ತರೀಕೆರೆ: ಪಟ್ಟಣದ ಸದ್ವಿದ್ಯಾ ಪಬ್ಲಿಕ್ ಶಾಲೆ ಮಕ್ಕಳು, ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹತ್ಯೆಗೊಳಗಾದ ವೈದ್ಯೆಗೆ ನಮನ ಸಲ್ಲಿಸಲು ಮತ್ತು ನ್ಯಾಯ ದೊರಕಿಸಿ ಕೊಡುವ ಸಲುವಾಗಿ ಪಟ್ಟಣದಾದ್ಯಂತ ಬೀದಿ ನಾಟಕ ಮಾಡುವ ಮೂಲಕ ಜನಜಾಗೃತಿ ಮೂಡಿಸಿದರು.
ಸದ್ವಿದ್ಯಾ ಪಬ್ಲಿಕ್ ಶಾಲೆ ಮಕ್ಕಳು ಮೂಕ ನಾಟಕದ ಮೂಲಕ ಅಮೋಘವಾಗಿ ಅಭಿನಯಿಸಿ ಘಟನೆಯನ್ನು ಮನಮುಟ್ಟುವಂತೆ ನಿರೂಪಿಸಿದರು.
ಪಟ್ಟಣದ ಸಾಹಿತಿಗಳೆಲ್ಲ ಸೇರಿ ರಂಗ ಮತ್ತು ಕಾವ್ಯ ಪ್ರತಿರೋಧ ಎಂಬ ಹೆಸರಿನಲ್ಲಿ ಚುಟುಕು ಕವನಗಳನ್ನು ವಾಚಿಸಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ (ಕವಾಲಿ) ಪುರಸಭಾ ಸದಸ್ಯ ಟಿ.ದಾದಾಪೀರ್, ಕನ್ನಡಶ್ರೀ ಬಿ.ಎಸ್ ಭಗವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
25ಕೆಟಿಆರ್.ಕೆ.4ಃತರೀಕೆರೆಯಲ್ಲಿ ಸದ್ವಿದ್ಯಾ ಶಾಲೆ ಮಕ್ಕಳು ಮತ್ತು ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ, ಹತ್ಯೆಗೊಳಗಾದ ವೈದ್ಯೆಗೆ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.