ಕನ್ನಡಪ್ರಭ ವಾರ್ತೆ ಅಥಣಿ
ಬಿಡಿಸಿಸಿ ಬ್ಯಾಂಕ್ ಅಧಿಕಾರಿ ಮಾಯಪ್ಪ ಅಡಲಗಿ ಮಾತನಾಡಿ, ಶಾಸಕರ ಮನೆಯಲ್ಲಿ ನಡೆದಿದೆ ಎನ್ನಲಾಗುವ ಘಟನೆಯಲ್ಲಿ ಶಾಸಕರ ಯಾವುದೇ ಹಸ್ತಕ್ಷೇಪ ಇಲ್ಲ. ಅಧ್ಯಕ್ಷರ ವಾಹನ ಖರೀದಿಗೆ ₹೧೦ ಸಾವಿರ ಹಣ ನೀಡದೆ ಇದ್ದದ್ದರಿಂದ ನಮ್ಮ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಇದರ ಬಗ್ಗೆ ಈಗಾಗಲೆ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ನಾವು ಸಾರ್ವಜನಿಕ ಸೇವೆಗೆ ನಿಷ್ಪಕ್ಷಪಾತದಿಂದ ಕೆಲಸ ಮಾಡುತ್ತೇವೆ. ಈ ಘಟನೆಯ ಹಿಂದೆ ರಾಜಕೀಯ ದುರುದ್ದೇಶ ಅಡಗಿದ್ದು, ನಮಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಬ್ಯಾಂಕ್ ನಿರ್ದೇಶಕರು ನಮಗೆ ನ್ಯಾಯ ಒದಗಿಸಬೇಕು. ನಾಳೆಯಿಂದ ನಾವು ಕರ್ತವ್ಯಕ್ಕೆ ಹೋಗುತ್ತೇವೆ. ಬ್ಯಾಂಕ್ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕರೆನ್ನವರ ಸಿಬ್ಬಂದಿಗಳಿಂದ ಅಕ್ರಮವಾಗಿ ಹಣ ಪಡೆದಿರುವ ಬಗ್ಗೆ ದಾಖಲೆಗಳನ್ನು ಮಾಧ್ಯಮಗಳಿಗೆ ಹಾಜರಪಡಿಸುತ್ತೇವೆ ಎಂದು ತಿಳಿಸಿದರು.ಈ ವೇಳೆ ಸಿಬ್ಬಂದಿಗಳಾದ ಮಹೇಶ ಮಾಳಿ, ಶಿವಾನಂದ ಬುರುಡ, ಹಣಮಂತ ಸಂಕ್ರಟ್ಟಿ, ಗೈಬುಸಾ ಮಕಾಂದಾರ, ಸಿದ್ದಾರೂಢ ಗುಮತಾಜ, ಮಹಾದೇವ ಉಳ್ಳಾಗಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೋಟ್‌ಶಾಸಕರು ನಿಮ್ಮ ಯುನಿಯನ್ ಆಂತರಿಕ ಸಮಸ್ಯೆಯನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿ ನಮ್ಮ ಮನೆಯಿಂದ ಹೊರಗಡೆ ಕಳುಹಿಸಿದ್ದರು. ಆದರೆ, ಶಾಸಕರ ಬೆಂಬಲಿಗರು ನಮ್ಮ ಯೂನಿಯನ್ ಅಧ್ಯಕ್ಷರ ಜೊತೆ ಮಾತನಾಡುವಾಗ ವಾಗ್ವಾದವಾಗಿ ಮನೆ ಆವರಣದಿಂದ ಹೊರ ಹೋಗುವಂತೆ ತಳ್ಳುತ್ತಿದ್ದ ಸಂದರ್ಭದಲ್ಲಿ ಜಾರಿ ಬಿದ್ದು ತಲೆಗೆ ಟೇಬಲ್ ಬಡಿದು ಸ್ವಲ್ಪ ರಕ್ತಸ್ರಾವವಾಗಿದೆ. ಇದನ್ನೇ ದೊಡ್ಡ ರಾದ್ಧಂತ ಮಾಡಿ, ಶಾಸಕರ ಮತ್ತು ಅವರ ಪುತ್ರನ ಮೇಲೆ ಸುಳ್ಳು ಆರೋಪ ಮಾಡಿ ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಲಾಗುತ್ತಿದೆ.ಚೇತನಕುಮಾರ ದಳವಾಯಿ, ಬ್ಯಾಂಕ್ ಯುನಿಯನ್‌ನ ಸದಸ್ಯ