ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣತಾಲೂಕಿನ ದಂಡಿಗನಹಳ್ಳಿ ಹೋಬಳಿ, ಕುಂದೂರು ಮಠದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರ್ದೇಶಕ ದೊಡ್ಡಕರಡೇವು ಗ್ರಾಮದ ಡಿ.ಟಿ. ಸತೀಶ್‌ರವರು ಅವಿರೋಧವಾಗಿ ಆಯ್ಕೆಯಾದರು.ಕುಂದೂರು ಮಠದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಬಿ. ಆರ್. ಹರೀಶ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತ್ತು. ಸತೀಶ್ ಹೊರತುಪಡಿಸಿ ಬೇರೆ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದೆ ಇದುದ್ದರಿಂದ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ವಿಜಯೇಂದ್ರ ಘೋಷಿಸಿದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಸತೀಶ್ ಮಾತನಾಡಿ, ಪ್ರಸ್ತುತ ಸಂಘದಲ್ಲಿ ವ್ಯಾಪ್ತಿಗೆ ಒಳಪಡುವ ೧೩೫೦ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ೭.೫ ಕೋಟಿ ರು. ಸಾಲ ಮತ್ತು ೧೬ ಸ್ತ್ರೀಶಕ್ತಿ ಸಂಘಗಳಿಗೆ ೫೦ ಲಕ್ಷ ರು. ಸಾಲ ನೀಡಲಾಗಿದೆ. ಸಾಲ ತೀರುವಳಿಯೂ ಶೇ.೧೦೦ರಷ್ಟಿದ್ದು, ಮುಂಬರುವ ದಿನಗಳಲ್ಲಿ ಹೊಸ ರೈತರಿಗೆ ಸಾಲ ನೀಡಲು ಕ್ಷೇತ್ರದ ಶಾಸಕರಾದ ಎಚ್. ಡಿ. ರೇವಣ್ಣ, ಮತ್ತು ವಿಧಾನಪರಿಷತ್ತು ಸದಸ್ಯರು ಹಾಗೂ ಆಪೆಕ್ಸ್ ಬ್ಯಾಂಕ್ ನಿದೇಶಕರಾದ ಡಾ. ಸೂರಜ್ ರೇವಣ್ಣ ಸಹಕಾರ ಕೋರಲಾಗುತ್ತದೆ. ಜೊತೆಗೆ ಸಂಘದ ಬಲವರ್ಧನೆಗೆ ಹೆಚ್ಚು ಶ್ರಮಿಸುವುದಾಗಿ ತಿಳಿಸಿದ ಅವರು ತಮ್ಮನ್ನು ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸಂಘದ ಉಪಾಧ್ಯಕ್ಷರು, ಸೇರಿ ಎಲ್ಲ ನಿರ್ದೇಶಕರು ಮತ್ತು ಆಶೀರ್ವದಿಸಿದ ಶಾಸಕರಾದ ಎಚ್. ಡಿ. ರೇವಣ್ಣ ಹಾಗೂ ಡಾ. ಸೂರಜ್ ರೇವಣ್ಣನವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ನಟ್ಟೇಕೆರೆ ನಾಗರಾಜು, ತಾ.ಪಂ.ಮಾಜಿ ಸದಸ್ಯ ಗ್ಯಾರಹಳ್ಳಿ ರವೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ರಂಗಸ್ವಾಮಿ, ಮಾಜಿ ನಿರ್ದೇಶಕ ಸತೀಶ್, ದೊಡ್ಡಕರಡೇವು ಗ್ರಾಪಂ ಮಾಜಿ ಅಧ್ಯಕ್ಷ ಮಧುಕರಡೇವು, ಬಳದರೆ ಗ್ರಾಪಂ ಮಾಜಿ ಅಧ್ಯಕ್ಷ ಅನಂತ್‌ಕುಮಾರ್, ಅರಣ್ಯ ಸಮಿತಿ ಸದಸ್ಯ ವೆಂಕಟರಮಣ ಸ್ವಾಮಿ, ಸಂಘದ ಉಪಾಧ್ಯಕ್ಷ ಡಿ. ಜಗದೀಶ್, ನಿರ್ದೇಶಕರುಗಳಾದ ಬಿ. ಆರ್. ಹರೀಶ್, ನಿಂಗೇಗೌಡ, ಸಿ.ಎಂ. ಮಂಜುನಾಥ್, ಡಿ.ಎಲ್. ಸೋಮಶೇಖರ್, ಸಣ್ಣೇಗೌಡ, ಜಯಲಕ್ಷಮ್ಮ ಕಾಳೇಗೌಡ, ಸುಶೀಲಮ್ಮ ಅಣ್ಣೇಗೌಡ, ಬ್ಯಾಂಕ್ ನಾಮಿನಿ ಎಸ್.ಕೆ.ಅಭಿಲಾಷ್, ಕಾರ್ಯನಿರ್ವಹಣಾಧಿಕಾರಿ ಕೀರ್ತಿಕುಮಾರ್, ಮುಖಂಡರಾದ ಉದ್ಯಮಿ ರವಿಗೌಡ, ಚಂದ್ರೇಗೌಡ, ದಿನೇಶ್, ನಂಬಿಹಳ್ಳಿ ಆನಂದ್, ಬಿ.ಎನ್.ನಾಗೇಂದ್ರ, ಸೇರಿ ಸಂಘದ ಸಹ ಕಾರ್ಯದರ್ಶಿ ಮಂಜುನಾಥ್, ಸಿಬ್ಬಂದಿಯಾದ ಸ್ಮಿತಾ, ಭಾಗ್ಯಮ್ಮ ಹಾಜರಿದ್ದರು.