ಗದಗ: ದೇಶದ ಇತಿಹಾಸದಲ್ಲಿಯೇ ಹೆಣ್ಣುಮಕ್ಕಳು ಶಿಕ್ಷಣವನ್ನು ಕಲಿಯುವುದು ಅಕ್ಷಮ್ಯ, ಅಪರಾಧ, ಅದನ್ನು ಕಲಿತರೆ ಧರ್ಮದ್ರೋಹಿ ಕೆಲಸ ಎಂದು ಹೇಳುವ ಕಾಲದಲ್ಲಿ ಶೋಷಿತ ಜನಾಂಗದ ಹೆಣ್ಣುಮಕ್ಕಳ ಪಾಲಿಗೆ ಕ್ರಾಂತಿಯ ಕಿಡಿಯಂತೆ ಜ್ಞಾನವನ್ನು ಕೊಟ್ಟ ಮಾತೆ ಸಾವಿತ್ರಿಬಾಯಿ ಪುಲೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ರಾಮಚಂದ್ರ ಗುಡಿ ತಿಳಿಸಿದರು.
ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಧಾನ ಗುರು ಬಿ.ಬಿ. ಹಡಪದ ಮಾತನಾಡಿ, ಯಾವುದೇ ವ್ಯಕ್ತಿ ಅಥವಾ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ, ಅದಕ್ಕೊಬ್ಬ ದಾರ್ಶನಿಕ, ಗುರು, ಸಮಾಜ ಸೇವಕ ನಿಸ್ವಾರ್ಥ ಮನಸ್ಸಿನ ವ್ಯಕ್ತಿಗಳು ಇದ್ದಾಗ ಮಾತ್ರ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ. ಅದರಂತೆ ದೇಶದ ಸಾಮಾಜಿಕ ಪರಿವರ್ತನಾಕಾರರ ಸಾಲಿನ ಹೆಸರಿನಲ್ಲಿ ಸಾವಿತ್ರಿಬಾಯಿ ಫುಲೆಯವರ ಹೆಸರು ಇರುವುದು ಅತ್ಯಂತ ಹೆಮ್ಮೆಯ ಮತ್ತು ಸಂತಸದ ವಿಷಯ ಎಂದರು.ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಈರಣ್ಣ ಕಲ್ಮಠ ವಹಿಸಿದ್ದರು. ವಿಜಯಲಕ್ಷ್ಮೀ ಚಲವಾದಿ, ಶ್ರೀದೇವಿ ಕಮ್ಮಾರ, ಲಕ್ಷ್ಮೀ ಭಜಂತ್ರಿ, ಬಸಮ್ಮಾ ವೀರಾಪೂರ, ಶಿಕ್ಷಕರಾದ ಜೆ.ಆರ್. ಬೆಟಗೇರಿ, ಆರ್.ಬಿ. ಹಿರೇಮಠ, ಪಿ.ಕೆ. ಮಾದಗುಂಡಿ, ಪಿ.ಎಫ್. ಅಗಸಿಮನಿ, ಪಾರ್ವತಿ ಯಲಿ, ಧರ್ಮೇಂದ್ರ ಇಟಗಿ, ರೇಣುಕಾ ಗುಡಿಮನಿ, ಶಾರದಾ ಮಾಳಣ್ಣವರ, ಪಾರ್ವತಿ ದೊಡ್ಡಮನಿ, ದುರಗವ್ವ ಸ್ವಾಗಿಹಾಳ, ಪಾರ್ವತಿ ಗುಡಿಮನಿ, ಲಕ್ಷ್ಮೀ ಗುಡಿಮನಿ, ಪೂಜಾ ಮ್ಯಾಗೇರಿ, ಗೌರವ್ವ ದೊಡ್ಡಮನಿ, ಕಮಲವ್ವ ಗುಡಿಮನಿ, ದುರಗಮ್ಮ ಗುಡಿಮನಿ, ದುರಗವ್ವ ಭಾವಿಮನಿ, ರೇಣುಕಾ ಭಾವಿಮನಿ, ಮಲ್ಲವ್ವ ನಭಾಪೂರ, ಲಕ್ಷ್ಮೀ ದೊಡ್ಡಮನಿ, ಕಸ್ತೂರೆವ್ವ ದೊಡ್ಡಮನಿ, ಮಲ್ಲವ್ವ ಗುಡಿಮನಿ, ಪ್ರೇಮವ್ವ ನಭಾಪೂರ ಮುಂತಾದವರು ಇದ್ದರು.