ಕನ್ನಡಪ್ರಭ ವಾರ್ತೆ ಕಲಬುರಗಿ
ಏಪ್ರಿಲ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 30 ವಿದ್ಯಾರ್ಥಿಗಳು ತಮ್ಮ ವಿಜ್ಞಾನದ ಪ್ರಾಜೆಕ್ಟ್‌ಗಳನ್ನು ಪ್ರಸ್ತುತ ಪಡಿಸಲಿದ್ದಾರೆ. 30 ಮಂದಿಯಲ್ಲಿ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅಂತಿಮ ಸ್ಪರ್ಧೆಯ ಸ್ಥಳ ಮತ್ತು ಅಂತಿಮ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಶಾಲೆಯ ಪ್ರಾಚಾರ್ಯ ಎನ್.ಎಸ್.ದೇವರಕಲ್ ತಿಳಿಸಿದ್ದಾರೆ.
ಶಿಕ್ಷಕಿ ಪೂಜಾ ಪಾಟೀಲ್ ಮಾರ್ಗದರ್ಶನದಲ್ಲಿ, ಟೀಮ್ ಲೀಡರ್ ಆಗಿರುವ ಭವಾನಿ ಎಸ್ ಅಷ್ಟಗಿ ಮತ್ತು ಭೂಮಿಕಾ ಎಂ ಬೆಳ್ಳೆ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ “ಜಂಕ್ ಫುಡ್ ಹುಡುಗಿಯರನ್ನು ವಿಶೇಷವಾಗಿ ಹದಿಹರೆಯದವರಲ್ಲಿ ಹೇಗೆ ಬಾಧಿಸುತ್ತದೆ” ಎಂಬ ಪ್ರಾಜೆಕ್ಟ್‍ನೊಂದಿಗೆ ಜೂನಿಯರ್ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.ಶಿಕ್ಷಕಿ ಅಶ್ವಿನಿ ಚವ್ಹಾಣ್ ಮಾರ್ಗದರ್ಶನದಲ್ಲಿ ತಂಡದ ನಾಯಕಿ ಆಯೇಷ್ ತಹರೀಮ್ , ಅತಿಖಾ ತಸ್ನೀಮ್ ತಮ್ಮ ವಿನೂತನ ಯೋಜನೆಯಾದ “ಮಲ್ಟಿಟಾಸ್ಕರ್ ವಾಟರ್ ಹಯಸಿಂತ್-ಮಾಲಿನ್ಯಕ್ಕೆ ಪರಿಹಾರ” ಎಂಬ ವಿನೂತನ ಯೋಜನೆಯೊಂದಿಗೆ ಸೀನಿಯರ್ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.
ವಾಟರ್ ಹಯಸಿಂತ್‍ನ್ನು ಕಾಗದ, ಪೀಠೋಪಕರಣಗಳು, ಚೀಲಗಳು, ಟೋಪಿಗಳು, ಕಾರ್ಪೆಟ್‍ಗಳು, ಹೂದಾನಿಗಳು, ಜೈವಿಕ ಅನಿಲ, ಜೈವಿಕ ಇಂಧನ, ಶಿಲೀಂಧ್ರನಾಶಕ ಔಷಧಗಳು ಹಾಗೂ ಫ್ಯೂಜನ್ ಸೀರೆಗಳನ್ನು ಉತ್ಪಾದಿಸಲು ಬಳಸಬಹುದು. ಯೋಜನೆಯ ಪ್ರಕಾರ, ಈ ನೀರಿನ ಸಸ್ಯವನ್ನು ಜಾನುವಾರುಗಳ ಆಹಾರದಲ್ಲಿ ಖಾದ್ಯ ಪೂರಕವಾಗಿ ಬಳಸಬಹುದು, ಇದು ಹಾಲುಣಿಸುವ ತಾಯಿ ಹಸುಗಳು ಮತ್ತು ಕರುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಇದರ ಹೊರತಾಗಿ ವಿದ್ಯಾರ್ಥಿಗಳು ನಡೆಸಿದ ಅಧ್ಯಯನದ ಪ್ರಕಾರ ಜಂಕ್ ಫುಡ್ ಸೇವನೆಯ ಇತರ ಆರೋಗ್ಯ ಅಪಾಯಗಳು ಸ್ಥೂಲಕಾಯತೆ ಮತ್ತು ಅಧಿಕ ತೂಕವು ಆರಂಭಿಕ ಹದಿಹರೆಯಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಪ್ರಾಜೆಕ್ಟ್‌ನಲ್ಲಿ ಸಾರಲಾಗಿದೆ.