ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಸುಮಾರು 75 ಲಕ್ಷ ರೂ.ಗಳ ವೆಚ್ಚದಲ್ಲಿ ಸುಂದರ ಸವಿತಾ ಸಮುದಾಯ ಭವನವನ್ನು 5 ತಿಂಗಳೊಳಗೆ ನಿರ್ಮಿಸಿಕೊಡುವ ಜವಾಬ್ದಾರಿ ನನ್ನದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸವಿತಾ ಸಮುದಾಯದವರಿಗೆ ಭರವಸೆ ನೀಡಿದರು.ಪಟ್ಟಣದ ಹೊರವಲಯದ ಗಡದಿಂ ಗ್ರಾ.ಪಂ ವ್ಯಾಪ್ತಿಯ ಚಿಂತಾಮಣಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸುಮಾರು 8 ಗುಂಟೆ ಜಾಗದಲ್ಲಿ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಶಂಕುಸ್ಥಾಪನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭವನ ನಿರ್ಮಾಣಕ್ಕೆ ಅನುದಾನತಳ ಸಮುದಾಯಗಳಾದ ಸವಿತಾ ಸಮುದಾಯ, ಗೊಲ್ಲ ಸಮುದಾಯ ಹಾಗೂ ಮಡಿವಾಳ ಸಮುದಾಯದವರ ಹಲವು ವರ್ಷಗಳ ಬೇಡಿಕೆಯಾಗಿದ್ದ ಸಮುದಾಯ ಭವನಗಳ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಜಾಗ ಗುರ್ತಿಸಿದ್ದು ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ತಲಾ 20 ಲಕ್ಷ ರೂ.ಗಳಂತೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂಮಾಡಿದೆ.
ಸವಿತಾ ಸಮುದಾಯ ಭವನ ನಿರ್ಮಾಣ ಮಾಡಲು 20 ಲಕ್ಷ ರು.ಗಳನ್ನು ಸರ್ಕಾರ ಅನುದಾನ ಮಂಜೂರು ಮಾಡಿದೆ ಆದರೆ ಈ ಹಣದಲ್ಲಿ ಸಮುದಾಯ ಭವನ ನಿರ್ಮಿಸಲು ಸಾಧ್ಯವಿಲ್ಲ ಇದರಿಂದ ಸರ್ಕಾರದ 20 ಲಕ್ಷದ ಜೊತೆಗೆ ನನ್ನ ಸ್ವಂತ ಹಣ 55 ಲಕ್ಷ ರೂ.ಗಳೊಂದಿಗೆ ಸುಮಾರು 75 ಲಕ್ಷ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನವನ್ನು ನಾನೇ ಜವಾಬ್ದಾರಿವಹಿಸಿಕೊಂಡು ಭವನ ನಿರ್ಮಿಸಿ ಸಮುದಾಯದವರ ವಶಕ್ಕೆ ನೀಡುವುದಾಗಿ ಭರಸೆ ನೀಡಿದರು.ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ
ಸವಿತಾ ಜಮಾಜದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಈ ಸಮುದಾಯದವರು ತಮ್ಮ ಮಕ್ಕಳಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಆಗ ಮಾತ್ರ ಸಮುದಾಯದವರು ಉದ್ದಾರ ಆಗಲು ಸಾಧ್ಯ ಎಂದ ಅವರು ಇಲ್ಲಿ ನಿರ್ಮಿಸುವ ಭವನದಲ್ಲಿ ನಾಧಸ್ವರ, ಡೋಲು ಕಲಿಸುವುದರ ಜೊತೆಗೆ ಮದುವೆ ಇತ್ಯಾಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಮಾನಿಷಾ ಎನ್.ಪತ್ರಿ, ತಾ.ಪಂ ಇಒ ರಮೇಶ್ ಕುಮಾರ್, ಬಿಸಿಎಂ ಇಲಾಖೆ ಅಧಿಕಾರಿ ಶಿವಪ್ಪ, ಸವಿತಾ ಸಮಾಜ ಸಂಘದ ತಾಲೂಕು ಗೌರವಾಧ್ಯಕ್ಷ ಬಿ.ಜಿ.ಮಹೇಶ್, ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಗಜೇಂದ್ರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಸುದರ್ಶನ್ ಬಿ.ಆರ್, ಮುಖಂಡರಾದ ನಾಗರಾಜ್, ನರಸಿಂಹಮೂರ್ತಿ, ದಿವಾಕರ್, ಹೇಮಂತಕುಮಾರ್, ಕಾರ್ತಿಕ್, ಬಿ.ಎನ್.ರಾಮಾಂಜಿನೇಯಲು,ಬಿ.ಆರ್ ಲಕ್ಷ್ಮೀನಾರಾಯಣ ಮತ್ತಿತರರು ಇದ್ದರು.