14ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಸ್ಥಾಪಕರ ದಿನಾಚರಣೆ

KannadaprabhaNewsNetwork |  
Published : Aug 13, 2026, 03:00 AM IST
ಫೋಟೋ: ೧೧ಪಿಟಿಆರ್-ಶೀಂಟೂರು  | Kannada Prabha

ಸಾರಾಂಶ

ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ೧೫ನೇ ವರ್ಷದ ಸ್ಥಾಪಕರ ದಿನಾಚರಣೆ ಶೀಂಟೂರು ಸ್ಮೃತಿ-೨೨೬ ಕಾರ್ಯಕ್ರಮ ೧೪ರಂದು ಬೆಳಗ್ಗೆ ೧೦ ಗಂಟೆಗೆ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಲಯದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ನಡೆಯಲಿದೆ.

ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ೧೫ನೇ ವರ್ಷದ ಸ್ಥಾಪಕರ ದಿನಾಚರಣೆ ಶೀಂಟೂರು ಸ್ಮೃತಿ-೨೨೬ ಕಾರ್ಯಕ್ರಮ ೧೪ರಂದು ಬೆಳಗ್ಗೆ ೧೦ ಗಂಟೆಗೆ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಲಯದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ನಡೆಯಲಿದೆ.

ಪುತ್ತೂರು ಉಪ ಪೊಲೀಸ್‌ ಅಧೀಕ್ಷಕ ಪ್ರಮೋದ್ ಕುಮಾರ್ ಬಿ ಉದ್ಘಾಟಿಸಲಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ಸರ್ಕಾರಿ ಪದವಿ ಪೂರ್ಣ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ಡಾ. ರೇವತಿ ನಂದನ್ ಅವರಿಗೆ ಶೀಂಟೂರು ಸನ್ಮಾನ ಪ್ರದಾನಿಸಿ ಗೌರವಿಸಲಾಗುವುದು. ದ.ಕ. ಮಂಗಳೂರು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಸ್. ಶಶಿಧರ್ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ.

ಮೈಸೂರು ಅಂತರ್ ಸಂತೆ ಉಪಪ್ರಾಂಶುಪಾಲ ಡಾ. ಸುಂದರ್ ಕೇನಾಜೆ ಶೀಂಟೂರು ಸಂಸ್ಮರಣೆ ಮಾಡಲಿದ್ದಾರೆ. ಸವಣೂರು ಎಸ್‌ಎನ್‌ಆರ್ ರೂರಲ್ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿ ಎನ್. ಸುಂದರ್ ರೈ ನಡುಮನೆ ಮುಖ್ಯ ಅತಿಥಿಯಾಗಿ ಭಾಗವಹಿಲಿದ್ದಾರೆ ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರಿ ರತ್ನ ರೊ. ಸವಣೂರು ಕೆ. ಸೀತಾರಾಮ ರೈ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜ್‌ನ ಪ್ರಾಂಶುಪಾಲ ಡಾ. ರಾಜಲಕ್ಷ್ಮಿ ಎಸ್ ರೈ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಶಶಿಕಲಾ ಎಸ್ ರೈ ತಿಳಿಸಿದ್ದಾರೆ.

ಶೀಂಟೂರು ಸ್ಮೃತಿ, ಸನ್ಮಾನ, ಶಿಷ್ಯ ವೇತನ

ಪ್ರತಿ ವರ್ಷ ಆ.೧೪ರಂದು ದಿ. ಶೀಂಟೂರು ನಾರಾಯಣ ರೈ ಅವರ ಜನ್ಮದಿನಾಚರಣೆಯನ್ನು ಸ್ಥಾಪಕರ ದಿನಾಚರಣೆಯನ್ನಾಗಿ ಶೀಂಟೂರು ಸ್ಮೃತಿ ಶಿರೋನಾಮೆಯೊಂದಿಗೆ ಆಚರಿಸಲಾಗುತ್ತಿದೆ. ನಿವೃತ್ತ ಯೋಧ ಅಥವಾ ನಿವೃತ್ತ ಶಿಕ್ಷಕರನ್ನು ಶೀಂಟೂರು ಸನ್ಮಾನದೊಂದಿಗೆ ಗೌರವಿಸಲಾಗುತ್ತದೆ. ಶೀಂಟೂರು ಸಂಸ್ಮರಣೆ ಉಪನ್ಯಾಸ ನಡೆಯುತ್ತದೆ. ಜೊತೆಗೆ ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದ ೧೦ ವಿದ್ಯಾರ್ಥಿಗಳಿಗೆ ತಲಾ ರು. ೫ ಸಾವಿರ ಶಿಷ್ಯ ವೇತನ ನೀಡಲಾಗುತ್ತಿದೆ.

೨೦೨೬-೨೭ನೇ ಸಾಲಿನ್ಲಿ ಶೀಂಟೂರು ಶಿಷ್ಯ ವೇತನಕ್ಕೆ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಮಹಮ್ಮದ್ ಶಾಝಿನ್, ಇಸ್ಮತ್ ಜಹಾನ್, ಬೂಮಿಕ ಪಕ್ಕಳ, ಆಯುಷ್ ಪಿ ಗೌಡ, ಧ್ಯಾನ್, ಆಯಿಷತ್ ಹನ್ನ ಎ.ಎ., ಸಾಧನ್ ಬಿ.ಎನ್, ಪಿ. ವೈ. ಪವನ್ ಕುಮಾರ್, ಪ್ರಮೋದ್ ಜಿ ಮತ್ತು ಮುನೀಷ್ ಅವರು ಆಯ್ಕೆಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಮಕ್ಕಳಲ್ಲಿ ಶಿಸ್ತು
ಶಿಕ್ಷಣವು ದೇಶದ ಪ್ರಗತಿಗೆ ಮೂಲಾಧಾರ