ಆಡಿಕೊಳ್ಳುವವರ ನಿಂದಿಸದೇ ವಂದನೆ ಹೇಳಿ

KannadaprabhaNewsNetwork |  
Published : Sep 17, 2024, 12:45 AM IST
ತಾಳಿಕೋಟೆ 1 | Kannada Prabha

ಸಾರಾಂಶ

ನಿಮ್ಮನ್ನು ಆಡಿಕೊಳ್ಳುತ್ತ ಸಾಗುವವರಿದ್ದರೆ, ಅವರಿಗೆ ನಿಂದಿಸದೇ ವಂದನೆ ಹೇಳಿ ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ನಿಮ್ಮನ್ನು ಆಡಿಕೊಳ್ಳುತ್ತ ಸಾಗುವವರಿದ್ದರೆ, ಅವರಿಗೆ ನಿಂದಿಸದೇ ವಂದನೆ ಹೇಳಿ ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.

ಎ.ಪಿ.ಎಂ.ಸಿ.ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದ ೯ನೇ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು, ಮಲ್ಲಮ್ಮ ಹೆಸರಿನಿಂದ ಪ್ರಾರಂಭಗೊಂಡ ಈ ಸಂಘ ಸುಮಾರು ₹ ೨೦ಕೋಟಿಗೂ ಮೇಲ್ಪಟ್ಟ ಬಂಡವಾಳದೊಂದಿಗೆ ಮುನ್ನಡೆದಿದೆ. ಈ ಕಾರ್ಯಕ್ಕೆ ಶೇರುದಾರ ಹಾಗೂ ಆಡಳಿತ ಮಂಡಳಿಯವರ ಗ್ರಾಹಕರ ಸಹಕಾರವೇ ಕಾರಣವಾಗದೆ. ಪ್ರೀತಿಯಿಂದ ಮುನ್ನಡೆದ ಸಂಘ ನಮ್ಮೂರು ನಮ್ಮದು ಎಂಬ ಮನೋಭಾವನೆಯಿಂದ ಮುನ್ನಡೆದಿದೆ ಈ ಕಾರಣದಿಂದಲೇ ಅದು ಯಶಸ್ಸಿನತ್ತ ದಾಪುಗಾಲು ಹಾಕಿದೆ ಎಂದರು.ಮಾಜಿ ಶಾಸಕರಾದ ಎಸ್.ಎಂ.ದೇಸಾಯಿ ಮಾತನಾಡಿ, ೯ ವರ್ಷಗಳಿಂದ ಈ ಸಂಘ ಮುನ್ನಡೆಯಲು ಶ್ರಮ ಪಟ್ಟಿರುವ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅವರ ವಿಶ್ವಾಸವೇ ಕಾರಣ. ಸಂಘದ ಅಧ್ಯಕ್ಷರಾದ ಬಿ.ಎನ್.ಹಿಪ್ಪರಗಿ ಸಹ ಕಾರಣಿಭೂತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬ್ಯಾಂಕು ಉನ್ನತ ಸ್ಥಾನಕ್ಕೇರುವುದಕ್ಕಾಗಿ ನಾವು ಕೂಡ ಸಹಕಾರ ನೀಡುತ್ತೇವೆ. ಈ ಸಂಘ ಎಲ್ಲ ಸಮಾಜ ಬಾಂಧವರಿಗೆ ಬೆನ್ನೆಲುಬಾಗಿ ನಿಂತಿದೆ, ನಾನು ನಿಮಗಾಗಿ ನೀವು ಎಲ್ಲರಿಗಾಗಿ ಎನ್ನುವ ಮಾತು ಸಂಘದ್ದಾಗಿದೆ ಎಂದರು.ಬಿಡಿಸಿಸಿ ಬ್ಯಾಂಕ್‌ ನೀರ್ದೇಶಕ ಬಿ.ಎಸ್.ಪಾಟೀಲ ಯಾಳಗಿ ಮಾತನಾಡಿ, ಸಂಸ್ಥೆ ಬೆಳೆಯಬೇಕಾದರೇ ಶಿಸ್ತು, ವಿಶ್ವಾಸ ಕಾರಣವಾಗಿತ್ತದೆ. ೯ವರ್ಷಗಳ ಕಾಲ ಸಂಸ್ಥೆ ಮುನ್ನಡೆಯಲು ಆಡಳಿತ ಮಂಡಳಿ, ಶೇರುದಾರರು ಕಾರಣಿ ಭೂತರಾಗಿದ್ದಾರೆ. ಇದರಿಂದಾಗಿಯೇ ಡಿಸಿಸಿ ಬ್ಯಾಂಕಿನಿಂದ ಈ ಸಂಘಕ್ಕೆ ೪ ಪ್ರಶಸ್ತಿ ಲಭಿಸಿದೆ ಎಂದು ಶ್ಲಾಘಿಸಿದರು.ಸಂಘದ ಅಧ್ಯಕ್ಷ ಬಿ.ಎನ್.ಹಿಪ್ಪರಗಿ ಸಂಘ ನಡೆದುಬಂದ ದಾರಿ ವಿವರಿಸಿದರು.೯ ವರ್ಷದಲ್ಲಿ ಗ್ರಾಹಕರ ಹಾಗೂ ಶೇರುದಾರರ ಮೇಲಿದ್ದ ಪ್ರೀತಿ ವಿಶ್ವಾಸ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಕರ್ನಾಟಕ ನೀರಾವರಿ ನಿಗಮದ ಪ್ರಧಾನ ವ್ಯವಸ್ಥಾಪಕ ಬಿ.ಎನ್.ಬಿರಾದಾರ(ಕೊಡಗಾನೂರ), ಸಂಘದ ವ್ಯವಸ್ಥಾಪಕ ಸಿ.ಎನ್.ಮಾಲಿಪಾಟೀಲ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಶೇರುದಾರರ ಮಕ್ಕಳಿಗೆ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ರವೀದ್ರನಾಥ ಪಾಟೀಲ, ನಿರ್ದೇಶಕರಾದ ಹಣಮಗೌಡ ಗೂಗಲ, ಪ್ರಭುಗೌಡ ಮದರಕಲ್ಲ, ಶರಣಗೌಡ ಇಬ್ರಾಹಿಂಪೂರ, ಚಿನ್ನಪ್ಪಗೌಡ ಮಾಳಿ, ಸುಭಾಸಚಂದ್ರ ಗುರೆಡ್ಡಿ, ಶಂಕರಗೌಡ ಮಾಡಗಿ, ಶಾಂತಾ ಕಂತಲಗಾವಿ, ಡಾ.ಗಂಗಾಬಿಕಾ ಪಾಟೀಲ, ರಮೇಶ ನಾಯಕ ಇತರರು ಇದ್ದರು. ಸರ್ವಜ್ಞ ವಿದ್ಯಾಪೀಠದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಚ್.ಎಸ್.ಪಾಟೀಲ ಸ್ವಾಗತಿಸಿದರು. ಉಪನ್ಯಾಸಕಿ ಸುಮಂಗಲಾ ಕೋಳುರ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''