ಸವದತ್ತಿ: ಪಟ್ಟಣದ ಪುರಸಭೆ ಬಿಜೆಪಿಯ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಪಕ್ಷವನ್ನು ತೊರದು ಶಾಸಕ ವಿಶ್ವಾಸ ವೈದ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಬೆಂಬಲಾರ್ಥವಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವದಾಗಿ ಸೇರ್ಪಡೆಗೊಂಡ ಬಿಜೆಪಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪುರಸಭೆ ಸದಸ್ಯರಾದ ಶಿವಾನಂದ ಹೂಗಾರ, ಮೌಲಾಸಾಬ ತಬ್ಬಲಜಿ, ಮಂಜುನಾಥ ಬೆಟಸೂರ, ಪ್ರವೀಣ ಪಟ್ಟಣಶೆಟ್ಟಿ ಹಾಗೂ ಬಿಜೆಪಿ ಪ್ರಮುಖರಾದ ರಾಮಾಚಾರಿ ಲಮಾಣಿ, ರಾಜು ಹಳಕಟ್ಟಿ, ರಜಾಕ ಗುಡಗುಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಪಕ್ಷದ ಶಾಲು ಹಾಕಿ ಶಾಸಕ ವಿಶ್ವಾಸ ವೈದ್ಯ ಸ್ವಾಗತಿಸಿದರು.