ಮಹಿಳೆಯರಿಗೆ ಶಿಕ್ಷಣ ಕೊಟ್ಟ ಸಾವಿತ್ರಿಬಾಯಿ, ಜ್ಯೋತಿ ಬಾ ಫುಲೆ: ಬಿಇಒ ಶಂಕ್ರಯ್ಯ

KannadaprabhaNewsNetwork | Published : Jan 6, 2025 1:01 AM

ಸಾರಾಂಶ

ನಗರದ ಅಂಬೇಡ್ಕರ್ ನಗರದಲ್ಲಿ ಸಾವಿತ್ರಿಬಾಯಿ ಫುಲೆ ಗ್ರಾಮೀಣಭಿವೃದ್ದಿ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ 194ನೇ ಸಾವಿತ್ರಿಬಾಯಿ ಫುಲೆ ಜನ್ಮದಿನ ಹಾಗೂ 207ನೇ ಭೀಮಾ ಕೋರೆಗಾಂವ್‌ ವಿಜಯೋತ್ಸವವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹುಚ್ಚಮ್ಮ ಚೌದ್ರಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ಅಂಬೇಡ್ಕರ್ ನಗರದಲ್ಲಿ ಸಾವಿತ್ರಿಬಾಯಿ ಫುಲೆ ಗ್ರಾಮೀಣಭಿವೃದ್ದಿ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ 194ನೇ ಸಾವಿತ್ರಿಬಾಯಿ ಫುಲೆ ಜನ್ಮದಿನ ಹಾಗೂ 207ನೇ ಭೀಮಾ ಕೋರೆಗಾಂವ್‌ ವಿಜಯೋತ್ಸವವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹುಚ್ಚಮ್ಮ ಚೌದ್ರಿ ಉದ್ಘಾಟಿಸಿದರು.

ಬಿಇಒ ಶಂಕ್ರಯ್ಯ ಟಿ.ಎಸ್. ಉಪನ್ಯಾಸ ನೀಡಿ, ಸಾವಿತ್ರಿಬಾಯಿ ಮತ್ತು ಜ್ಯೋತಿ ಬಾ ಫುಲೆ ಅಂದಿನ ಕಾಲಘಟ್ಟದ ಅಸಮಾನತೆಯ ವ್ಯವಸ್ಥೆಯಲ್ಲಿ ಯಾವುದಕ್ಕೂ ಹಿಗ್ಗದೆ ಕುಗ್ಗದೆ ತಮ್ಮ ಜೀವನ ಮೂಡುಪಾಗಿಟ್ಟು ಎಲ್ಲ ವರ್ಗದ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ಕೊಟ್ಟವರು. ಅಂದಿನ ಅವರ ತ್ಯಾಗವೇ ಇಂದಿನ ಮಹಿಳೆಯರ ಸುಖ ಜೀವನ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸಮಾಜದಲ್ಲಿನ ಸನ್ನಿವೇಶ ಗಮನಿಸಿದರೆ ನಮ್ಮ ಸಮಾಜವು 150 ವರ್ಷಗಳ ಕಾಲ ಹಿಂದಕ್ಕೆ ಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿಮಿತ್ತ ಭಾಷಣ, ರಂಗೋಲಿ ಮತ್ತು ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ನಯನ, ಯಶ್, ಐಶ್ವರ್ಯ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದರೆ, ಗಾಯತ್ರಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದರು. ವಿವಿಧ ಜಿಲ್ಲೆಗಳಿಂದ ನೃತ್ಯ ತಂಡಗಳು ಆಗಮಿಸಿ ಸ್ವಾತಂತ್ರ್ಯ ಹೋರಾಟಗಾರರ ಹಾಡುಗಳಿಗೆ ನೃತ್ಯ ಮಾಡಿ ಜನರನ್ನು ಆಕರ್ಷಸಿದವು. ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶಿವ ಸ್ಕೂಲ್ ಅಪ್ ಡ್ಯಾನ್ಸ ಅಕಾಡೆಮಿ ಗಂಗಾವತಿ ಪಡೆದರೆ, ದ್ವಿತೀಯ ಸ್ಥಾನವನ್ನು ಡಿಡಿ ಬಾಯ್ಸ್ ಕೊಪ್ಪಳ, ತೃತೀಯ ಸ್ಥಾನವನ್ನು ಯಂಗ ಸ್ಟಾರ್ ಬಾಯ್ಸ್ ಗಂಗಾವತಿ ಪಡೆಯಿತು.

ಪ್ರಮುಖರಾದಮುತ್ತುರಾಜ ಕುಷ್ಟಗಿ, ಗವಿಸಿದ್ದಪ್ಪ ಬೆಲ್ಲದ, ಗವಿಕುಮಾರ ಕಸ್ತೂರಿ, ಬಾಳಪ್ಪ ಕಾಳೆ, ಹನುಮಂತಪ್ಪ ಚಲವಾದಿ, ಯಲ್ಲಮ್ಮ ರಮೇಶ್ ಗಿಣಿಗೇರಿ, ಸರಿತಾ ಸುಧಾಕರ್ ಹೊಸಮನಿ, ಯಲ್ಲಮ್ಮ ಶಂಕರ್ ಚಲವಾದಿ, ಮಹಾಲಕ್ಷ್ಮೀ ರಾಂಪುರ, ದೇವಕ್ಕ ಕಂದಾರಿ, ಮೋಹನ್ ಸಿ., ಕಿರಣ ಬಂಗಾಳಿಗಿಡದ, ಸತೀಶ ದೊಡ್ಡಮನಿ, ಪ್ರವೀಣ ದೊಡ್ಡಮನಿ, ಗವಿ ಕಸ್ತೂರಿ, ಗಣೇಶ ತಾಂಬ್ರೆನವರ, ಕೀರ್ತಿರಾಜ ಬಂಗಾಳಿಗಿಡದ, ಪ್ರೇಮ ಬಡಿಗೇರ, ವಿಶ್ವನಾಥ, ಮಂಜು ಶಿವಶಾಂತ, ಭರತ ಮತ್ತು ಶ್ರೀನಾಥ ಇತರರಿದ್ದರು.

Share this article