ಸೊಲಬಕ್ಕನವರ ಹೊಸತನಕ್ಕೆ ಮಾದರಿ-ಸಾಹಿತಿ ಸತೀಶ ಕುಲಕರ್ಣಿ

KannadaprabhaNewsNetwork |  
Published : Nov 20, 2024, 12:31 AM IST
ಪೊಟೋ ಪೈಲ್ ನೇಮ್ ೧೯ಎಸ್‌ಜಿವಿ೧     ತಾಲೂಕಿನ  ಗೊಟಗೋಡಿಯ ಶಿಲ್ಪ ಕಲಾ ಕುಟೀರದಲ್ಲಿ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ  | Kannada Prabha

ಸಾರಾಂಶ

ನಡೆ, ನುಡಿ ಹಾಗೂ ಸಾಹಸದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಡಾ. ಟಿ.ಬಿ. ಸೊಲಬಕ್ಕನವರ ಹೊಸತನಕ್ಕೆ ಮಾದರಿ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಶಿಗ್ಗಾಂವಿ: ನಡೆ, ನುಡಿ ಹಾಗೂ ಸಾಹಸದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಡಾ. ಟಿ.ಬಿ. ಸೊಲಬಕ್ಕನವರ ಹೊಸತನಕ್ಕೆ ಮಾದರಿ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.ತಾಲೂಕಿನ ಗೊಟಗೋಡಿಯ ಶಿಲ್ಪ ಕಲಾ ಕುಟೀರದಲ್ಲಿ ಜರುಗಿದ ಕಲಾ ಗುರು ಡಾ. ಟಿ.ಬಿ. ಸೊಲಬಕ್ಕನವರ ೪ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಾ ಪರಂಪರೆಗೆ ಹೊಸ ಮೆರುಗು ತಂದ ಸೊಲಬಕ್ಕನವರ ಕಲಾ ಯಾನವನ್ನು ವಿಸ್ತರಿಸಿಕೊಂಡು ಹೋಗುವ ಸವಾಲುಗಳು ನಮ್ಮ ಮೇಲಿವೆ. ಪುಣ್ಯಸ್ಮರಣೆಯ ನೆಪದಲ್ಲಿ ಅವರ ಕಲಾ ಸೇವೆ ಸ್ಮರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜಾನಪದ ವಿದ್ವಾಂಸ ಪ್ರೊ. ಡಾ. ಶ್ರೀಶೈಲ ಹುದ್ದಾರ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಬಂದ ಡಾ.ಟಿ.ಬಿ. ಸೊಲಬಕ್ಕನವರ ಅಸಾಮಾನ್ಯ ಸಾಧನೆ ಮಾಡಿದರು. ಅವರ ಮುನ್ನೋಟ ಹಾಗೂ ಕನಸುಗಳು ಅತ್ಯದ್ಭುತ. ಸಾಧನೆಗೆ ಸಮಯದ ಅಭಾವ ಇದೆ ಎನ್ನುತ್ತಲೇ ಸಾಧನೆಯತ್ತ ಸಾಗಲು ನಮ್ಮನ್ನು ಎಚ್ಚರಿಸುತ್ತಿದ್ದರು. ಅವರ ಸಾಧನೆಯ ಬದುಕು ನಮಗೆ ಸ್ಫೂರ್ತಿ ಎಂದರು.

ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಂಚಾಲಕ ಸದಸ್ಯ ಕರಿಯಪ್ಪ ಹಂಚಿನಮನಿ ಮಾತನಾಡಿ, ಕಲೆಯ ಎಲ್ಲ ಆಯಾಮಗಳನ್ನು ಅನುಭವಿಸಿ ಕಲಾ ಲೋಕದ ಮೇರು ಪರ್ವತ ಏರಿದ ಡಾ.ಟಿ.ಬಿ. ಸೊಲಬಕ್ಕನವರ ಯುವ ಕಲಾವಿದರಿಗೆ ಸದಾ ಪ್ರೇರಕ ಶಕ್ತಿಯಾಗಿದ್ದರು. ಅವರ ವಿಭಿನ್ನ ಆಲೋಚನಾ ಕ್ರಮ ನಮ್ಮನ್ನೆಲ್ಲ ಸಾಧನೆಯತ್ತ ಸಾಗಲು ಹುರಿದುಂಬಿಸುತ್ತದೆ ಎಂದರು.ನಿವೃತ್ತ ಶಿಕ್ಷಕ ಪಿ.ಎಸ್. ಯಲಿಗಾರ ಮಾತನಾಡಿ, ಸಹಪಾಠಿಯಾಗಿದ್ದ ಡಾ.ಟಿ.ಬಿ. ಸೊಲಬಕ್ಕನವರ ಬಾಲ್ಯದಿಂದಲೂ ಪ್ರತಿಭಾವಂತ. ತನ್ನ ಪ್ರತಿಭೆಯನ್ನು ಒರೆಗೆ ಹಚ್ಚುತ್ತಲೇ ಸಾಧನೆಯತ್ತ ಮುಖ ಮಾಡಿದರು ಎಂದರು.ಶಿಲ್ಪ ಕಲಾ ಕುಟೀರದ ಮುಖ್ಯಸ್ಥ ರಾಜಹರ್ಷ ಸೊಲಬಕ್ಕನವರ ಮಾತನಾಡಿ, ನಮ್ಮ ತಂದೆ ಸಾಧನೆ ಮಾಡಿದ ಬಗ್ಗೆ ಎಂದಿಗೂ ಹೇಳಿಕೊಳ್ಳಲಿಲ್ಲ. ನಾನೇನಾದರೂ ಸಾಧನೆ ಮಾಡಿದ್ದರೆ ಸಾಂಘಿಕ ರೂಪದ ಶಕ್ತಿ ಕಾರಣ. ಪ್ರತಿಯೊಬ್ಬರ ಸಹಕಾರ ಇಲ್ಲದಿದ್ದರೆ ಗುರುತಿಸಿಕೊಳ್ಳಲು ಆಗುತ್ತಿರಲಿಲ್ಲ ಎಂದು ಭಾವಿಸಿದ್ದರು. ಅವರ ಸರಳತೆ, ಸತತ ಕೆಲಸ, ಶುದ್ಧ ಚಾರಿತ್ರ್ಯ ನಮಗೆ ಪ್ರೇರಣೆ ಎಂದರು.ಗೂಳಪ್ಪ ಅರಳಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬ.ಫ. ಯಲಿಗಾರ, ಬಸೆಟ್ಟೆಪ್ಪ ಯಲಿಗಾರ, ಶಿವಾನಂದ ಮ್ಯಾಗೇರಿ, ಸಾವಿತ್ರೆಮ್ಮ ಸೊಲಬಕ್ಕನವರ, ಬಸವರಾಜ ಬೂದಿಹಾಳ, ಜಯಶ್ರೀ ಸೊಲಬಕ್ಕನವರ, ಶರೀಫ ಮುದ್ದೇಬಿಹಾಳ, ವಿರೂಪಾಕ್ಷ ಕದಲ, ಅಶೋಕ ವೆಂಕಟಾಪುರ, ಗುರುಪಾದ ಹರಿಜನ, ಅಜಿತ್ ಸಂಕಣ್ಣವರ ಹಾಗೂ ಶಿಲ್ಪ ಕಲಾ ಕುಟೀರದ ಕಲಾವಿದರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ