ಕಲ್ಲುಕುಟಿಕರ ನೆರವಿಗೆ ಯೋಜನೆ: ಸಚಿವ

KannadaprabhaNewsNetwork |  
Published : Jan 15, 2025, 12:46 AM IST
ಎಂಸಿಎಸ್ | Kannada Prabha

ಸಾರಾಂಶ

ನಗರ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರಿಸಲು ೧೧೦ ಹಳ್ಳಿಗಳನ್ನು ಗುರ್ತಿಸಲಾಗಿದೆ. ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವು ಪ್ರದೇಶಗಳು ಇದರಲ್ಲಿವೆ. ತಾಲೂಕಿನ ರಾಂಪುರ ಗ್ರಾಮದಲ್ಲಿ ಸಿಮೆಂಟ್ ರಸ್ತೆ ಮೂಲಭೂತ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆ, ಕೆರೆಗೆ ಕೆರೆಗೆ ಕೆಸಿವ್ಯಾಲಿ ನೀರಿನ ವ್ಯವಸ್ಥೆ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ತಂತ್ರಜ್ಞಾನ, ಅಧಿಕಾರಿಕಾರಿಗಳು ಹಾಗೂ ಅರಣ್ಯ ಪ್ರದೇಶ ಒತ್ತುವರಿ ಕಾರಣದಿಂದಾಗಿ ಕಲ್ಲು ಗಣಿಗಾರಿಕೆಗೆ ಅಡ್ಡಿಯಾಗಿದ್ದು, ಸರ್ಕಾರ ಸಣ್ಣ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆಗೆ ಅ‍ಕಾಶ ಮಾಡಿಕೊಟ್ಟಿದೆ. ಕಲ್ಲುಕುಟಿಕರಿಗೆ ಕಲ್ಲು ಒಡೆಯಲು ನೆರವಾಗುವಂತಹ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಭರವಸೆ ನೀಡಿದರು.

ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮಹಾನ್ ವ್ಯಕ್ತಿಗಳ ಆದರ್ಶಗಳ ತತ್ವಗಳನ್ನು ಪಾಲನೆ ಮಾಡುವ ಮೂಲಕ ಎಲ್ಲರೂ ಒಗ್ಗಟ್ಟಿಮದ ಬಾಳಬೇಕು ಹಾಗೂ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರಿ

ಚಿಂತಾಮಣಿ ನಗರ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರಿಸಲು ೧೧೦ ಹಳ್ಳಿಗಳನ್ನು ಗುರ್ತಿಸಲಾಗಿದೆ. ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವು ಪ್ರದೇಶಗಳು ಇದರಲ್ಲಿವೆ. ತಾಲೂಕಿನ ರಾಂಪುರ ಗ್ರಾಮದಲ್ಲಿ ಸಿಮೆಂಟ್ ರಸ್ತೆ ಮೂಲಭೂತ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆ, ಕೆರೆಗೆ ಕೆರೆಗೆ ಕೆಸಿವ್ಯಾಲಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು. ಭೋವಿ ಜನಾಂಗದ ಕೊಡುಗೆ

ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಮುನಿರೆಡ್ಡಿ ಶಿವಯೋಗಿಗಳ ವಚನದ ಮಹತ್ವ ಅದರ ಒಳಿತು ಬಗ್ಗೆ ತಿಳಿಸಿ, ಬೋವಿ ಜನಾಂಗದವರು ಕೆರೆಗಳ ಅಭಿವೃದ್ಧಿಗೆ ತಮ್ಮದೆ ಆದಾ ಕೊಡುಗೆಯನ್ನು ನೀಡಿದ್ದು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅನೇಕ ಕೆರೆಗಳಿದ್ದು ಅವುಗಳ ನಿರ್ಮಾಣದಲ್ಲಿ ಬೋವಿ ಸಮುದಾಯದ ಪ್ರಮುಖ ಪಾತ್ರ ವಹಿಸಿದೆಯೆಂರು.

ಅನ್ನದಾಸೋಹ, ಬಡವರಿಗೆ, ವಿದ್ಯಾದಾನ, ನೊಂದವರಿಗೆ ಸಹಾಯ ಮಾಡಬೇಕು, ಸಾಮಾಜಿಕ ಕಳಕಳಿ ಇರಬೇಕು, ಅದರಂತೆ ಮಹನೀಯರ ಅಥವಾ ಸಾಧಕರ ಸೇವೆಯನ್ನು ಸ್ಮರಿಸಿ ಸಮಾಜದ ಒಳತಿಗಾಗಿ ದುಡಿಯಬೇಕು. ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಆಡುಭಾಷೆಯಲ್ಲಿ ಬರೆದಿರುವುದೇ ವಚನ ಸಾಹಿತ್ಯ. ಜಾತಿಪದ್ಧತಿ ನಿರ್ಮೂಲನೆ ಮಾಡುವುದರ ಮೂಲಕ ಜಾತ್ಯತೀತ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು ಎಂದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ನೂತನ ಶಾಲೆಯ ವಿದ್ಯಾರ್ಥಿನಿಯರಾದ ಕಲ್ಯಾಣಿ ಮತ್ತು ಭಾಗ್ಯಲಕ್ಷ್ಮೀ ಪ್ರಾರ್ಥನಾ ಗೀತೆ ಹಾಡಿದರು, ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಎಂ.ಕಾಂನಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಹಿರಿಯರನ್ನು ಹಾಗೂ ವೇದಿಕೆಯಲ್ಲಿ ನೆರದಿದ್ದ ಗಣ್ಯರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಜಿ.ಪಂ. ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ತಹಶೀಲ್ದಾರ್ ಸುದರ್ಶನ್ ಯಾದವ್, ತಾ.ಪಂ. ಇಒ ಎಸ್ ಆನಂದ್, ಡಿವೈಎಸ್ ಪಿ ಮುರಳೀಧರ್, ಬಿಇಒ ಉಮಾದೇವಿ, ಪೌರಾಯುಕ್ತ ಜಿ.ಎನ್. ಚಲಪತಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್ ರೆಡ್ಡಿ (ಬಾಬುರೆಡ್ಡಿ) ಕೃಷಿಕ ಸಮಾಜ ಅಧ್ಯಕ್ಷ ಜಿ.ಸಿ.ಜಯರಾಮರೆಡ್ಡಿ, ಟಿಎಪಿಎಂಸಿಎಸ್ ಅಧ್ಯಕ್ಷ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು