ಯಕ್ಷಗಾನ ಉಳಿಸುವುದೇ ಯಕ್ಷಗಾನಕ್ಕೆ ನೀಡುವ ದೊಡ್ಡ ಕೊಡುಗೆ: ನಾ ಕಾರಂತ ಪೆರಾಜೆ

KannadaprabhaNewsNetwork |  
Published : Aug 26, 2024, 01:39 AM IST
ಫೋಟೋ: ೨೪ಪಿಟಿಆರ್-ಯಕ್ಷಗಾನವಿವೇಕಾನಂದ ಕಾಲೇಜಿನಲ್ಲಿ ಯಕ್ಷ ದೀಕ್ಷ ಪ್ರಧಾನ ಕಾರ್ಯಕ್ರಮ ಮತ್ತು ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ನಡೆಯಿತು. | Kannada Prabha

ಸಾರಾಂಶ

ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ಯಕ್ಷ ರಂಜಿನಿಯ ವಿದ್ಯಾರ್ಥಿಗಳು ಯಕ್ಷಗಾನ ತಾಳಮದ್ದಳೆ ಕದಂಬ ಕೌಶಿಕೆ ಪ್ರಸಂಗವನ್ನು ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಪುತ್ತೂರು

ಯಾವುದೇ ಕಲೆಯು ನಮ್ಮ ಬದುಕಿನ ಅಂಗವಾಗಿ ಬಂದಾಗ ಅದುವೇ ನಮ್ಮ ಬದುಕನ್ನು ಉತ್ತಮವಾಗಿ ರೂಪಿಸುತ್ತದೆ. ಕನ್ನಡ ಭಾಷೆಯ ಉಳಿವಿಗೆ ಯಕ್ಷಗಾನ ಬಹುದೊಡ್ಡ ಕೊಡುಗೆ ನೀಡಿದೆ. ಯಕ್ಷಗಾನವನ್ನು ಉಳಿಸುವುದೇ ಯಕ್ಷಗಾನಕ್ಕೆ ನಾವು ನೀಡುವ ದೊಡ್ಡ ಕೊಡುಗೆ ಎಂದು ಅಡಕೆ ಪತ್ರಿಕೆಯ ಉಪ ಸಂಪಾದಕ, ಯಕ್ಷಗಾನ ಕಲಾವಿದ ನಾ.ಕಾರಂತ ಪೆರಾಜೆ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ ಮತ್ತು ಐಕ್ಯೂಎಸಿ ಘಟಕದ ವತಿಯಿಂದ ಶನಿವಾರ ಆಯೋಜಿಸಲಾದ ಯಕ್ಷದೀಕ್ಷೆ ಪ್ರದಾನ ಮತ್ತು ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ದೀಕ್ಷೆ ಪಡೆದು ಭಾಗವತಿಕೆ ಮಾಡಿದರೆ ಯಕ್ಷಗಾನ ಮುಂದುವರಿಯುತ್ತದೆ. ಆದರೆ ಪ್ರೇಕ್ಷಕರಿಗೆ ಯಕ್ಷಗಾನದ ಭಾವಗಳೆಲ್ಲವನ್ನೂ ಅರ್ಥ ಮಾಡಿಕೊಂಡು ಯಕ್ಷಗಾನ ನೋಡುವುದು ಹೇಗೆ ಎಂದು ತಿಳಿಸಿ ಕೊಡುವುದಕ್ಕೆ ಒಂದು ಪ್ರತ್ಯೇಕ ಕಮ್ಮಟ ನಡೆಸುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಯಕ್ಷಗಾನದ ಅಲೆ ಹಬ್ಬುವುದಕ್ಕೆ ಮಹಿಳಾ ಹಾಗೂ ಮಕ್ಕಳ ತಂಡ ಮುಖ್ಯ ಪಾತ್ರ ವಹಿಸಿದ್ದಾರೆ ಎಂದರು. ಚೆಂಡೆ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಹಿರಿಯ ಮದ್ದಳೆ ವಾದಕ ಪದ್ಯಾಣ ಶಂಕರನಾರಾಯಣ ಭಟ್ ಉದ್ಘಾಟಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್., ಕಾಲೇಜಿನ ವಿಶೇಷಾಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಶ್ರೀಧರ್ ನಾಯ್ಕ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶುಭಾ ಅಡಿಗ, ಯಕ್ಷ ರಂಜಿನಿ ಸಂಯೋಜಕರಾದ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಗೋವಿಂದರಾಜ ಶರ್ಮ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಎಚ್.ಜಿ. ಶ್ರೀಧರ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಶಾಂಭವಿ ಸ್ವಾಗತಿಸಿದರು. ಭಾಗ್ಯ ವಂದಿಸಿದರು. ಶ್ರೇಯಾ ಜೆ. ಆಚಾರ್ಯ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ಯಕ್ಷ ರಂಜಿನಿಯ ವಿದ್ಯಾರ್ಥಿಗಳು ಯಕ್ಷಗಾನ ತಾಳಮದ್ದಳೆ ಕದಂಬ ಕೌಶಿಕೆ ಪ್ರಸಂಗವನ್ನು ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!