ಸುತ್ತೂರು ಜಾತ್ರೆ ದಕ್ಷಿಣ ಭಾರತದಲ್ಲಿ ನಡೆಯುವ ಬಹುದೊಡ್ಡ ಜಾತ್ರೆ

KannadaprabhaNewsNetwork |  
Published : Feb 02, 2024, 01:04 AM IST
ಸುತ್ತೂರು ಜಾತ್ರೆ ದಕ್ಷಿಣ ಭಾರತದಲ್ಲಿ ನಡೆಯುವ ಬಹುದೊಡ್ಡ ಜಾತ್ರೆ-  ಮಾಜಿ ಸಚಿವ ಎನ್. ಮಹೇಶ್ | Kannada Prabha

ಸಾರಾಂಶ

ಸುತ್ತೂರು ಶ್ರೀ ಕ್ಷೇತ್ರದಲ್ಲಿ 6 ದಿನಗಳ ಕಾಲ ನಡೆಯುವ ಜಾತ್ರೆ ದಕ್ಷಿಣ ಭಾರತದಲ್ಲೆ ನಡೆಯುವ ಬಹುದೊಡ್ಡ ಜಾತ್ರೆಯಾಗಿದೆ ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದರು.

ಸುತ್ತೂರು ಜಾತ್ರೆ ಫೆ.6 ರಿಂದ 11 ರವರೆಗೆ । ವಿವಿಧ ಗಣ್ಯರಿಂದ ರಥೋತ್ಸವಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಸುತ್ತೂರು ಶ್ರೀ ಕ್ಷೇತ್ರದಲ್ಲಿ 6 ದಿನಗಳ ಕಾಲ ನಡೆಯುವ ಜಾತ್ರೆ ದಕ್ಷಿಣ ಭಾರತದಲ್ಲೆ ನಡೆಯುವ ಬಹುದೊಡ್ಡ ಜಾತ್ರೆಯಾಗಿದೆ ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದರು.

ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿ 6 ದಿನಗಳ ಕಾಲ ಜರುಗುವ ಜಾತ್ರಾ ಮಹೋತ್ಸವದ ತಯಾರಿಗೆ ಸಾಂಪ್ರದಾಯಿಕವಾಗಿ ಜಾತ್ರೆಯ ಸಂಗತಿ ಮತ್ತು ಸಂದೇಶವನ್ನು ಎರಡು ಜಿಲ್ಲೆಗಳ ಜನರಿಗೆ ತಿಳಿಸುವ ಕೆಲಸವನ್ನು ಶ್ರೀ ಸುತ್ತೂರು ಮಠ ಮಾಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ಜಾತಿ ಬೇಧವಿಲ್ಲದೆ ಪಾಲ್ಗೊಳ್ಳುವ ವಿಭಿನ್ನ ಜಾತ್ರೆ ಇದಾಗಿದೆ. ಕೃಷಿ ಆಧಾರಿತ ಈ ಉತ್ಸವ ಜಾತ್ರೆ ಯಶಸ್ವಿಯಾಗಲಿ ಎಂದು ಶುಭಕೋರಿದರು. ಮಾಜಿ ಶಾಸಕ ಎಸ್. ಬಾಲರಾಜು ಮಾತನಾಡಿ, ಸುತ್ತೂರು ಜಾತ್ರೆ ಎಂಬುದು ಸಾಂಸ್ಕೃತಿಕ ಉತ್ಸವವಿದ್ದಂತೆ. ಎಲ್ಲಾ ವರ್ಗದ ಜನರನ್ನು ಸಂಘಟಿಸುವುದು, ಜನ ಸೇರಿಸುವುದು, ಸಾಂಸ್ಕೃತಿಕ ಚಟುವಟಿಕೆ ಕಲಿತವರಿಗೆ ಅವಕಾಶ ಕಲ್ಪಿಸುವುದು ಇನ್ನಿತರೆ ಕಾರಣಗಳಿಗಾಗಿ ಜಾತ್ರೆ ಪ್ರತಿಬಾರಿಯೂ ವಿಭಿನ್ನವಾಗಿ ಜರುಗಲಿದ್ದು ನಾವೆಲ್ಲರೂ ಜಾತ್ರೆಯಲ್ಲಿ ಪಾಲ್ಗೊಳ್ಳೋಣ ಎಂದರು. ಸುತ್ತೂರು ಜಾತ್ರಾ ಮಹೋತ್ಸವ ಫೆ.6 ರಿಂದ 11 ರವರೆಗೆ ನಡೆಯುವ ಹಿನ್ನೆಲೆ ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿದ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ವಿವಿಧ ಗಣ್ಯರು, ಸಂಘಟನೆಗಳ ಪದಾಧಿಕಾರಿಗಳು ಜಂಟಿಯಾಗಿ ಚಾಲನೆ ನೀಡಿದರು.ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಮಹದೇವ ಪ್ರಸಾದ್, ಕಾರ್ಯದರ್ಶಿ ಬಾಲಸುಬ್ರಮಣ್ಯ ಸ್ವಾಮಿ, ಗೌರವಾಧ್ಯಕ್ಷ ಆಲಹಳ್ಳಿ ಮಠದ ಶಿವಕುಮಾರಸ್ವಾಮಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮಿಜಿ, ಅ.ಭಾ.ವಿ. ಮಹಾಸಭಾ ಮಹಿಳಾ ಘಟಕ ಅಧ್ಯಕ್ಷ ಜಗದಾಂಬ ಸದಾಶಿವಮೂರ್ತಿ, ಕದಳಿ ವೇದಿಕೆ ಅಧ್ಯಕ್ಷ ತೋಟೇಶ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಿ.ಎಸ್.ಎಂ. ಪ್ರಸಾದ್ ಶರಣಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಗರಾಜು, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯಕ, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಪ್ರಾಂಶುಪಾಲ ಮೂಕಳ್ಳಿ ಮಹದೇವಸ್ವಾಮಿ ಇನ್ನಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ