು ಅಲ್ಲಿಂದ ಇಲ್ಲಿಯವರೆಗೂ ಸಂಘದ ಸಾಂಪತ್ತಿಕ ಸ್ಥಿತಿ ಬೆಳೆಯುವುದರ ಜೊತೆಗೆ ಸದಸ್ಯರ ಸಂಖ್ಯಾ ಬಲವು 3969 ಆಗಿದೆ. ಪ್ರಸಕ್ತ ವರ್ಷ ನಿವ್ವಳ ಲಾಭ ₹1.84 ಕೋಟಿ ಆಗಿದ್ದು ಸದಸ್ಯರಿಗೆ ಶೇ.12 ರಷ್ಟು ಡಿವಿಡೆಂಡ್ ಹಂಚುವ ನಿರ್ಧಾರವಾಗಿದೆಯೆಂದರು.
ನಿರ್ದೇಶಕ ಗಂಗಾಧರ ಘಟ್ಟದ ಮಾತನಾಡಿ, ಗ್ರಾಹಕರಿಗೆ ಅನೇಕ ಸಾಲಯೋಜನೆಗಳು ಸೇರಿದಂತೆ ವಿಮಾ ಸೌಲಭ್ಯವನ್ನು ನೀಡಲಾಗುತ್ತದೆ. ಚಿಕ್ಕ ವ್ಯಾಪಾರಸ್ಥರನ್ನು ಆರ್ಥಿಕವಾಗಿ ಸಬಲರಾಗುವಂತಾಗಲು ಅನೇಕ ಯೋಜನೆಗಳನ್ನು ರೂಪಿಸಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕೆಂದರು.ಅಗಲಿದ ಸಂಘದ 21 ಸದಸ್ಯರನ್ನು ಸ್ಮರಿಸಿ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉತ್ತಮ ಗ್ರಾಹಕರಾದ ಬಸಪ್ಪ ಮಲ್ಲಪ್ಪ ಬಡಿಗೇರ, ಮಹಾದೇವಪ್ಪ ಪಟ್ಟಣಶೆಟ್ಟಿ, ಮೀನಾಕ್ಷಿ ಗೌಡರ, ಭುವನೇಶ್ವರಿ ಗಡಾದ, ಸುಮಿತ್ರಾ ಉಳ್ಳಾಗಡ್ಡಿ, ನಿಂಗಪ್ಪ ಹರಕಂಗಿ, ಬಸವರಾಜ ಅಂಗಡಿಯವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯಲ್ಲಿ ಹೆಚ್ಚಿನ ಅಂಕಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಗದೀಶ ಯಂಡಿಗೇರಿ, ಸುಭಾಸ ಪೂಜಾರ, ಶಂಕ್ರಪ್ಪ ಘಟ್ಟದ, ಕೇಶವ ಕಂದಕೂರ, ಬಾಬು ರಾಮದುರ್ಗ,ಪ್ರವೀಣ ಮಾನ್ವಿ, ಗುರಪ್ಪ ಭಾಗೋಜಿ, ದಾನಪ್ಪ ಪೂಜಾರ, ಪ್ರಕಾಶ ಮೇದಾರ, ರತ್ನವ್ವಾ ಕಡಕೋಳ, ತಾರಾ ಹಂದ್ರಾಳ ಹಾಗೂ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು. ವ್ಯವಸ್ಥಾಪಕ ರುದ್ರಪ್ಪ ಅಳಗವಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.