ಎಸ್‌ಬಿಐ ಬ್ಯಾಂಕ್‌ ದರೋಡೆ: 6800 ಗ್ರಾಂ ಚಿನ್ನ, 41.4 ಲಕ್ಷ ನಗದು ವಶ

KannadaprabhaNewsNetwork |  
Published : Sep 20, 2025, 01:03 AM IST
19ಸಿಡಿಎನ್‌01 | Kannada Prabha

ಸಾರಾಂಶ

ಕನ್ನಡಪ್ರಭಾ ವಾರ್ತೆ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದ್ದು, ಮೊದಲ ಹಂತದಲ್ಲಿ 6800 ಗ್ರಾಂ ಚಿನ್ನ, 41.4 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಕನ್ನಡಪ್ರಭಾ ವಾರ್ತೆ ಚಡಚಣ

ಪಟ್ಟಣದ ಎಸ್‌ಬಿಐ ಬ್ಯಾಂಕ್‌ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದ್ದು, ಮೊದಲ ಹಂತದಲ್ಲಿ 6800 ಗ್ರಾಂ ಚಿನ್ನ, 41.4 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಘಟನೆ ಮಂಗಳವಾರ ಸಂಜೆ 6.30 ರಿಂದ 7.30 ಗಂಟೆಯೊಳಗೆ ನಡೆದಿದೆ. ಘಟನೆಯಲ್ಲಿ ಬ್ಯಾಂಕ್‌ನಿಂದ ಅಂದಾಜು ₹ 21 ಕೋಟಿ ಮೌಲ್ಯದ 398 ಪ್ಯಾಕ್(20ಕೆಜಿ) ಚಿನ್ನ, ₹ 1.4 ಕೋಟಿ ನಗದು ಹಣ ದರೋಡೆ ಮಾಡಿದ್ದಾರೆ. ಅದೇ ದಿನ ಅಂದರೆ ಮಂಗಳವಾರ ಘಟನೆಯಾದ ಒಂದೂವರೆ ಗಂಟೆಯಲ್ಲಿ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ತಡರಾತ್ರಿ ದರೋಡೆಗೆ ಬಳಿಸಿದ್ದ ಕಾರ್‌ನ್ನು ವಶಕ್ಕೆ ಪಡೆದಿದ್ದು, ವಾಹನದಲ್ಲಿದ್ದ 21 ಚಿನ್ನದ ಪಾಕೇಟ್ ಚಿನ್ನ ₹ 1 ಲಕ್ಷ ನಗದು ಹಣ ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಸ್ಥಳದಲ್ಲಿಯೇ ಪೊಲೀಸ್‌ ಸಿಬ್ಬಂದಿ ಬೀಡುಬಿಟ್ಟಿದ್ದು, ಗುರುವಾರ ಸಂಜೆ ಗ್ರಾಮದಲ್ಲಿನ ಮನೆಯೊಂದರ ಮೇಲೆ ಬ್ಯಾಗ್‌ ಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸಿ 136 ಪ್ಯಾಕೇಟ್ ದಲ್ಲಿದ್ದ 6800 ಗ್ರಾಂ ಚಿನ್ನ, ₹ 41 ಲಕ್ಷ ಸಾವಿರ ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಯ ಮಂಗಳವೇಡ ಗ್ರಾಮದ ಪೊಲೀಸ್‌ ಠಾಣೆಯಲ್ಲಿಯೂ ಕಳ್ಳತನ ಪ್ರಕರಣ ದಾಖಲಿಸಲಾಗಿದೆ. ಸೋಲಾಪೂರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ತನಿಖಾ ತಂಡದ ಸಹಯೋಗದಲ್ಲಿ ತನಿಖೆಯನ್ನು ಮುಂದುವರಿಸಲಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದಾರೆ. ದರೋಡೆಕೋರರನ್ನು ಹೆಡೆಮುರಿ ಕಟ್ಟಲು ಈಗಾಗಲೇ 8 ತನಿಖಾ ತಂಡಗಳನ್ನು ರಚಿಸಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ದರೋಡೆಕೋರರ ಬಂಧಿಸಲಾಗುತ್ತದೆ ಎಂದು ತಿಳಿಸಿದರು.

ಬಾಕ್ಸ್‌

ಬ್ಯಾಂಕ್‌ಗಳ ಭದ್ರತೆ ಗುಣಮಟ್ಟ ಸುಧಾರಿಸಬೇಕು: ಸಚಿವ

ಚಡಚಣದಲ್ಲಿನ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಬ್ಯಾಂಕ್‌ನವರ ನಿರ್ಲಕ್ಷ, ಸೆಕ್ಯೂರಿಟಿ ಲೋಪದ ಕುರಿತು ಕಂಡು ಬರುತ್ತಿದೆ. ಅಲ್ಲಿ ಸೂಕ್ತ ಸೆಕ್ಯೂರಿಟಿ ಗಾರ್ಡ್ ಇರಬೇಕು. ಇರದಿದ್ದರೆ ಬ್ಯಾಂಕರ್‌ ಮೇಲೆ ಕ್ರಮ ಕೈಗೊಳ್ಳಬೇಕು. ನಮ್ಮ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ, ಹಿಂದೆ ಮನಗೂಳಿ ಕೇಸ್‌ನಲ್ಲಿ ಒಳ್ಳೆಯ ರಿಕವರಿ ಆಗಿದೆ. ಈ ಬಾರಿಯೂ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ರಾಬರಿ ಕ್ಯಾಶ್ ತನಿಖಾ ವೆಚ್ಚ ಮುಂಬರುವ ದಿನಗಳಲ್ಲಿ ಬ್ಯಾಂಕರ್ಸ್ ಮೇಲೆ ಹಾಕಬೇಕಾಗುತ್ತೆ. ಬ್ಯಾಂಕ್ ಮ್ಯಾನೇಜರ್‌ ಅವರೇ ಇಂತಹ ಪ್ರಕರಣಗಳಿಗೆ ನೇರ ಹೊಣೆಯಾಗಬೇಕಾಗುತ್ತೆ. ಬ್ಯಾಂಕ್‌ಗಳು ಭದ್ರತಾ ಗುಣಮಟ್ಟ ಸುಧಾರಿಸಿಕೊಳ್ಳದಿದ್ದರೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಇಂಡಿ ಡಿವೈಎಸ್ಪಿ ಜಗದೀಶ, ಸಿಪಿಐ ಸುರೇಶ ಬೆಂಡಗುಂಬಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ