ಜನರ ಜೀವ ರಕ್ಷಣೆಯೇ ಆದ್ಯತೆ, ದಂಡ ವಸೂಲಿಯಲ್ಲ

KannadaprabhaNewsNetwork |  
Published : Dec 18, 2023, 02:00 AM IST
 ಪೊಟೋ ಪೈಲ್ ನೇಮ್ ೧೬ಎಸ್‌ಜಿವಿ೩ ಶಿಗ್ಗಾವಿ ಪೊಲೀಸ್ ಠಾಣೆಯ ಪೊಲೀಸರಿಂದ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನ ಸವಾರರಿಗೆ ಸಂಚಾರಿ ನಿಯಮಗಳು ಮತ್ತು ಹೆಲ್ಮಟ್ ಜಾಗೃತಿ ಬಗ್ಗೆ ಅರಿವು ಮೂಡಿಸಲಾಯಿತು.  | Kannada Prabha

ಸಾರಾಂಶ

ಸಬ್ ಇನ್‌ಸ್ಪೆಕ್ಟರ್‌ ಉಮಾ ಪಾಟೀಲ್ ಮಾತನಾಡಿ, ದಂಡ ಹಾಕುವ ಉದ್ದೇಶ ದಂಡಕ್ಕೆ ಹೆದರಿಯಾದರೂ ಹೆಲ್ಮೆಟ್ ಹಾಕಿಕೊಂಡು ಓಡಾಡಲಿ ಎನ್ನುವ ಉದ್ದೇಶವೇ ಹೊರತು ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ಪೊಲೀಸರು ಹತ್ತಾರು ಜಾಗೃತಿ ಕಾರ್ಯಕ್ರಮಗಳನ್ನ ಮಾಡಿದರೂ ವಾಹನ ಸವಾರರು ಮಾತ್ರ ಪೊಲೀಸರ ಮನವಿಗೆ ಸ್ಪಂದಿಸುತ್ತಿಲ್ಲ. ಹೆಲ್ಮೆಟ್ ಹಾಕಿಕೊಂಡು ಓಡಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿತ್ತು, ಬೈಕ್ ಅಪಘಾತದಲ್ಲಿ ಮರಣ ಹೊಂದುವವರ ಸಂಖ್ಯೆಯಲ್ಲಿಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನ ಸವಾರರಿಗೆ ಸಂಚಾರಿ ನಿಯಮಗಳು ಮತ್ತು ಹೆಲ್ಮೆಟ್ ಜಾಗೃತಿ ಬಗ್ಗೆ ಪೊಲೀಸರು ಅರಿವು ಮೂಡಿಸಿದರು.

ಸಬ್ ಇನ್‌ಸ್ಪೆಕ್ಟರ್‌ ಉಮಾ ಪಾಟೀಲ್ ಮಾತನಾಡಿ, ದಂಡ ಹಾಕುವ ಉದ್ದೇಶ ದಂಡಕ್ಕೆ ಹೆದರಿಯಾದರೂ ಹೆಲ್ಮೆಟ್ ಹಾಕಿಕೊಂಡು ಓಡಾಡಲಿ ಎನ್ನುವ ಉದ್ದೇಶವೇ ಹೊರತು ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ಪೊಲೀಸರು ಹತ್ತಾರು ಜಾಗೃತಿ ಕಾರ್ಯಕ್ರಮಗಳನ್ನ ಮಾಡಿದರೂ ವಾಹನ ಸವಾರರು ಮಾತ್ರ ಪೊಲೀಸರ ಮನವಿಗೆ ಸ್ಪಂದಿಸುತ್ತಿಲ್ಲ. ಹೆಲ್ಮೆಟ್ ಹಾಕಿಕೊಂಡು ಓಡಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿತ್ತು, ಬೈಕ್ ಅಪಘಾತದಲ್ಲಿ ಮರಣ ಹೊಂದುವವರ ಸಂಖ್ಯೆಯಲ್ಲಿಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಿದರು.

ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಕಾನೂನು ಉಲ್ಲಂಘನೆಗಾಗಿ ಅವರಿಂದ ದಂಡ ವಸೂಲಿ ಮಾಡುವುದೇ ಪೊಲೀಸರ ಉದ್ದೇಶವಲ್ಲ. ಅದಕ್ಕಿಂತಲೂ ಮಿಗಿಲಾಗಿ ಅಮೂಲ್ಯ ಜೀವದ ರಕ್ಷಣೆಯೇ ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಸವಾರರೆಲ್ಲರೂ ಸ್ವಯಂಪ್ರೇರಿತರಾಗಿ ಹೆಲ್ಮೆಟ್ ಧರಿಸಬೇಕು. ಬೈಕ್ ಸವಾರರಿಗೆ ತಮ್ಮ ಜೀವ ಮತ್ತು ಕುಟುಂಬ ಅರಿವು ಮೂಡಿಸಿ ನಿಮಗೆ ಅಪಘಾತ ಸಂಭವಿಸಿದರೆ ಯಾರು ಜವಾಬ್ದಾರಿ? ಹೀಗೆ ಜೀವದ ಬೆಲೆ ಬಗ್ಗೆ ತಿಳಿವಳಿಕೆ ನೀಡುವ ಮೂಲಕ ಹೆಲ್ಮೆಟ್ ಹಾಕುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಹಾವೇರಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ೭೪೨ಕ್ಕೂ ಅಧಿಕ ಬೈಕ್ ಸವಾರರು ಅಸು ನೀಗಿದ್ದಾರೆ. ಅದರಲ್ಲಿ ಬಹುತೇಕರು ಸಾವಿಗೆ ಹೆಲ್ಮೆಟ್ ಇಲ್ಲದೇ ಇರುವುದೇ ಕಾರಣ. ಹಾವೇರಿ ಜಿಲ್ಲೆಗೆ ಆಗಮಿಸಿರುವ ನೂತನ ಎಸ್ಪಿ ಅಂಶುಕುಮಾರ್ ಹೆಲ್ಮೆಟ್ ಜಾಗೃತಿಗೆ ಮುಂದಾಗಿದ್ದಾರೆ. ಸಾರ್ವಜನಿಕರು ಕೂಡಾ ಪೊಲೀಸರ ಜತೆಗೆ ಕೈ ಜೋಡಿಸಿದ್ದಾರೆ. ಅದೇ ರೀತಿ ಶಿಗ್ಗಾಂವಿ ಪೊಲೀಸ್ ಠಾಣೆಯು ಹೆಲ್ಮೆಟ್ ಜಾಗೃತಿ ನಡೆಸುತ್ತಿದೆ.

ಶಿಗ್ಗಾಂವಿ ಪೊಲೀಸ್ ಠಾಣೆಯ ಸಿಬ್ಬಂದಿ ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ