ಕನ್ನಡಪ್ರಭ ವಾರ್ತೆ ಬೆಳಗಾವಿ
ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಇಲ್ಲಿನ ಗೋವಾವೆಸ್ ಮಹಾವೀರ ಭವನದಲ್ಲಿ ಅ.25 ಮತ್ತು 26 ರಂದು ಸತೀಶ ಜಾರಕಿಹೊಳಿ ಓಪನ್ ಚೆಸ್ ಟೋರ್ನಾಮೆಂಟ್ ಆಯೋಜಿಸಲಾಗಿದೆ. ರಾಷ್ಟ್ರೀಯ ಚೆಸ್ ಟೋರ್ನಾಮೆಂಟ್ ಆದರಿಂದ ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಲಿದ್ದಾರೆ ಎಂದು ಸತೀಶ ಪ್ಯಾನ್ಸ್ ಕ್ಲಬ್ ಅಧ್ಯಕ್ಷ ಇಮ್ರಾನ್ ತಪ್ಪಕೀರ್ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳಿಂದ ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಓಪನ್ ಚೆಸ್ ಟೋರ್ನಾಮೆಂಟ್ ಹಮ್ಮಿಕೊಳ್ಳಲಾಗುತ್ತಿದೆ. ಒಳ್ಳೆಯ ಉತ್ತಮ ಸ್ಪಂದನೆ ದೊರತ್ತಿದೆ. ಮಕ್ಕಳಿಗೂ ಇದರಿಂದ ಬಹಳಷ್ಟು ಅನುಕೂಲವಾಗಿದೆ ಎಂದರು. ಸ್ಪರ್ಧಾಳುಗಳಿಗೆ ಊಟ, ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಗೋವಾ ವಿವಿಧ ರಾಜ್ಯಗಳಿಂದ ಚಾಂಪಿಯನ್ ಸ್ಪರ್ಧಾಳುಗಳು ಆಗಮಿಸಲಿದ್ದಾರೆ. ಓಪನ್ ಚೆಸ್ ಟೋರ್ನಾಮೆಂಟ್ ಆದರಿಂದ ಸ್ಪರ್ಧಿಸುವವರಿಗೆ ₹1000 ಸಾವಿರ ಪ್ರವೇಶ ಪೀ ನಿಗದಿ ಪಡಿಸಲಾಗಿದೆ. 16 ವರ್ಷದೊಳಗಿನ ಸ್ಪರ್ಧಾಳುಗಳಿಗೆ ₹800 ಪ್ರವೇಶ ಫೀ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.ಸಂಸದೆ ಪ್ರಿಯಂಕಾ ಜಾರಕಿಹೊಳಿ, ಖ್ಯಾತ ವೈದ್ಯ ಡಾ.ಗಿರೀಶ ಸೋನವಾಲ್ಕರ್, ಯುವ ನಾಯಕ ರಾಹುಲ್ ಜಾರಕಿಹೊಳಿ, ಓಪನ್ ಚೆಸ್ ಟೋರ್ನಾಮೆಂಟ್ ಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಓಪನ್ ಚೆಸ್ ಟೋರ್ನಾಮೆಂಟ್ ಆಯೋಜನೆಗೆ ಸಹಾಯ-ಸಹಕಾರ ನೀಡಿದ್ದಾರೆ. ಆಗಮಿಸಿದ ಮಕ್ಕಳಿಗೆ ಸುಸಜ್ಜಿತವಾದ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡದ್ದಾರೆ. ಈ ಭಾಗದ ಮಕ್ಕಳು ರಾಷ್ಟ್ರೀಯಮಟ್ಟದಲ್ಲಿ ಬೆಳೆಯಬೇಕು ಉದ್ದೇಶದಿಂದ ಈ ಕ್ರೀಡೆಯನ್ನು ಆಯೋಜಿಸುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದು ಜೀವನದಲ್ಲಿ ಯಶಸ್ಸು ಕಾಣಬೇಕು. ಸಚಿವ ಸತೀಶ ಜಾರಕಿಹೊಳಿ ಅವರ ಆಶೀರ್ವಾದಿಂದ ಕಳೆದ 3 ವರ್ಷಗಳಿಂದ ಸತೀಶ ಜಾರಕಿಹೊಳಿ ಓಪನ್ ಚೆಸ್ ಟೋರ್ನಾಮೆಂಟ್ ನಡೆಸಲಾಗುತ್ತಿದೆ. ಸಹಸ್ರಾರು ಸ್ಪರ್ಧಾಳುಗಳು ಭಾಗವಹಿಸಿ ವಿಜೇತರಾಗಿದ್ದಾರೆ. ದೇಶದಲ್ಲಿ ಹೆಚ್ಚಿನ ಪ್ರಮಾಣದ ಬಹುಮಾನ ಇತರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಭಾರಿ ಅಂದಾಜು ಒಟ್ಟು₹. 4 ಲಕ್ಷ ನಗದು ಬಹುಮಾನ ನೀಡಲಾಗುವುದು. ಮೊದಲ ಬಹುಮಾನ ₹1 ಲಕ್ಷ ಮತ್ತು ಟ್ರೋಫಿ, ಎರಡನೇ ಬಹುಮಾನ ₹50 ಸಾವಿರ, ಟ್ರೋಫಿ ಹಾಗೂ ಮೂರನೇ ಬಹುಮಾನ ₹25 ಸಾವಿರ ಮತ್ತು ಟ್ರೋಫಿ ನೀಡಿ ಗೌರವಿಸಲಾಗುವುದು. ಉಳಿದ ಸ್ಪರ್ಧಾಳುಗಳಿಗೆ ಸಮಾನಾಧಕರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.ದೀಕ್ಷಾ ಪೂಜಾರಿ ಮಾತನಾಡಿ, ಸತೀಶ ಜಾರಕಿಹೊಳಿ ಫೌಂಡೇಶನ್‌ದಿಂದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಸುವ ಮಹತ್ವದ ಕಾರ್ಯವನ್ನು ಮಾಡಲಾಗುತ್ತಿದೆ. ಕಳೆದ ಬಾರಿ ವಿದೇಶ ಸ್ಪರ್ಧಾಳುಗಳು ಆಗಮಿಸಿ ವಿಜೇತರಾಗಿದ್ದಾರೆ. ಚೆಸ್ ಆಡುವುದರಿಂದ ಮಕ್ಕಳ ಜ್ಞಾನ ವೃದ್ದಿಯಾಗಲಿದೆ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸಬೇಕು ಎಂದು ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ನಿಲೇಶ ಬಂಡಾರಿ, ಬಂಡಾರಿ, ಜಾಹೀದ್ ವಂಟಮೂರಿ, ವಿಕ್ಕಿ ಸಿಂಗ್, ದಿಲಾವರ್ ಪಂಡಾರಿ, ಖಾದೀರ್ ಶೇಖ ,ಆಕಾಶ ಮಡಿವಾಳ ಹಾಗೂ ಇತರರು ಇದ್ದರು.