ಧರ್ಮ ಉಳಿಕೆಯಲ್ಲಿ ಬಣಜಿಗರ ಕೊಡಗೆ ಸ್ಮರಣಾರ್ಹ

KannadaprabhaNewsNetwork |  
Published : May 28, 2026, 02:45 AM IST
ಧರ್ಮ ಉಳಿಕೆಯಲ್ಲಿ ಬಣಜಿಗರ ಕೊಡಗೆ ಸ್ಮರಣಾರ್ಹ : ಆನಂದ ದೇವರು. | Kannada Prabha

ಸಾರಾಂಶ

ಸಮಾಜದ ಎಲ್ಲ ಸಮುದಾಯಗಳೊಡನೆ ಸಹೃದಯತೆಯಿಂದ ಬೆರೆತು ತಮ್ಮ ಶಿಸ್ತು, ಪ್ರಾಮಾಣಿಕತೆ, ಸೇವಾ ಧ್ಯೇಯದೊಡನೆ ಕಾಯಕ ನಮ್ಮ ನಾಯಕ ಎಂದು ಜೀವನ ನಡೆಸುತ್ತಿರುವ ಬಣಜಿಗ ಸಮಾಜ ಧರ್ಮದ ಉಳಿಕೆಯಲ್ಲಿ ಆದಯ್ಯ, ಸಿರಿಯಾಳ, ಸಕಲ ಸಿರಿಸೌಭಾಗ್ಯ ತೊರೆದು ಕಲ್ಯಾಣದತ್ತ ನಡೆದು ಆದ್ಯ ವಚನಕಾರ್ತಿ ಅಕ್ಕಮಹಾದೇವಿ, ಯಡಿಯೂರು ಸಿದ್ದಲಿಂಗ ಶ್ರೀಗಳಿಂದ ಹಿಡಿದು ನಡೆದಾಡುವ ದೇವರು ಡಾ.ಶಿವಕುಮಾರ ಶ್ರೀಗಳನ್ನು ನಾಡಿಗೆ ನೀಡುವ ಮೂಲಕ ಸೌಹಾರ್ದತೆಯ ನಡುವೆಯೂ ಧರ್ಮ ರಕ್ಷಣೆಗೆ ವಿಶಿಷ್ಟ ಕೊಡುಗೆ ನೀಡಿದ್ದಲ್ಲದೇ ಧರ್ಮವಾಗಿ ಬಲವಾಗಿ ಕಟ್ಟಿ ಮುನ್ನಡೆಸಿದ ಖ್ಯಾತಿಯ ಸಮುದಾಯವಾಗಿದೆ ಎಂದು ಜಮಖಂಡಿ ಓಲೇಮಠದ ಆನಂದ ದೇವರು ನುಡಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಸಮಾಜದ ಎಲ್ಲ ಸಮುದಾಯಗಳೊಡನೆ ಸಹೃದಯತೆಯಿಂದ ಬೆರೆತು ತಮ್ಮ ಶಿಸ್ತು, ಪ್ರಾಮಾಣಿಕತೆ, ಸೇವಾ ಧ್ಯೇಯದೊಡನೆ ಕಾಯಕ ನಮ್ಮ ನಾಯಕ ಎಂದು ಜೀವನ ನಡೆಸುತ್ತಿರುವ ಬಣಜಿಗ ಸಮಾಜ ಧರ್ಮದ ಉಳಿಕೆಯಲ್ಲಿ ಆದಯ್ಯ, ಸಿರಿಯಾಳ, ಸಕಲ ಸಿರಿಸೌಭಾಗ್ಯ ತೊರೆದು ಕಲ್ಯಾಣದತ್ತ ನಡೆದು ಆದ್ಯ ವಚನಕಾರ್ತಿ ಅಕ್ಕಮಹಾದೇವಿ, ಯಡಿಯೂರು ಸಿದ್ದಲಿಂಗ ಶ್ರೀಗಳಿಂದ ಹಿಡಿದು ನಡೆದಾಡುವ ದೇವರು ಡಾ.ಶಿವಕುಮಾರ ಶ್ರೀಗಳನ್ನು ನಾಡಿಗೆ ನೀಡುವ ಮೂಲಕ ಸೌಹಾರ್ದತೆಯ ನಡುವೆಯೂ ಧರ್ಮ ರಕ್ಷಣೆಗೆ ವಿಶಿಷ್ಟ ಕೊಡುಗೆ ನೀಡಿದ್ದಲ್ಲದೇ ಧರ್ಮವಾಗಿ ಬಲವಾಗಿ ಕಟ್ಟಿ ಮುನ್ನಡೆಸಿದ ಖ್ಯಾತಿಯ ಸಮುದಾಯವಾಗಿದೆ ಎಂದು ಜಮಖಂಡಿ ಓಲೇಮಠದ ಆನಂದ ದೇವರು ನುಡಿದರು.

ತೇರದಾಳದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಬುಧವಾರ ತೇರದಾಳ ತಾಲೂಕು ಬಣಜಿಗ ಸಮಾಜ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಸಮಾರಂಭವನ್ನು ತಕ್ಕಡಿಯಲ್ಲಿ ಸಕ್ಕರೆ ತೂಗುವ ಮೂಲಕ ಚಾಲನೆ ನೀಡಿ ಮಾತನಾಡಿ, ನನ್ನ ಪಕ್ಷ ಭಕ್ತಿ, ನಮ್ಮ ಸೂತ್ರವೇ ಸಮನ್ವಯ ಸೂಚನ, ನನ್ನ ಜೈಕಾರ ಮಾನವೀಯತೆ, ನನ್ನ ಈಶ್ವರ ಬಸವೇಶ್ವರ ಎಂಬ ಸೂಕ್ತಿಯಲ್ಲಿ ವಣಿಕ ವೃತ್ತಿಯಲ್ಲಿ ತೊಡಗುತ್ತಿರುವ ಸಮುದಾಯದ ಮುಂದಿನ ಪೀಳಿಗೆಗೆ ಸಂಸ್ಕಾರದ ಕೊರತೆಯಾಗದಂತೆ ಮತ್ತು ನಮ್ಮ ಧಾರ್ಮಿಕ ಆಚರಣೆಗಳ ಹಿಂದಿನ ಮಹತ್ತತೆ ಮರೆಯಾಗದಂತೆ ಅರುಹಿ ಬೆಳೆಸಬೇಕಿದೆ ಎಂದರು.ಧಾರ್ಮಿಕತೆ, ಆಚರಣೆ, ಸಂಸ್ಕಾರಗಳು ನಾಶವಾದರೇ ನಮ್ಮತನವೇ ಮರೆಯಾದಂತೆ. ಎಲ್ಲ ತಾಯಂದಿರು ಈ ಸತ್ಯ ಅರಿತು ನಿಮ್ಮ ಮಕ್ಕಳಿಗೆ ಸಂಸ್ಕಾರ ದೀಕ್ಷೆ ತೊಡಿಸಲು ಮರೆಯಬೇಡಿ. ಇಂದು ಯುವಪೀಳಿಗೆ ಹತ್ತಾರು ವ್ಯಸನಗಳಿಗೆ ತುತ್ತಾಗಿ ಸಮಾಜದ ಅರ್ಬುದ ರೋಗದಂತಾಗುತ್ತಿದೆ. ವ್ಯಸನಮುಕ್ತ ಸಮಾಜ ನಿರ್ಮಿಸಲು ನಮ್ಮ ಶ್ರೀಮಠ ಅವಿರತ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮ ಪಟ್ಟಣಕ್ಕೂ ಬಂದು ಜಾಗೃತಿ ಮೂಡಿಸಲು ಮತ್ತು ದುಡಿಮೆಯಿಲ್ಲದೇ ಐಶಾರಾಮಿ ಬದುಕು ಬಯಸುವ ಯುವಶಕ್ತಿಗೆ ದುಡಿಯುವ ಸಂಸ್ಕೃತಿ ಬೆಳೆಸಲು ಖಂಡಿತ ಬರುವುದಾಗಿ ಅಭಯ ನೀಡಿದರು.ಸಮಾಜದ ನೂತನ ಜಿಲ್ಲಾಧ್ಯಕ್ಷ ಹೊಳಬಸು ಬಾಳಶೆಟ್ಟಿ ಮಾತನಾಡಿ, ನಮ್ಮದು ಕಾಯಕ ಸಮುದಾಯ. ಸೌಹಾರ್ದತೆಯ ಬದುಕು ಬಣಜಿಗರಲ್ಲಿ ರಕ್ತಗತವಾಗಿದೆ. ಆದರೂ ಕೆಲ ಸಮುದಾಯದ ರಾಜಕೀಯ ಪುಢಾರಿಗಳು ನಮ್ಮ ಸಮಾಜವನ್ನೇ ಗುರಿಯಾಗಿಸಿ ಅಸಭ್ಯವಾಗಿ ಟೀಕಿಸುವ, ಬೈಯುವ ಮೂಲಕ ದೊಡ್ಡವರಾಗಲು ಯತ್ನಿಸುತ್ತಿದ್ದಾರೆ. ಅಂಥ ದುರುಳರಿಗೆ ನಿರ್ಲಕ್ಷ್ಯವೇ ಉತ್ತರ ಎಂದರು. ವೇದಿಕೆಯಲ್ಲಿ ನಗರ ಘಟಕದ ಅಧ್ಯಕ್ಷ ಶ್ರೀಶೈಲ ಮೋದಿ, ತಾಲೂಕಾಧ್ಯಕ್ಷ ಮಹೇಶ ಯಾದವಾಡ, ರಬಕವಿ-ಬನಹಟ್ಟಿ ತಾಲೂಕಾಧ್ಯಕ್ಷ ಈಶ್ವರಣ್ಣಾ ಬಿದರಿ, ಉಪಾಧ್ಯಕ್ಷ, ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ, ಬೀಳಗಿ ನಗರ ಘಟಕದ ಅಧ್ಯಕ್ಷ ರಾಜು ಯಂಡಿಗೇರಿ, ತಾಲೂಕು ಮಹಿಳಾ ಘಟಕಾಧ್ಯಕ್ಷೆ ಸುನೀತಾ ಅನಿಲ ಹಂಜಿ ಉಪಸ್ಥಿತರಿದ್ದರು. ಸಾಧನೆ ಮೆರೆದ ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳನ್ನು ಹಾಗೂ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಕಮಲಕ್ಕ ವಾಲಿ ಪ್ರಾರ್ಥಿಸಿದರು. ನ್ಯಾಯವಾದಿ ಸಂತೋಷ ಪಟ್ಟಣಶೆಟ್ಟಿ ಸ್ವಾಗತಿಸಿದರು. ಶ್ರೀನಾಥ ಸೊಟ್ಟಿ ನಿರೂಪಿಸಿದರು.ಪ್ರಮೋದ ಸೊಟ್ಟಿ ವಂದಿಸಿದರು.ಸಮಾರಂಭದಲ್ಲಿ ಅಶೋಕ ಮಹಾಬಲಶೆಟ್ಟಿ, ಸಂತೋಷ ಪಟ್ಟಣಶೆಟ್ಟಿ, ದಯಾನಂದ ಬಿಜ್ಜರಗಿ, ರಮೇಶ ಪಟ್ಟಣಶೆಟ್ಟಿ, ಅರುಣ ಯಾದವಾಡ, ಬಸವರಾಜ ಪಟ್ಟಣಶೆಟ್ಟಿ, ಮಹಾಂತೇಶ ಅವರಾದಿ, ಬಲವಂತರಾಯ ಬಿರಾದಾರ, ರಮೇಶ ಶೇಡಬಾಳ, ಮಹಾಂತ ನಾಶಿ, ಗಿರೀಶ ಬಿಜ್ಜರಗಿ, ಈರಪ್ಪ ಪಟ್ಟಣಶೆಟ್ಟಿ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.ನಮ್ಮ ಸಮುದಾಯದ ನಾಯಕ ಜಗದೀಶ ಶೆಟ್ಟರ್‌ರನ್ನು ಗುರಿಯಾಗಿಸಿ ಮಾಡಿದ ಟೀಕೆಗೆ ಸಮುದಾಯದ ತಕ್ಕ ಉತ್ತರ ಸಿಕ್ಕಿದೆ. ನಮ್ಮ ಪರಿಶ್ರಮದ ಮೇಲೆ ಗೌರವ, ಪದವಿ, ಅಧಿಕಾರ ದೊರೆಯುತ್ತದೆಂಬ ಮೂಲಭೂತ ಕನಿಷ್ಠ ತಿಳಿವಳಿಕೆ ಇಲ್ಲದ ಮೂರ್ಖರಿಗೆ ಸಕಾಲದಲ್ಲಿ ತಕ್ಕ ಉತ್ತರ ಕೊಡಲು ಸಮುದಾಯದ ಜನತೆ ಸಿದ್ಧವಿದೆ. ಸಂಘಟನೆಯಲ್ಲಿ ಮಾತ್ರ ಬಲವಿದ್ದು, ಸಮಾಜದ ಬಾಂಧವರು ತಮ್ಮ ಭಿನ್ನಮತ ಬದಿಗಿಟ್ಟು, ಸಂಘಟಿತರಾದಾಗ ಮಾತ್ರ ಸಬಲರಾಗಲು ಸಾಧ್ಯ.

-ಹೊಳಬಸು ಬಾಳಶೆಟ್ಟಿ, ಸಮಾಜದ ನೂತನ ಜಿಲ್ಲಾಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರಸಭೆಗೆ ಬೀಗ ಜಡಿದು ಬಿಜೆಪಿ ಪ್ರತಿಭಟನೆ
ಅಧಿಕಾರಿಗಳಿಗೆ ಅಭಯ ಪಾಟೀಲ ತರಾಟೆ