ಕನ್ನಡಪ್ರಭ ವಾರ್ತೆ ಮೈಸೂರು
ಕುವೆಂಪುನಗರ ಸಂಚಾರ ಪೊಲೀಸ್ ಠಾಣೆಯ ಎಸ್ಐ ಮದನ್ ಕುಮಾರ್ ಉದ್ಘಾಟನೆ ಮಾತನಾಡಿ, ಮನುಷ್ಯನ ಜೀವ ಅತ್ಯಮೂಲ್ಯ. ವಾಹನ ಚಾಲಕರು ಸಂಚಾರ ನಿಯಮವನ್ನು ತಪ್ಪದೇ ಪಾಲಿಸಬೇಕು. ಸಂಚಾರ ನಿಯಮದ ಉಲ್ಲಂಘನೆಯಿಂದ ಪ್ರಾಣಾಪಾಯ ಸಂಭವಿಸುತ್ತದೆ. ಆದ್ದರಿಂದ ಸಂಚಾರ ನಿಯಮವನ್ನು ಅರಿತು ಇತರರಿಗೂ ಅದರ ಅರಿವನ್ನು ನೀಡಬೇಕು. ಚಾಲನೆ ರಹದಾರಿ ಪತ್ರ ಇಲ್ಲದೆ ಹಾಗೂ ಹೆಲ್ಮೆಟ್ ರಹಿತ ಚಾಲನೆ ಸರ್ವಥಾ ಅಪರಾಧ ಎಂದು ಎಚ್ಚರಿಕೆ ನೀಡಿದರು.
ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದಾಗ ನಿಮ್ಮ ಸಹಾಯ ಹಸ್ತವನ್ನು ಚಾಚಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.ಕಡ್ಡಾಯವಾಗಿ ಸೀಟ್ ಬೆಲ್ಟನ್ನು ಧರಿಸುವುದರಿಂದ ಆಗುವ ಅನಾಹುತವನ್ನು ತಪ್ಪಿಸಬಹುದು. ಸುರಕ್ಷಿತ ಚಾಲನೆ ಜೀವದ ಸಂರಕ್ಷಣೆ ಎಂಬುದು ನಿಮ್ಮ ಗಮನದಲ್ಲಿರಲಿ. 18 ವರ್ಷ ವಯೋಮಿತಿ ದಾಟಿದ ವಾಹನ ಪರವಾನಗಿಯನ್ನು ಹೊಂದಿದ ಸವಾರರು ನಗರ ಪ್ರದೇಶಗಳಲ್ಲಿ ವೇಗಮಿತಿಯನ್ನು ಗಮನಿಸಿ ವಾಹನವನ್ನು ಚಲಾಯಿಸಬೇಕು. ರಸ್ತೆ ನಿಯಮಗಳನ್ನು ಮತ್ತು ಸಂಚಾರಿ ಪೊಲೀಸ್ ಸೂಚನೆಗಳನ್ನು ತಪ್ಪದೇ ಪಾಲಿಸಬೇಕೆಂದು ತಿಳಿಸಿದರು.
ವಿಜಯವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯ. ಸಂಚಾರಿ ನಿಯಮಗಳ ಅರಿವಿನೊಂದಿಗೆ ಇಂದಿನ ವಿದ್ಯಾರ್ಥಿಗಳು ರಸ್ತೆಯಲ್ಲಿ ಉಂಟಾಗುವ ಅಪಘಾತಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಸಂಚಾರ ಸಹಾಯಕ ಉಪ ಪೋಲೀಸ್ ನಿರೀಕ್ಷಕ ಆನಂದ್, ಭಜಂತ್ರಿ, ಮನೋರಂಜನ್ ಇದ್ದರು.