ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಂದಾಯ ಇಲಾಖೆ ಸೇರಿದಂತೆ ಪ್ರತಿಯೊಂದು ಕಚೇರಿಯಲ್ಲೂ ಜನ ಸಮಾನ್ಯರ ಕೆಲಸವಾಗಬೇಕಿದ್ದರೆ ಇಂತಿಷ್ಟು ಹಣ ನೀಡಲೇಬೇಕು ಎಂಬ ಷರತ್ತಿದೆ. ಕೆಲವೊಮ್ಮೆ ಹಣ ನೀಡಿದರೂ ಕೆಲಸವಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇದನ್ನು ನಿಯಂತ್ರಿಸಬೇಕಿರುವ ಶಾಸಕ ಸಿಮೆಂಟ್ ಮಂಜು ಮೌನ ವಹಿಸಿದ್ದಾರೆ. ಇವರ ಮೌನ ಗಮನಿಸಿದರೆ ಲಂಚದ ಹಣದಲ್ಲೂ ಇವರಿಗೆ ಪಾಲಿದೆ ಎಂಬ ಅನುಮಾನ ಕಾಡುತ್ತಿದೆ. ರಾಜ್ಯ ಸರ್ಕಾರ ನೀಡಿರುವ ಸಾಕಷ್ಟು ಅನುದಾನಗಳು ಕಾಮಗಾರಿ ನಡೆಸದ ಕಾರಣ ವಾಪಸ್ಸಾಗುತ್ತಿದೆ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ವಿಫಲರಾಗಿರುವ ಶಾಸಕರಿಂದ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ಕಾಡಾನೆ ಸಮಸ್ಯೆ ಬಗ್ಗೆ ಗಮನಸೆಳೆಯ ಬೇಕಿರುವ ಶಾಸಕರು ಸದನದಲ್ಲೂ ವಿಫಲರಾಗಿದ್ದಾರೆ. ವರ್ಷಕ್ಕೆ ಕನಿಷ್ಠ ಮೂವರು ಕಾಡಾನೆಗಳಿಗೆ ಬಲಿಯಾಗುತ್ತಿದ್ದರೂ ಶಾಸಕರಿಗೆ ಈ ಬಗ್ಗೆ ಧ್ವನಿ ಎತ್ತಲು ಸಾಧ್ಯವಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಶಾಸಕರ ವೈಫಲ್ಯ, ತಾಲೂಕಿನ ಜ್ವಲಂತ ಸಮಸ್ಯೆಗಳು, ಸರ್ಕಾರಿ ಕಚೇರಿಗಳ ಲಂಚವಾತರದ ಬಗ್ಗೆ ಜನಸ್ಪಂದನ ಕಾರ್ಯಕ್ರಮಕ್ಕೆ ಬರುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೇಳೆಯಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಶಬೀರ್ ಜಾನ್, ಮುಖಂಡರಾದ ತುಳಸಿ ಪ್ರಸಾದ್, ಸಫೀರ್, ಧರ್ಮ ಉಪಸ್ಥಿತರಿದ್ದರು.