ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಬಸವಭವನದಲ್ಲಿ ಮಂಗಳವಾರ ಸ್ವಾತಂತ್ರ್ಯವೀರ ಸಾವರ್ಕರ್ ಪ್ರತಿಷ್ಠಾನದಿಂದ ಏರ್ಪಡಿಸಿದ್ದ 143ನೇ ಜಯಂತಿಯಲ್ಲಿ ಅವರು ಮಾತನಾಡಿದರು. ಸಾವರ್ಕರ್ ಅವರ ಅತ್ತಿಗೆ ಯಶೋಧಾ ಅವರು ಪತ್ರ ಬರೆದಿದ್ದಕ್ಕೆ ಉತ್ತರಿಸಿದ್ದ ಅವರು, ನಾವು ಬಯಸಿ ಸ್ವಾತಂತ್ರ್ಯಹೋರಾಟದಲ್ಲಿ ತೊಡಗಿದ್ದೇವೆ ಎಂದು ಉತ್ತರಿಸಿದ್ದರಂತೆ. ಅವರ ಹೆಸರು ಈಗಿನವರಿಗೆ ಬರೀ ವಿವಾದಗಳಿಂದ ಮಾತ್ರ ಗೊತ್ತಾಗಿದೆ. ಆದರೆ ಅವರ ತ್ಯಾಗ, ಬಲಿದಾನ, ಅವರ ಚಿಂತನೆಗಳನ್ನು ದೇಶಭಕ್ತಿಯನ್ನು ಬಡಿದೆಬ್ಬಿಸುತ್ತವೆ ಎಂದರು.ಅಂದಿನ ಕಾಂಗ್ರೆಸ್ ಅಭದ್ರತೆಯಿಂದ ಕಮ್ಯುನಿಸ್ಟ್‌ರನ್ನು ನೆಚ್ಚಿ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಪಠ್ಯದಿಂದ ಕೈಬಿಟ್ಟಿತ್ತು. ಅಂದಿನ ಶಿಕ್ಷಣ ಸಚಿವ ಅಬ್ದುಲ್ ಕಲಾಂ ಅವರು ಈ ಬಗ್ಗೆ ಚಕಾರ ಎತ್ತಿರಲಿಲ್ಲ. ಚಂದ್ರಶೇಖರ ಆಝಾದ, ಒನಕೆ ಓಬವ್ವ, ಮದಕರಿ ನಾಯಕರ ಪಠ್ಯಗಳಿರಲಿಲ್ಲ. ಅನೇಕ ದಶಕಗಳ ಹೋರಾಟದ ನಂತರ ಈಗ ಕೆಲವನ್ನು ಸೇರಿಸಲಾಗಿದೆ ಎಂದು ತಿಳಿಸಿದರು.ಗಾಂಧಿ ಆಶೀರ್ವಾದದಿಂದ ಪ್ರಧಾನಿಯಾಗಿದ್ದ ನೆಹರು ಅವರಿಗೆ ದೇಶದ ಜನರು ಹಾಗೂ ಕಾಂಗ್ರೆಸ್ ಮುಖಂಡರ ಬೆಂಬಲ ಇರಲಿಲ್ಲ. ಗಾಂಧಿ-ನೆಹರು ಬಿಟ್ಟು ಉಳಿದ ಹೋರಾಟಗಾರರ ಕುರಿತು ಆರ್‌ಎಸ್‌ಎಸ್ ಇತಿಹಾಸ ಹೇಳಿದರೆ ಅದು ಹೇಗೆ ತಪ್ಪಾಗುತ್ತದೆ ಎಂದು ಪ್ರಶ್ನಿಸಿದ ಅವರು, ಸಾವರ್ಕರ್ ವಾಗ್ಮಿ, ಲೇಖಕ, ಸಾಹಿತಿಯಾಗಿದ್ದರು. 1857ರ ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದರು. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಹೆಸರುಗಳನ್ನು ನೀಡಿದರು. ಚಾಪೆಕರ ಸಹೋದರರು, ಮದನ್‌ಲಾಲ್ ಡಿಂಗ್ರಾ ಅವರಂತಹ ಅನೇಕ ಕ್ರಾಂತಿಕಾರಿಗಳಿಗೆ ಪ್ರೇರಕರಾಗಿದ್ದರು ಎಂದು ವಿವರಿಸಿದರು. ಹಿಂದುಗಳ ಜನನ ಪ್ರಮಾಣ 2.1ರ ಕ್ಕಿಂತಲು ಹೆಚ್ಚಿರಬೇಕು. ಸಧ್ಯ 1.7 ಮಾತ್ರ ಇದೆ. ಜನಸಂಖ್ಯೆ ಕಡಿಮೆಯಾದಲ್ಲಿ ಜನಾಂಗವೇ ಕುಸಿದು ಹೋಗುತ್ತದೆ. ಇದರಿಂದ ದೇಶದ ವಿಭಜನೆಗಳಾಗುತ್ತದೆ. ಬೆಂಗಳೂರಿನ ಶಿವಾಜಿನಗರ, ಶಾಂತಿನಗರ, ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲಿ ಯಾವುದೇ ಪಕ್ಷದ ಹಿಂದು ಅಭ್ಯರ್ಥಿಗಳು ಶಾಸಕರಾಗಲು ಸಾಧ್ಯ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದುಗಳು ಹೆಚ್ಚು ಮಕ್ಕಳನ್ನು ಪಡೆಯಬೇಕು. ಅದು ಸಮಾಜ ಮತ್ತು ದೇಶ ಸೇವೆಯಾಗುತ್ತದೆ ಎಂದು ತಿಳಿಸಿದರು.ಬೆಂಗಳೂರಿನ ಫ್ಲೈಓವರ್‌ಗೆ ಸಾವರ್ಕರ್ ಹೆಸರಿಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಒಪ್ಪಲಿಲ್ಲ. ಯಾರು ಸಾವರ್ಕರ್ ಎಂದು ಪ್ರಶ್ನಿಸಿದ್ದರು. ಅಧಿಕಾರದಿಂದ ಕೆಳಗಿಳಿದ ಮೇಲೆ ಸಿದ್ದರಾಮಯ್ಯ ಯಾರು ಎಂದು ಜನರೇ ಪ್ರಶ್ನೆ ಕೇಳುತ್ತಾರೆ ಎಂದು ಬಿ.ಎಲ್ ಸಂತೋಷ ವ್ಯಂಗ್ಯವಾಡಿದರು. ಕಾಂಗ್ರೆಸ್‌ನವರು ಸಾವರ್ಕರ್ ಅವರನ್ನು ಇತಿಹಾಸದಿಂದ ತೆಗೆದರು. ಬೇಕು ಅಂತಲೇ ಅದುಮಿಟ್ಟರು. ನೇತಾಜಿ ಸುಭಾಸಚಂದ್ರ ಬೋಸ್ ಹಾಗೂ ಸಾವರ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅನ್ಯಾಯ ಅಷ್ಟಿಷ್ಟಲ್ಲ ಎಂದು ದೂರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿರಿಯ ನ್ಯಾಯವಾದಿ ತಾತಾಸಾಹೇಬ ಬಾಂಗಿ ಮಾತನಾಡಿದರು. ಕೃಷ್ಣಾನಂದ ಅವಧೂತರು ಆಶೀರ್ವಚನ ನೀಡಿದರು. ಈ ವೇಳೆ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಮಾಜಿ ಸಚಿವ ಮುರಗೇಶ ನಿರಾಣಿ, ಶಾಸಕ ಜಗದೀಶ ಗುಡಗುಂಟಿ, ಶಾಸಕ ಸಿದ್ದು ಸವದಿ, ಎಂಎಲ್‌ಸಿ ಹಣಮಂತ ನಿರಾಣಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಿ.ಎಸ್.ನ್ಯಾಮಗೌಡ, ರಾಜಶೇಖರ ಶೀಲವಂತರ, ಆರ್‌ಎಸ್‌ಎಸ್‌ನ ಅರವಿಂದರಾವ ದೇಶಪಾಂಡೆ, ಡಾ.ವಿಜಯಲಕ್ಷ್ಮೀ ತುಂಗಳ ಮುಖಂಡರಾದ ಉಮೇಶ ಮಹಬಳಶೆಟ್ಟಿ, ಮೋಹನ ಜಾಧವ, ಡಾ.ರಂಗನಾಥ ಸೋನವಾಲ್ಕರ್, ರಾಕೇಶ್ ಲಾಡ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಶ್ರೀಕರ ಸವಾಯಿ ಪ್ರಾರ್ಥನಾಗೀತೆ ಹಾಡಿದರು. ಡಾ.ಅಜಯ ಕುಲಕರ್ಣಿ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಶೈಲೇಶ್ ಆಪ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರ ಹವಾಲ್ದಾರ ವಂದಿಸಿದರು.