ದಲಿತರ ಜಮೀನು ಉಳಿಸಿಕೊಡಿ: ತಹಸೀಲ್ದಾರರಿಗೆ ಮನವಿ

KannadaprabhaNewsNetwork |  
Published : Feb 02, 2025, 01:01 AM IST
ಗುಬ್ಬಿ ತಾಲೂಕು ಸಿ ಎಸ್ ಪುರ ಹೋಬಳಿಯ ಹಿಂಡಿಸಿಗೆರೆ  ಗ್ರಾಮದ ದಲಿತ ಕುಟುಂಬದವರು ನಮ್ಮ ಜಮೀನಿನನ್ನು ಉಳಿಸಿಕೊಡಿ ಎಂದು ತಾಸಿಲ್ದಾರ್ ಬಿ ಆರತಿಯರಿಗೆ ಮನವಿ ಸಲ್ಲಿಸಿದರು | Kannada Prabha

ಸಾರಾಂಶ

ಹಲವು ವರ್ಷಗಳಿಂದ ದಲಿತ ಕುಟುಂಬದವರು ಕೃಷಿ ನಡೆಸಿಕೊಂಡು ಬರುತ್ತಿರುವ ಜಮೀನನ್ನು ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಖಾಲಿ ಮಾಡಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದಲಿತ ಕುಟುಂಬದವರು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಹಲವು ವರ್ಷಗಳಿಂದ ದಲಿತ ಕುಟುಂಬದವರು ಕೃಷಿ ನಡೆಸಿಕೊಂಡು ಬರುತ್ತಿರುವ ಜಮೀನನ್ನು ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಖಾಲಿ ಮಾಡಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದಲಿತ ಕುಟುಂಬದವರು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ತಾಲೂಕಿನ ಸಿಎಸ್ ಪುರ ಹೋಬಳಿಯ ಹಿಂಡಿಸಿಗೆರೆ ಗ್ರಾಮದ ದಲಿತ ಕಾಲೋನಿಯ ನಿವಾಸಿಗಳು ಈ ಜಮೀನಿನಲ್ಲಿ ಸುಮಾರು ವರ್ಷಗಳಿಂದಲೂ ಕೃಷಿ ಮಾಡಿಕೊಂಡು ನಮ್ಮ ಜೀವನ ನಡೆಸುತ್ತಿದ್ದೇವೆ ಪ್ರಭಾವಿ ವ್ಯಕ್ತಿಗಳಿಂದ ಜಾಗ ಖಾಲಿ ಮಾಡಿ ಎಂದು ನಮಗೆ ತೊಂದರೆ ಕೊಡುತ್ತಿದ್ದಾರೆ. ಈ ಜಾಗವನ್ನು ನಮಗೆ ಉಳಿಸಿ ಕೊಡಿ ಎಂದು ತಹಸೀಲ್ದಾರ್‌ ಬಿ. ಆರತಿ ಅವರ ಕಚೇರಿಗೆ ಬಂದು ಕಣ್ಣೀರಿಟ್ಟರು.

ಸರ್ವೇ ನಂಬರ್ 48 ರಲ್ಲಿ 8.13 ಎಕರೆ ಜಾಗದಲ್ಲಿ ಹತ್ತು ವರ್ಷಗಳಿಂದ 10 ದಲಿತ ಕುಟುಂಬದವರು ಕೃಷಿ ನಡೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇದನ್ನು ಸಹಿಸದ ಪ್ರಭಾವಿ ವ್ಯಕ್ತಿಗಳು ದಲಿತ ಕುಟುಂಬದವರನ್ನು ಖಾಲಿ ಮಾಡಿಸಿ ತಮ್ಮ ಹೆಸರಿಗೆ ಮಾಡುವ ಉನ್ನಾರ ನಡೆಸಿದ್ದಾರೆ. ಇದೇ ಜಾಗದಲ್ಲಿ ನಮ್ಮ ದಲಿತ ಕುಟುಂಬದವರು ನಿಧನ ನಂತರ ಅಂತ್ಯ ಸಂಸ್ಕಾರ ಮಾಡಿದ್ದೇವೆ. ಆದ್ದರಿಂದ ನಮ್ಮ ದಲಿತ ಕುಟುಂಬದವರಿಗೆ ಅನ್ಯಾಯ ಆಗದಂತೆ ಜಮೀನನ್ನು ಮಂಜೂರು ಮಾಡಿಕೊಡಬೇಕೆಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಕುಟುಂಬದವರಾದ ಮೂಡಲಗಿರಿಯಪ್ಪ, ವೆಂಕಟೇಶಯ್ಯ, ಮಂಜುನಾಥ್, ತಿಮ್ಮಯ್ಯ, ದೊಡ್ಡಮ್ಮ, ಶಿವಕುಮಾರ, ಸಿದ್ದಯ್ಯ, ಜಯಲಕ್ಷ್ಮಮ್ಮ, ಮಂಗಳಮ್ಮ, ಕೆಂಪಮ್ಮ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ